Advertisement

ಸೇನೆ ಬಲಪಡಿಸಲು ಅಗ್ನಿವೀರ ಯೋಜನೆ: ಅಗ್ನಿವೀರರ ಜತೆ ಸಂವಾದದಲ್ಲಿ ಪ್ರಧಾನಿ

12:38 AM Jan 17, 2023 | Team Udayavani |

ಹೊಸದಿಲ್ಲಿ: ಭವಿಷ್ಯದ ಯುದ್ಧ ಸನ್ನದ್ಧ ಸ್ಥಿತಿಗೆ ಅನುಗುಣವಾಗಿ ದೇಶದ ಸಶಸ್ತ್ರ ಪಡೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಅಗ್ನಿವೀರ ಯೋ ಜನೆ ಜಾರಿಗೊಳಿಸಲಾಗಿದೆ. ಇದು ದೊಡ್ಡ ಮಟ್ಟದ ಪರಿವರ್ತನೆ ತರಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಗ್ನಿವೀರ‌ರ ಮೊದಲ ತಂಡದೊಂದಿಗೆ ಸೋಮವಾರ ನಡೆದ ಸಂವಾದದಲ್ಲಿ ಪ್ರಧಾನಿಯವರು ಈ ಮಾತುಗಳನ್ನಾಡಿದ್ದಾರೆ.

Advertisement

ಈ ಬಗ್ಗೆ ಕೇಂದ್ರ ಸರಕಾರ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಧಾನಿಯವರು ಮೊದಲ ಹಂತದ ಅಗ್ನಿವೀರ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಸರಕಾರದ ಹೊಸ ಯೋಜನೆಯಿಂದಾಗಿ ಮಹಿಳೆಯರೂ ಹೆಚ್ಚಿನ ರೀತಿಯಲ್ಲಿ ಸಶಕ್ತರಾಗಲಿದ್ದಾರೆ. ಸೇನಾ ಪಡೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮುದಾಯದವರೇ ಇರಲಿರುವುದರಿಂದ ಸೇನೆಗೆ ಯುವಚೈತನ್ಯ ಸಿಗಲಿದೆ ಮತ್ತು ತಾಂತ್ರಿಕವಾಗಿಯೂ ಸೇನೆಯ ಉನ್ನತೀಕರಣ ಸಾಧ್ಯವಾಗಲಿದೆ ಎಂದರು.

ಮುಂದಿನ ದಿನಗಳಲ್ಲಿ ಸೈಬರ್‌ ಯುದ್ಧದಂಥ ಸಂಪರ್ಕ ರಹಿತ ಯುದ್ಧಗಳೇ ನಡೆಯಲಿವೆ. ಯುದ್ಧ ಎನ್ನುವ ಭಾಷ್ಯವೇ ಬದಲಾವಣೆ ಯಾಗಲಿದೆ. ಇಂಥ ಸಂದರ್ಭಗಳಲ್ಲಿ ಸೇನೆಗೆ ನೇಮಕಗೊಳ್ಳುವವರು ತಾಂತ್ರಿಕವಾಗಿ ಹೆಚ್ಚು ಪರಿಣತರಾಗಿರಬೇಕು. ನವ ಭಾರತದಲ್ಲಿ ಸಶಸ್ತ್ರಪಡೆಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಮತ್ತು ಸ್ವಾವಲಂಬಿಯಾಗಿ ಮಾಡಲಾಗುತ್ತಿದೆ ಎಂದೂ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next