Advertisement

ಯೋಗ ಮತ್ತು ಆಯುರ್ವೇದ ಜಗತ್ತಿಗೆ ಹೊಸ ಭರವಸೆ : ಪ್ರಧಾನಿ ಮೋದಿ

05:21 PM Dec 11, 2022 | Team Udayavani |

ಪಣಜಿ : ಗೋವಾದಲ್ಲಿ 3 ರಾಷ್ಟ್ರೀಯ ಆಯುಷ್ ಸಂಸ್ಥೆಗಳನ್ನು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು ಅಖಿಲ ಭಾರತ ಆಯುರ್ವೇದ ಸಂಸ್ಥೆ (AIIA), ಗೋವಾ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಯುನಾನಿ ಮೆಡಿಸಿನ್ (NIUM), ಗಾಜಿಯಾಬಾದ್ ಮತ್ತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮಿಯೋಪತಿ (NIH) ದೆಹಲಿ ಸಂಸ್ಥೆಗಳಿಗೆ ಚಾಲನೆ ನೀಡಲಾಯಿತು.

Advertisement

ಪಣಜಿಯಲ್ಲಿ ನಡೆದ 9 ನೇ ವಿಶ್ವ ಆಯುರ್ವೇದ ಕಾಂಗ್ರೆಸ್ (ಡಬ್ಲ್ಯುಎಸಿ) ನ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ , ಈ 3 ಸಂಸ್ಥೆಗಳು ಆಯುಷ್ ಆರೋಗ್ಯ ವ್ಯವಸ್ಥೆಗೆ ವೇಗ ನೀಡಲಿವೆ. 30 ಕ್ಕೂ ಹೆಚ್ಚು ದೇಶಗಳು ಆಯುರ್ವೇದವನ್ನು ಸಾಂಪ್ರದಾಯಿಕ ಔಷಧ ಪದ್ಧತಿಯಾಗಿ ಗುರುತಿಸಿವೆ. ನಾವು ಇತರ ದೇಶಗಳಲ್ಲಿಯೂ ಆಯುರ್ವೇದವನ್ನು ಪ್ರಚಾರ ಮಾಡಬೇಕಾಗಿದೆ ಎಂದರು.

”ಆಯುರ್ವೇದವು ಕೇವಲ ಚಿಕಿತ್ಸೆಯಲ್ಲ, ಅದು ಆರೋಗ್ಯವನ್ನು ಉತ್ತೇಜಿಸುತ್ತದೆ. ಯೋಗ ಮತ್ತು ಆಯುರ್ವೇದ ಜಗತ್ತಿಗೆ ಹೊಸ ಭರವಸೆ. ನಾವು ಆಯುರ್ವೇದದ ಫಲಿತಾಂಶವನ್ನು ಹೊಂದಿದ್ದೇವೆ, ಆದರೆ ನಾವು ಪುರಾವೆಗಳ ವಿಷಯದಲ್ಲಿ ಹಿಂದುಳಿದಿದ್ದೇವೆ. ಆದ್ದರಿಂದ, ಇಂದು ನಾವು ‘ದತ್ತಾಂಶ ಆಧಾರಿತ ಪುರಾವೆಗಳ’ ದಾಖಲೀಕರಣವನ್ನು ಮಾಡಬೇಕಾಗಿದೆ” ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರು ಆಯುರ್ವೇದಕ್ಕೆ ಜಾಗತಿಕ ವ್ಯಾಪ್ತಿಯನ್ನು ನೀಡಿದ್ದಾರೆ. ರಾಜ್ಯದ ಆಯುಷ್ ವೈದ್ಯರಿಗಾಗಿ ಗೋವಾದಲ್ಲಿ ಆಯುಷ್ ಸಚಿವಾಲಯವನ್ನು ರಚಿಸುವುದಾಗಿ ಇಂದು ನಾನು ಘೋಷಿಸುತ್ತಿದ್ದೇನೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next