Advertisement

ಭಾರತ, ಇಸ್ರೇಲ್ 9 ಒಪ್ಪಂದಕ್ಕೆ ಸಹಿ; ಮೋದಿ ಕ್ರಾಂತಿಕಾರಿ ನಾಯಕ

05:55 PM Jan 15, 2018 | Sharanya Alva |

ನವದೆಹಲಿ: ಭಾರತವನ್ನು ಮಹತ್ತರ ಬದಲಾವಣೆಯತ್ತ ಕೊಂಡೊಯ್ಯುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕ್ರಾಂತಿಕಾರಿ ನಾಯಕ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹಾಡಿ ಹೊಗಳಿದರು.

Advertisement

ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧದಲ್ಲಿ ಮಹತ್ವವೆನಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ಅವರು ಭಾನುವಾರದಿಂದ ಆರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಸೋಮವಾರ ನವದೆಹಲಿಯ ಹೈದ್ರಾಬಾದ್ ನಿವಾಸದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿ ಉಭಯ ದೇಶಗಳು ಮಹತ್ವದ 9 ಒಪ್ಪಂದಗಳಿಗೆ ಸಹಿ ಹಾಕಿದರು. ಬಳಿಕ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ಮಾತನಾಡಿದರು.

ಸೈಬರ್ ಭದ್ರತೆ, ತೈಲ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಒಂಬತ್ತು ಮಹತ್ವ ಒಪ್ಪಂದಗಳಿಗೆ ಪ್ರಧಾನಿ ಮೋದಿ ಮತ್ತು ನೆತನ್ಯಾಹು ಸಹಿ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next