Advertisement

“ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆ’

10:53 PM May 22, 2022 | Team Udayavani |

ಮೈಸೂರು: ಸಮಾಜದ ಅಭ್ಯುದಯಕ್ಕೆ ಸಾಧು, ಸಂತರು ಪ್ರೇರಣೆಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.

Advertisement

ನಗರದ ಅವಧೂತ ದತ್ತಪೀಠದಲ್ಲಿ ರವಿವಾರ ಆಯೋಜಿಸಿದ್ದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಧಂತಿ ಉತ್ಸವದ ಉದ್ಘಾಟನ ಕಾರ್ಯಕ್ರಮದಲ್ಲಿ ವರ್ಚುವಲ್‌ ವೇದಿಕೆಯಲ್ಲಿ ಸ್ವಾಮೀಜಿ ಅವರಿಗೆ ಶುಭಾಶಯ ಸಲ್ಲಿಸಿ ಮಾತನಾಡಿದರು.

ಸಾಧು, ಸಂತರ ಆಶಯ, ಪ್ರಾಚೀನ ಪರಂಪರೆಯ ಸಂರಕ್ಷಣೆಯೊಂದಿಗೆ ಸಂವರ್ಧನೆಯನ್ನೂ ಮಾಡಬೇಕಿದೆ. ಇವೆಲ್ಲದರ ಜತೆಗೆ ನಾವೀನ್ಯತೆ, ಆಧುನಿಕ ಸಂಸ್ಕೃತಿಯನ್ನೂ ಬಲಪಡಿಸಬೇಕಾಗಿದೆ. ಭಾರತವು ಯೋಗ ಮತ್ತು ಯುವಜನರ ತಾಣ. ಈ ಎಲ್ಲ ಸಮ್ಮಿಲನದೊಂದಿಗೆ ಹೊಸ ಭವಿಷ್ಯ ಕಟ್ಟಿಕೊಳ್ಳಬೇಕಾಗಿದೆ. ನವ ಸಂಕಲ್ಪಕ್ಕೂ ಕಟಿಬದ್ಧವಾಗಬೇಕಿದೆ, ಆಧ್ಯಾತ್ಮ, ಪ್ರಕೃತಿ, ವಿಜ್ಞಾನ ಮತ್ತು ತಂತ್ರಜ್ಞಾನದ ಸಮಾಗಮವೇ ಪ್ರಗತಿಶೀಲ ಭಾರತದ ಆತ್ಮ ಎಂದು ವಿವರಿಸಿದರು.

ಆಧ್ಯಾತ್ಮಿಕತೆ, ಆಧುನಿಕತೆಗೆ ಸ್ಫೂರ್ತಿ
ಸಾಧು ಸಂತರ ಜನ್ಮವೂ ಕೇವಲ ಜೀವನಯಾತ್ರೆಯಷ್ಟೇ ಅಲ್ಲ, ಅದು ಸಮಾಜದ ಉತVನನವಾಗಿದೆ. ಜನ ಕಲ್ಯಾಣ ಕಾಯಕವಾಗಿದೆ. ಇದಕ್ಕೆ ಗಣಪತಿ ಸಚ್ಚಿದಾನಂದ ಶ್ರೀಗಳ ಜೀವನವೇ ಒಂದು ಸಾಕ್ಷಿ. ಶ್ರೀಗಳು ಆಧ್ಯಾತ್ಮಿಕತೆ, ಆಧುನಿಕತೆಗೆ ಸ್ಫೂರ್ತಿಯಾಗಿದ್ದು, ಎರಡು ಸಂಸ್ಕೃತಿಗಳ ಸಮತೋಲದ ಬೆಳವಣಿಗೆ ಶ್ರೀಗಳ ಆಶ್ರಮದಲ್ಲಿ ಗೋಚರವಾಗುತ್ತದೆ ಎಂದು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಮಾತನಾಡಿದರು. ಕಿರಿಯ ಶ್ರೀಗಳಾದ ಶ್ರೀದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಶ್ರೀಅಹೋಬಲ ಸ್ವಾಮೀಜಿ, ಮೇಯರ್‌ಸುನಂದಾ ಫಾಲನೇತ್ರ, ಶಾಸಕ ನಾಗೇಂದ್ರ, ಮುಡಾ ಅಧ್ಯಕ್ಷ ಎಚ್‌.ವಿ.ರಾಜೀವ್‌, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಇದ್ದರು.

Advertisement

ಆನಂದವೇ ಪರಬ್ರಹ್ಮ, ಇದನ್ನು ತಿಳಿಯಬೇಕಾದರೆ ಸತ್ಕಾರ್ಯ ಮಾಡಬೇಕಿದೆ. ನಾನು ಆನಂದವನ್ನು ಅನುಭವಿಸುತ್ತಿದ್ದೇನೆ. ನೀವೂ ಕೂಡಾ ಸತ್ಕಾರ್ಯಗಳ ಮೂಲಕ ಆನಂದ ಪಡೆಯಿರಿ. ಎಲ್ಲರೂ ಒಳ್ಳೆಯ ಗುಣ ಕಲಿಯಿರಿ, ಸತ್ಕಾರ್ಯ ಮೈಗೂಡಿಸಿಕೊಳ್ಳಬೇಕು.
– ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ

Advertisement

Udayavani is now on Telegram. Click here to join our channel and stay updated with the latest news.

Next