Advertisement

ಪ್ರತಿಜ್ಞಾ ಕಾರ್ಯಕ್ರಮ: ಆಯ್ದ ನಾಯಕರಿಗೆ ಮಾತ್ರ

07:29 AM Jul 02, 2020 | Lakshmi GovindaRaj |

ಬೆಂಗಳೂರು: ಡಿ.ಕೆ.ಶಿವಕುಮಾರ್‌ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಆಯ್ದ 150 ನಾಯಕರಿಗೆ ಮಾತ್ರ ಪ್ರವೇಶ ಕಲ್ಪಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಕಾರ್ಯಕ್ರಮಕ್ಕೆ ಆಗಮಿಸಲಿರುವ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ  ಕೆ.ಸಿ.ವೇಣುಗೋಪಾಲ್‌, ಕೇರಳದ ಪ್ರತಿಪಕ್ಷ ನಾಯಕ ರಮೇಶ್‌ ಚೆನ್ನಿತಾಲ್‌, ಕೇರಳ ಪಿಸಿಸಿ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್‌, ಸೀಮಾಂಧ್ರದ ಅಧ್ಯಕ್ಷ ಸಾಕೆ ಶೈಲಜನಾಥ್‌, ಉತ್ತಮ ಕುಮಾರ್‌ ರೆಡ್ಡಿ ಪಾಲ್ಗೊಳ್ಳಲಿದ್ದಾರೆ.

Advertisement

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮೇಲ್ಮನೆ ಪ್ರತಿಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್‌ ಸೇರಿ ಪಕ್ಷದ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಎರಡೂವರೆ ಗಂಟೆ ನಡೆಯಲಿರುವ ಪ್ರತಿಜ್ಞಾವಿಧಿ ಕಾರ್ಯ ಕ್ರಮ ಬೆಳಗ್ಗೆ 10.30  ರಿಂದ 1ಗಂಟೆಯವರೆಗೆ ನಡೆಯಲಿದೆ. ಕಾರ್ಯಕ್ರಮದ ಮೊದಲಿಗೆ ಸೇವಾದಳದಿಂದ ಗೌರವ ರಕ್ಷೆ ಬಳಿಕ ವಂದೇ ಮಾತರಂ, ಸ್ವಾಗತ ಭಾಷಣ ನಡೆಯಲಿದೆ. ಬಳಿಕ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ ವೇಣುಗೋಪಾಲ್‌ ಕಾರ್ಯಕ್ರಮ  ಉದ್ಘಾಟಿಸುವರು.

ಹಿರಿಯ ನಾಯಕರಿಂದ ಸಂವಿಧಾನ ಪೀಠಿಕೆಯ ಪಠಣ, ಡಿ.ಕೆ. ಶಿವಕುಮಾರ್‌ರಿಂದ ಕಾರ್ಯಕರ್ತರೊಂದಿಗೆ ಸಾಮೂಹಿಕ ಪ್ರತಿಜ್ಞೆ. ಆ ನಂತರ ನಿಕಟಪೂರ್ವ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಂದ ಅಧಿಕಾರ  ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಅಧಿಕಾರ ಹಸ್ತಾಂತರದ ಬಳಿಕ ದಿನೇಶ್‌ ಗುಂಡೂರಾವ್‌, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಎಸ್‌.ಆರ್‌ ಪಾಟೀಲ್‌ ಅವರ ಭಾಷಣ ನಂತರ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಭಾಷಣ  ಮಾಡಲಿದ್ದು, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next