Advertisement
ಯೋಜನೆಯ ಒಟ್ಟು ಮೊತ್ತ 100 ಲಕ್ಷ ಕೋಟಿ ರೂ. ಇದೊಂದು ರಾಷ್ಟ್ರೀಯ ಮಾಸ್ಟರ್ ಪ್ಲ್ಯಾನ್ ಆಗಿದ್ದು, ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನುಕೈಗೊಳ್ಳಲಾಗುತ್ತದೆ. ಹೊಸದಿಲ್ಲಿಯ ಪ್ರಗತಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ದೇಶದ ಜನರು ಪಾವತಿ ಮಾಡುವ ತೆರಿಗೆಗೆ ಇದುವರೆಗೆ ಸೂಕ್ತ ನ್ಯಾಯ ಸಿಕ್ಕಿರಲಿಲ್ಲ. ಹಿಂದಿನ ಅವಧಿಗಳಲ್ಲಿ ಸೂಕ್ತ ರೀತಿಯಲ್ಲಿ ಕಾಮಗಾರಿಗಳ ಅನುಷ್ಠಾನಕ್ಕೆ ಉದಾ ಸೀನತೆಯ ಭಾವ ತಳೆಯಲಾಗುತ್ತಿತ್ತು. ಈ ಮೂಲಕ ತೆರಿಗೆದಾರರಿಗೆ ಅವಮಾನವಾಗುವ ಸ್ಥಿತಿ ಇತ್ತು ಎಂದು ಪ್ರತಿಪಾದಿಸಿದ್ದಾರೆ.
Related Articles
Advertisement
ಇದನ್ನೂ ಓದಿ:ಬೆಂಗಳೂರಿನಲ್ಲಿ ಎಂ.ಎಸ್. ಧೋನಿ ಕ್ರಿಕೆಟ್ ಅಕಾಡೆಮಿ
70 ವರ್ಷಗಳಲ್ಲಿ ತಮ್ಮ ನೇತೃತ್ವದ ಸರಕಾರದ ಅವಧಿಯಲ್ಲಿ ವೇಗವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ. ದೇಶದಲ್ಲಿ ಅಂತಾರಾಜ್ಯ ಅನಿಲ ಪೈಪ್‌ಲೈನ್ ಅನ್ನು 1987ರಲ್ಲಿ ಅನುಷ್ಠಾನಗೊಳಿಸಲಾಯಿತು. 2014ರಿಂದ 15 ಸಾವಿರ ಕಿಮೀ ದೂರದಷ್ಟು ನೈಸರ್ಗಿಕ ಅನಿಲ ಪೈಪ್ ಲೈನ್ ಹಾಕಲಾಗಿದೆ. ಸದ್ಯ 16 ಸಾವಿರ ಕಿಮೀಗಿಂತ ಹೆಚ್ಚು ಪೈಪ್‌ಲೈನ್ ಅಳವಡಿಸಲಾಗುತ್ತಿದೆ. 2014ರಿಂದ 2019ರ ಅವಧಿಯಲ್ಲಿ 1,300 ಕಿಮೀ ರೈಲ್ವೇ ಹಳಿಯನ್ನು ದ್ವಿಪಥಕ್ಕೆ ಪರಿವರ್ತಿಸಲಾಗಿದೆ. 7 ವರ್ಷಗಳಲ್ಲಿ 9 ಸಾವಿರ ಕಿಮೀ ರೈಲು ಮಾರ್ಗ ದ್ವಿಪಥ ಗೊಳಿಸಲಾಗಿದೆ. ಮಾತ್ರವಲ್ಲದೆ, ಹಲವು ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳನ್ನೂ ಪ್ರಧಾನಿ ಇದೇ ಸಂದರ್ಭದಲ್ಲಿ ವಿವರಿಸಿದರು.