Advertisement

ಅಂಬಿ ಕುಟುಂಬದ ವಿರುದ್ಧ ಸಂಚು: ಸುಮಲತಾ ಆರೋಪ

10:52 PM Apr 09, 2019 | Team Udayavani |

ಮಂಡ್ಯ: ಹೈವೋಲ್ಟೇಜ್‌ ಕ್ಷೇತ್ರ ಮಂಡ್ಯದಲ್ಲಿ ಮಾತಿನಬ್ಬರ ಮುಂದುವರಿದಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಜೆಡಿಎಸ್‌ ವಿರುದ್ಧ ಹೊಸ ಬಾಂಬ್‌ ಸಿಡಿಸಿದ್ದು, “ಜೆಡಿಎಸ್‌ನವರು ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಕುಟುಂಬದ ವಿರುದ್ಧ ದಾಳಿ ನಡೆಸುವುದಕ್ಕೆ ಒಳಸಂಚು ನಡೆಸಿದ್ದಾರೆ’ ಎಂದು ದೂರಿದ್ದಾರೆ.

Advertisement

ಆದರೆ ಇದಕ್ಕೆ ತಿರುಗೇಟು ನೀಡಿರುವ ಸಚಿವ ಸಿ.ಎಸ್‌.ಪುಟ್ಟರಾಜು, “ಅಂಬರೀಶ್‌ ಕುಟುಂಬದ ವಿರುದ್ಧ ನೌಕರರ ಮೂಲಕ ಕೆಟ್ಟದ್ದಾಗಿ ಹೇಳಿಸುವ ದುರ್ಗತಿ ನಮಗೆ ಬಂದಿಲ್ಲ’ ಎಂದು ಹೇಳಿದ್ದಾರೆ.

ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ. ಹೊಸೂರು ಗ್ರಾಮದಲ್ಲಿ ಸುಮಲತಾ ಸುದ್ದಿಗಾರರೊಂದಿಗೆ ಮಾತನಾಡಿ, “ಅಂಬಿ ಕುಟುಂಬದ ಆಪ್ತರಿಗೆ ಹಣ, ವಿದೇಶ ಪ್ರವಾಸ, ನಿವೇಶನದ ಆಸೆ ತೋರಿಸಿ ಅಂಬರೀಶ್‌ ಕುಟುಂಬದ ವಿರುದ್ಧ ದಾಳಿ ನಡೆಸುವ ತಂತ್ರಗಾರಿಕೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

ಸುಳ್ಳು ಹೇಳುವುದನ್ನು ಕಡಿಮೆ ಮಾಡಿ: ಈ ನಡುವೆ ಸುಮಲತಾ ಆರೋಪಕ್ಕೆ ಪ್ರತಿಕ್ರಿಯಿಸಿರುವ ಸಚಿವ ಪುಟ್ಟರಾಜು, ಸುಮಲತಾ ಸುಳ್ಳು ಹೇಳುವುದನ್ನು ಕಡಿಮೆ ಮಾಡಿ ಜನರ ಮಧ್ಯೆ ಹೋಗಲಿ. ಐಟಿ ರೇಡ್‌ ಆಗುವುದು ಅವರಿಗೆ ಗೊತ್ತಾಗುತ್ತೆ,

ಮುಂದೆ ಇಂತಹ ಸನ್ನಿವೇಶಗಳು ನಡೆಯುತ್ತವೆ ಎನ್ನುವುದೂ ಗೊತ್ತಾಗುತ್ತದೆ. ಅವರೇನು ಅಂಜನ ಇಟ್ಟುಕೊಂಡಿದ್ದಾರಾ? ಇವೆಲ್ಲವನ್ನೂ ಬಿಟ್ಟು ನೇರವಾಗಿ ಚುನಾವಣೆ ಮಾಡಲಿ, ಮಂಡ್ಯ ಜನ ಮುಠ್ಠಾಳರೇನಲ್ಲ ಎಂದು ತಿರುಗೇಟು ನೀಡಿದ್ದಾರೆ.

Advertisement

ಟೀಕೆ, ಆರೋಪಗಳನ್ನೇ ಸುಮಲತಾ ಜೆಡಿಎಸ್‌ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದರು. ಪ್ರಚಾರದ ಸಮಯದಲ್ಲಿ ಒಮ್ಮೆಯೂ ಅಭಿವೃದ್ಧಿ ಬಗ್ಗೆ ಮಾತನಾಡಿರಲಿಲ್ಲ. ಅವರಿಗೆ ಅಭಿವೃದ್ಧಿ ಬೇಕಿಲ್ಲ. ಅಧಿಕಾರ ಬೇಕಷ್ಟೇ.
-ನಿಖಿಲ್‌ ಕುಮಾರಸ್ವಾಮಿ, ಮೈತ್ರಿ ಅಭ್ಯರ್ಥಿ

ನಿಖಿಲ್‌ ಅವರಿಗೆ ಇನ್ನೂ ವಯಸ್ಸು ಚಿಕ್ಕದು. ಸಾಧಕ ನಟರ ಬಗ್ಗೆ ಗೌರವವಿಲ್ಲದೆ ಅಹಂಕಾರದ ಮಾತುಗಳನ್ನಾಡುವುದು ಅವರಿಗೆ ಶೋಭೆ ತರುವುದಿಲ್ಲ.
-ಸುಮಲತಾ, ಪಕ್ಷೇತರ ಅಭ್ಯರ್ಥಿ

ರಾಜ್ಯದಲ್ಲಿ ಸಾಕಷ್ಟು ರೈತರಿದ್ದಾರೆ. ಇಲ್ಲಿ ಮಾತ್ರ ಅಲ್ಲ, ಉತ್ತರ ಕರ್ನಾಟಕದಲ್ಲೂ ಇದ್ದಾರೆ. ಜನರಿಗಾಗಿ, ರೈತರಿಗಾಗಿ ನಾನೇನು ಮಾಡಿದ್ದೇನೆ ಎನ್ನುವುದನ್ನು ಕೊಪ್ಪಳ ಜಿಲ್ಲೆಯ ಜನತೆಯನ್ನು ಹೋಗಿ ಕೇಳಿದರೆ ಗೊತ್ತಾಗುತ್ತದೆ.
-ಯಶ್‌, ನಟ

ಜೆಡಿಎಸ್‌ನವರಂತೆ ಕುತಂತ್ರ ರಾಜಕಾರಣವನ್ನು ನಾವು ಮಾಡುವುದಿಲ್ಲ. ಅವರು ಎಷ್ಟೇ ಕೆಳಮಟ್ಟಕ್ಕಿಳಿದು ರಾಜಕಾರಣ ಮಾಡಿದರೂ ಸರಿ. ಒಳ್ಳೆಯ ರಾಜಕಾರಣ ಮಾಡಬೇಕೆನ್ನುವುದು ನನ್ನ ತಾಯಿ ಆಸೆ. ಅವರ ಆಶಯದಂತೆ ನಡೆಯುವುದು ನಮ್ಮ ಕೆಲಸ.
-ಅಭಿಷೇಕ್‌, ಅಂಬರೀಶ್‌ ಪುತ್ರ

Advertisement

Udayavani is now on Telegram. Click here to join our channel and stay updated with the latest news.

Next