Advertisement
ರಾಜ್ಯ ಸರಕಾರದ ನಿರಾಸಕ್ತಿಯೇ ಇದಕ್ಕೆ ಕಾರಣ ಎಂಬ ಆಪಾದನೆ ಕೇಳಿಬಂದಿದೆ. ಆರಂಭದಲ್ಲಿ ಕೇವಲ 17 ಮಂದಿ ಮಾತ್ರ ಆಯ್ಕೆಯಾಗಿದ್ದರು ಎನ್ನಲಾಗಿದೆ. ಪ್ರಸ್ತುತ ಹೀಗಾಗಲು ಕಾರಣ ರಾಜ್ಯವೇ ಕೇಂದ್ರವೇ ಎಂಬುದು ಚಾಲ್ತಿಯಲ್ಲಿದೆ.
ಮೇ 13ರಂತೆ ಉತ್ತರ ಪ್ರದೇಶ 1 ಕೋಟಿ, ಆಂಧ್ರಪ್ರದೇಶ 32 ಲಕ್ಷ, ಗುಜರಾತ್ 27 ಲಕ್ಷ, ತೆಲಂಗಾಣ 18 ಲಕ್ಷ, ತಮಿಳು ನಾಡು 19 ಲಕ್ಷ, ಮಹಾರಾಷ್ಟ್ರ, 14 ಲಕ್ಷ, ಪಂಜಾಬ್ 11, ಅಸ್ಸಾಂ, ಹರ್ಯಾಣ, ಕೇರಳ ತಲಾ 9 ಲಕ್ಷ, ಒರಿಸ್ಸಾ 8 ಲಕ್ಷ, ಜಾರ್ಖಂಡ್, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ತಲಾ 4 ಲಕ್ಷ, ಉತ್ತರಾಖಂಡದ ತಲಾ 3 ಲಕ್ಷ ರೈತರ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ವೆಬ್‌ಸೈಟ್‌ನಲ್ಲಿ ಮಾಹಿತಿ ನೀಡಲಾಗಿದೆ. ಕೇಂದ್ರದ ಈ ಮಾಹಿತಿಯಂತೆ ಕನಿಷ್ಠ ಸಂಖ್ಯೆಯ ರೈತರ ಹೆಸರು ಶಿಫಾರಸು ಆದದ್ದು ಕರ್ನಾಟಕದಿಂದ. ಆಗ ರಾಜ್ಯದ 17 ಮಂದಿಯ ಹೆಸರಷ್ಟೇ ಇತ್ತು. ಈಗಲೂ ದೊಡ್ಡ ರಾಜ್ಯಗಳ ಪೈಕಿ ಕನಿಷ್ಠ ರೈತರ ಸಂಖ್ಯೆ ಕರ್ನಾಟಕದ್ದು. ಇದಕ್ಕಾಗಿ ಅರ್ಜಿ ಸಲ್ಲಿಸಲು ಹಗಲು ರಾತ್ರಿ ಎನ್ನದೇ ರೈತರು ಆರ್‌ಟಿಸಿಗಾಗಿ ಸರತಿ ಸಾಲಿನಲ್ಲಿ ನಿಂತಿದ್ದರು. ಕನಿಷ್ಠ ಎಂದರೂ ಕೆಲವು ಕೋಟಿ ಅರ್ಜಿ ಸಲ್ಲಿಕೆಯಾಗಿದೆ ಎನ್ನಲಾಗಿದೆ. ರಾಜ್ಯ ಸರಕಾರ 60 ಸಾವಿರ ರೈತರ ಹೆಸರು ಕಳುಹಿಸಿದೆ. ಎ. 24ರಂದು ವೆಬ್‌ಸೈಟ್ ಪರಿಶೀಲಿಸಿದಾಗ ಎರಡನೆ ಹಂತದ್ದು ಸೇರಿಸಿ ದೇಶದ 2.91 ಕೋಟಿ ರೈತರು ಫಲಾನುಭವಿಗಳಾಗಿದ್ದು, ಕರ್ನಾಟಕದ 16,522 ಮಂದಿ ಆಯ್ಕೆಯಾಗಿದ್ದಾರೆ. ಇವರಲ್ಲಿ ದ.ಕ.ದ 148, ಉಡುಪಿಯ 412, ಚಿಕ್ಕಮಗಳೂರಿನ 226, ಮಡಿಕೇರಿಯ 34, ಶಿವಮೊಗ್ಗದ 717 ಮಂದಿ ಇದ್ದಾರೆ. ಹಾಸನ, ತುಮಕೂರಿನಿಂದ ಅತಿಹೆಚ್ಚು ರೈತರಿದ್ದಾರೆ.
Related Articles
ಡಿ.1ರಿಂದ ಫೆ.1ರ ನಡುವೆ ಅರ್ಜಿ ಸಲ್ಲಿಸಿದ ರೈತರ ಹೆಸರನ್ನು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿ ಕಳುಹಿಸಬೇಕಿತ್ತು. ವರ್ಷಕ್ಕೆ 6 ಸಾವಿರ ರೂ.ಗಳನ್ನು ರೈತರ ಖಾತೆಗಳಿಗೆ ಕೇಂದ್ರ ಹಂತಹಂತವಾಗಿ ಜಮೆ ಮಾಡಲಿದೆ. ಮಾ.31ಕ್ಕೆ ಮೊದಲ ಹಂತದ ಪಾವತಿ ಗಡುವಾಗಿದ್ದು, 2 ಸಾವಿರ ರೂ. ಪಾವತಿಯಾಗಿದೆ. ಜನರು ಮೈಲುದ್ದ ನಿಂತಾಗಲೂ ಭೂಮಿ ಸರ್ವರ್ ನ ಮಂದಗತಿಯ ಕಾರಣದಿಂದ ಆರ್‌ಟಿಸಿ ಸಿಗದಂತಾಗಿತ್ತು ಎಂಬ ದೂರು ವ್ಯಕ್ತವಾಗಿದೆ.
Advertisement
ಜೇಟ್ಲಿ ಟ್ವೀಟ್ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಟ್ವಿಟರ್‌ನಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ದಿಲ್ಲಿ, ಪ.ಬಂಗಾಲ ಮತ್ತು ಕರ್ನಾಟಕ ಸರಕಾರಗಳು ರೈತರ ಹೆಸರು ನೀಡದೆ ಯೋಜನೆಗೆ ಅಸಹಕಾರ ನೀಡಿವೆ. ಯೋಜನೆ ಇದರಿಂದಾಗಿ ಈ ರಾಜ್ಯಗಳ ಜನರಿಗೆ ತಲುಪದಂತಾಗಿದೆ ಎಂದು ಈ ಹಿಂದೆ ಟ್ವೀಟ್ ಮಾಡಿದ್ದರು. ಕರ್ನಾಟಕ 60 ಸಾವಿರ ರೈತರ ಹೆಸರು ಕಳುಹಿಸಿದೆ, ಮಧ್ಯಪ್ರದೇಶ 298 ರೈತರ ಹೆಸರು ಕಳುಹಿಸಿದ್ದರೆ, ಪ. ಬಂಗಾಲ ಹೆಸರು ಕಳುಹಿಸಿಲ್ಲ ಎಂಬ ಟ್ವೀಟ್ ಇದೆ. ಲಕ್ಷ್ಮೀ ಮಚ್ಚಿನ