Advertisement

ಸೆ. 8, 9: ಪ್ರೊ ಕಬಡ್ಡಿ 10ನೇ ಆವೃತ್ತಿಗಾಗಿ ಆಟಗಾರರ ಹರಾಜು

11:32 PM Jul 03, 2023 | Team Udayavani |

ಮುಂಬಯಿ: ಪ್ರೊ ಕಬಡ್ಡಿ 10ನೇ ಆವೃತ್ತಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಸೆ. 8, 9ರಂದು ಮುಂಬಯಿಯಲ್ಲಿ ನಡೆಯಲಿದೆ. ಈ ಬಾರಿ ಫ್ರಾಂಚೈಸಿಗಳ ಪರ್ಸ್‌ ನಲ್ಲಿರುವ ಮೊತ್ತವನ್ನು 4.4 ಕೋಟಿ ರೂ.ಗಳಿಂದ 5 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ದೇಶಿ ಹಾಗೂ ವಿದೇಶಿ ಆಟಗಾ ರರನ್ನು 4 ವಿಭಾಗಗಳಾಗಿ ವಿಂಗಡಿಸ ಲಾಗಿದೆ-ಎ, ಬಿ, ಸಿ ಮತ್ತು ಡಿ. ಇನ್ನೂ ಮುಂದುವರಿದು ಆಲ್‌ರೌಂಡರ್, ಡಿಫೆಂಡರ್ ಮತ್ತು ರೈಡರ್ಗಳೆಂಬ 3 ಉಪವಿಭಾಗಳನ್ನು ರಚಿಸಲಾಗಿದೆ.

Advertisement

ಆಟಗಾರರ ಮೂಲ ಬೆಲೆಯನ್ನು ಗುಂಪುಗಳಿಗನುಸಾರವಾಗಿ ನಿರ್ಧರಿಸ ಲಾಗಿದೆ. ಎ ವಿಭಾಗದವರಿಗೆ 30 ಲಕ್ಷ ರೂ., ಬಿ ವಿಭಾಗದವರಿಗೆ 20 ಲಕ್ಷ ರೂ. ಸಿ ವಿಭಾಗವರಿಗೆ 13 ಲಕ್ಷ ರೂ. ಹಾಗೂ ಡಿ ವಿಭಾಗದ ಆಟಗಾರರಿಗೆ 9 ಲಕ್ಷ ರೂ. ನಿಗದಿಪಡಿಸಲಾಗಿದೆ. ಫ್ರಾಂಚೈಸಿಗೆ 6 ಆಟಗಾರರನ್ನು ಉಳಿಸಿ ಕೊಳ್ಳುವ ಅವಕಾಶವಿದೆ. ಈ ಬಾರಿ 500ಕ್ಕೂ ಹೆಚ್ಚಿನ ಸಂಖ್ಯೆಯ ಕಬಡ್ಡಿ ಆಟಗಾರರು ಕಾಣಿಸಿಕೊಂಡಿದ್ದಾರೆ. ಇವರಲ್ಲಿ 24 ಮಂದಿ ಖೇಲೋ ಇಂಡಿಯಾ ಯುನಿವ ರ್ಸಿಟಿ ಗೇಮ್ಸ್‌ ಫೈನಲ್‌ನಲ್ಲಿ ಆಡಿದ 2 ತಂಡಗಳ ಆಟಗಾರರೆಂಬುದು ವಿಶೇಷ.

Advertisement

Udayavani is now on Telegram. Click here to join our channel and stay updated with the latest news.

Next