ರಂಗಪ್ರೇಮಿಗಳಿಗೆ ಹೊಸವರ್ಷದ ಆರಂಭದಲ್ಲಿಯೇ ಭರಪೂರ ಮನರಂಜನೆ ಕಾದಿದೆ. “ನಾಟಕ ಬೆಂಗ್ಳೂರು’ ರಂಗಭೂಮಿ ಸಂಭ್ರಮದ ದಶಮಾನೋತ್ಸವದ ನಿಮಿತ್ತ 23 ದಿನಗಳ ಕಾಲ 18 ರಂಗತಂಡಗಳಿಂದ ವಿಭಿನ್ನ ರಂಗಪ್ರಯೋಗಗಳು ನಡೆಯುತ್ತಿವೆ.
ಸಂಸ, ಪಿ. ಲಂಕೇಶ್, ಬಿ.ವಿ.ವೈಕುಂಠರಾಜು, ಪ್ರೊ.ಬಿ.ಸಿ.ಪ್ರಸನ್ನ, ಬಿ.ಸುರೇಶ, ಡಾ.ನಟರಾಜ ಹುಳಿಯಾರ್, ಡಾ. ಎಲ್. ಹನುಮಂತಯ್ಯ ಅವರ ನಾಟಕಗಳು ಇವೆ. ಹಿರಿಯರಾದ ಎಲ್.ಗುಂಡಪ್ಪ ಕೆ.ಎಸ್. ಜಯಲಕ್ಷ್ಮೀ ಹಾಗೂ ಸುರೇಶ್‌ಆನಗಳ್ಳಿ, ಕೆ.ಆರ್. ಓಂಕಾರ್, ಜಗದೀಶ್ ಮಲಾ°ಡ್ ಅವರ ಅನುವಾದಗಳು,
ಪೂರ್ಣಚಂದ್ರತೇಜಸ್ವಿ, ವಸುಧೇಂದ್ರ ಅವರ ಕಥೆಗಳ ರೂಪಾಂತರಗಳು, ಜಯರಾಮ ರಾಯಪುರ, ಪ್ರವೀಣ್ ಸೂಡ, ಜಯಲಕ್ಷ್ಮೀ ಪಾಟೀಲ್ ಅವರ ನಾಟಕಗಳು ಪ್ರದರ್ಶಿತವಾಗುತ್ತಿವೆ. ಕ್ರಿಯಾಶೀಲ ನಿರ್ದೇಶಕರ ನೇತೃತ್ವದಲ್ಲಿ 500ಕ್ಕೂ ಹೆಚ್ಚು ಕಲಾವಿದರು, 150ಕ್ಕೂ ಹೆಚ್ಚು ತಂತ್ರಜ್ಞರು ಉತ್ಸವದ ಭಾಗವಾಗಿದ್ದಾರೆ.
ಮೊದಲ ದಿನ ಸಂಜೆ 6.30ಕ್ಕೆ ದಶಮಾನೋತ್ಸವ ಸಂಭ್ರಮವನ್ನು ಖ್ಯಾತ ರಂಗನಿರ್ದೇಶಕ, ಕೈಮಗ್ಗ ಚಳವಳಿಯ ನೇತಾರ ಪ್ರಸನ್ನ ಅವರು ಉದ್ಘಾಟಿಸಲಿದ್ದಾರೆ. ಕುವೆಂಪು ಭಾಷಾ ಭಾರತಿ ಅಧ್ಯಕ್ಷರಾದ ಡಾ. ಕೆ. ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.
ಎಲ್ಲಿ?: ಕಲಾಗ್ರಾಮ, ಮಲ್ಲತ್ತಹಳ್ಳಿ
ಯಾವಾಗ?: ಜ.1-23, ಸಂಜೆ 7