Advertisement

ಪ್ರಧಾನಿ ಕರೆ : ದೀಪಾವಳಿಗೆ ಖಾದಿ ಕೂಪನ್‌ ನೀಡಿ

08:05 AM Aug 23, 2017 | Team Udayavani |

ನವದೆಹಲಿ: ದೀಪಾವಳಿಗೆ ಖಾದಿ ಕೂಪನ್‌ಗಳನ್ನು ಖರೀದಿಸಿ ಉಡುಗೊರೆಯಾಗಿ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಉದ್ಯಮಿಗಳಿಗೆ ಕರೆ ನೀಡಿದ್ದಾರೆ. ನೀತಿ ಆಯೋಗ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಯುವ ಸಿಇಒಗಳನ್ನುದ್ದೇಶಿಸಿ ಮಾತನಾಡಿದ ಅವರು, ವಸ್ತುಗಳನ್ನು ಖರೀದಿಸಲು ಕೂಪನ್‌ ನೀಡುವ ರೀತಿಯಲ್ಲಿ ಖಾದಿ ಖರೀದಿಸಲು ಕೂಪನ್‌ಗಳನ್ನು ಕಾಣಿಕೆಯಾಗಿ ನೀಡಬೇಕು. ಈ ಮೂಲಕ ಖಾದಿ ಉದ್ಯಮ ಪ್ರೋತ್ಸಾಹಿಸುವ ವಾತಾವರಣ ಸೃಷ್ಟಿಸಿ ಬಡವರಿಗೆ ನೆರವಾಗಬೇಕು ಎಂದು ಕೋರಿದ್ದಾರೆ.

Advertisement

ಯುವ ಉದ್ಯಮಿಗಳು ದೇಶವನ್ನು ಅಭಿವೃದ್ಧಿಪಥದಲ್ಲಿ ಕೊಂಡೊಯ್ಯವ ಯೋಧರಾಗಬೇಕು. ವಸ್ತುಗಳ ಆಮದು ಕಡಿಮೆ ಮಾಡಲು ನೆರವಾಗಬೇಕು. ನಗದು ರಹಿತ ಆರ್ಥಿಕತೆ ಸೃಷ್ಟಿಸಬೇಕು. ಕೃಷಿ ಉತ್ಪನ್ನ ಹೆಚ್ಚಿಸಲು ಹಾಗೂ ಪ್ರವಾಸೋದ್ಯಮ ಪ್ರೋತ್ಸಾಹಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ದೊರಕಿಸಲು ಅಂದು ಸಾಮೂಹಿಕ ಹೋರಾಟ ನಡೆಸಿದ ರೀತಿಯಲ್ಲಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು. ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲರೂ ಜೊತೆಗೂಡಿ ಕೆಲಸ ಮಾಡಬೇಕು. ನಗದುರಹಿತ ಸಮಾಜ ಸೃಷ್ಟಿಸಲು ಸಿಇಒಗಳು ಭೀಮ್‌ ಆ್ಯಪ್‌ಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಯೋಜನಾ ಆಯೋಗದ ಬದಲು ರಚಿಸಿದ ನೀತಿ ಆಯೋಗಕ್ಕೆ ಅರವಿಂದ್‌ ಪನಗಾರಿಯಾ ಅವರು 3 ವರ್ಷಗಳ ಕಾಲ ಅದ್ಭುತವಾಗಿ ಕೆಲಸ ಮಾಡುವ ಮೂಲಕ ಸಂಸ್ಥೆಗೆ ಹೊಸ ಪ ತಂದುಕೊಟ್ಟರು. ಇವರ ಕೊಡುಗೆಯನ್ನು ದೇಶ ಯಾವಾಗಲೂ ಸ್ಮರಿಸುತ್ತದೆ.
– ನರೇಂದ್ರ ಮೋದಿ, ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next