Advertisement

ನೋಟು ವಿವರ ನೀಡಿ

06:00 AM Dec 18, 2018 | Team Udayavani |

ಹೊಸದಿಲ್ಲಿ: ನೋಟು ಅಮಾನ್ಯದ ಅನಂತರದಲ್ಲಿ ಮುದ್ರಿಸಿದ ರೂ. 2000 ಹಾಗೂ ರೂ. 500 ಮುಖಬೆಲೆಯ ನೋಟುಗಳ ದತ್ತಾಂಶವನ್ನು ಬಹಿರಂಗಗೊಳಿಸುವುದರಿಂದ ದೇಶದ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ವಿವರಿಸಲು ಆರ್‌ಬಿಐನ ನೋಟು ಮುದ್ರಣ ವಿಭಾಗವು ವಿಫ‌ಲವಾಗಿದ್ದು, ಈ ದತ್ತಾಂಶವನ್ನು ಬಹಿರಂಗಗೊಳಿಸಬೇಕು ಎಂದು ಮುಖ್ಯ ಮಾಹಿತಿ ಆಯುಕ್ತರು ಆದೇಶಿಸಿದ್ದಾರೆ. ಕರೆನ್ಸಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಬಹಿರಂಗಗೊಳಿಸು ವುದರಿಂದ ಖೋಟಾನೋಟು ಚಲಾವಣೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಮತ್ತು ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ನೋಟು ಮುದ್ರಣ ನಿಯಮಿತ ಹೇಳಿತ್ತು. ಈ ವಿಚಾರವನ್ನು ಮಾಹಿತಿ ಆಯುಕ್ತ ಸುಧೀರ್‌ ಭಾರ್ಗವ ಪರಿಶೀಲನೆ ನಡೆಸಿ, ಆದೇಶ ನೀಡಿದ್ದಾರೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next