Advertisement

ಮಾ. 12ರಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ : ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಚಾಲನೆ

01:52 AM Mar 11, 2021 | Team Udayavani |

ಹೊಸದಿಲ್ಲಿ / ಅಹ್ಮದಾಬಾದ್‌: ದೇಶಕ್ಕೆ ಸ್ವಾತಂತ್ರ್ಯ ಬಂದು 2022ಕ್ಕೆ 75 ವರ್ಷಗಳಾಗುತ್ತಿದ್ದು, ಕೇಂದ್ರ ಸರಕಾರವು ಸ್ವಾತಂತ್ರ್ಯದ
ಅಮೃತ ಮಹೋತ್ಸವ ನಡೆಸಲಿದೆ.

Advertisement

ಮಾ. 12ರಿಂದ ದೇಶಾದ್ಯಂತ ಈ ಕಾರ್ಯಕ್ರಮಗಳು ಆರಂಭವಾಗಲಿದ್ದು, ಸಾಬರ್ಮತಿ ಆಶ್ರಮದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಶುಕ್ರವಾರ 81 ಮಂದಿ ಸಾಬರ್ಮತಿ ಆಶ್ರಮದಿಂದ ಪಾದಯಾತ್ರೆ ಆರಂಭಿಸಲಿದ್ದು, 25 ದಿನಗಳ ಅನಂತರ ಎ. 5ರಂದು ದಂಡಿಯಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ 75 ವರ್ಷಗಳ ಸ್ವಾತಂತ್ರ್ಯೋತ್ಸವ ಸಮಾರಂಭ 2022ರ ಆ. 15ರ ವರೆಗೆ ಮುಂದುವರಿಯಲಿದೆ.

ಮಾ. 12ರಿಂದ ಎ. 5
- ಗಾಂಧೀಜಿ ನಡೆಸಿದ್ದ ದಂಡಿ ಉಪ್ಪಿನ ಸತ್ಯಾಗ್ರಹ 91 ವರ್ಷಗಳ ಅನಂತರ ಮರು ಸೃಷ್ಟಿ.

ಎಲ್ಲೆಲ್ಲಿ ಕಾರ್ಯಕ್ರಮ?
- ಪ್ರತೀ ರಾಜ್ಯದಿಂದ 2-3 ಪ್ರಮುಖ ಸ್ಥಳ ಗುರುತಿಸಿ ಪ್ರಮುಖ ಕಾರ್ಯಕ್ರಮ
- ಯುವ ವೇದಿಕೆಗಳು, ನೆಹರೂ ಯುವ ಕೇಂದ್ರಗಳು, ಎನ್‌ಸಿಸಿ ಕೆಡೆಟ್‌ಗಳಿಗೆ ಜವಾಬ್ದಾರಿ

Advertisement

ಕಾರ್ಯಕ್ರಮ
75 ವಾರ, 75 ಸ್ಥಳಗಳಲ್ಲಿ

ಕರ್ನಾಟಕದಲ್ಲಿ ಎಲ್ಲಿ?
- ಮಂಡ್ಯ ಜಿಲ್ಲೆಯ ಶಿವಪುರ
- ಚಿಕ್ಕಬಳ್ಳಾಪುರದ ವಿಧುರಾಶ್ವತ್ಥ

Advertisement

Udayavani is now on Telegram. Click here to join our channel and stay updated with the latest news.

Next