Advertisement

“ಜೇಸಿಐನಿಂದ  ಕ್ರಿಯಾತ್ಮಕ ಚಿಂತನೆಗಳ ಕನಸುಗಳಿಗೆ ವೇದಿಕೆ’

06:50 AM Aug 08, 2017 | Team Udayavani |

ಬೈಂದೂರು: ಜೇಸಿಐ ಶಿರೂರು ಇದರ ಆತಿಥ್ಯದಲ್ಲಿ ಜೇಸಿ ವಲಯ 15ರ ಅಭಿವೃದ್ದಿ ಮತ್ತು ಬೆಳವಣಿಗೆ ಸಮ್ಮೇಳನ ಕನಸುಗಳ ಕಲರವ-2017 ಕಾರ್ಯಕ್ರಮ ಉಪ್ಪುಂದ ಮಾತೃಶ್ರೀ ಸಭಾಭವನದಲ್ಲಿ ನಡೆಯಿತು.
ವಲಯಾಧ್ಯಕ್ಷ ಜೇಸಿ ಸಂತೋಷ ಜಿ ಕಾರ್ಯಕ್ರಮ ಉದ್ಘಾಟಿಸಿದರು. 

Advertisement

ಈ ಸಂದರ್ಭ ಮಾತನಾಡಿದ ಅವರು ಜೇಸಿಐ ಸಂಸ್ಥೆ ಯುವ ಸಮುದಾಯದ ಕ್ರಿಯಾತ್ಮಕ ಚಿಂತನೆಗಳ ಕನಸುಗಳಿಗೆ ವೇದಿಕೆ ಕಲ್ಪಿಸಿದೆ. ವಿನೂತನ ಚಿಂತನೆಗಳ ಮೂಲಕ ಹಮ್ಮಿಕೊಂಡ ಕಾರ್ಯಕ್ರಮಗಳಿಗೆ ಮನ್ನಣೆ ದೊರೆತಾಗ ಸಂತೃಪ್ತಿ ದೊರೆಯುತ್ತದೆ. ಈ ನೆಲೆಯಲ್ಲಿ ಅಭಿವೃದ್ಧಿ ಮತ್ತು ಬೆಳವಣಿಗೆ ಸಮ್ಮೇಳನದ ಮೂಲಕ ಸಾಧಕರನ್ನು ಪುರಸ್ಕರಿಸಲಾಗುತ್ತದೆ ಹಾಗೂ ಸಾಂಸ್ಕೃತಿಕ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸಲಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ವಲಯ 15ರ ಪೂರ್ವಾಧ್ಯಕ್ಷ ಡಾ| ಅರವಿಂದ ರಾವ್‌ ಕೇದಿಗೆ ಅವರು ಮಾತನಾಡಿ ಸಂಘಟನೆಯಿಂದ ಅಭಿವೃದ್ಧಿ ಸಾಧ್ಯ. ವೈಯಕ್ತಿಕ ಅಭಿವೃದ್ಧಿಯಿಂದ ಮಾತ್ರ ಸಮಾಜದ ಬೆಳವಣಿಗೆ ಸಾಧ್ಯವಿಲ್ಲ.ಸಂಘಟನೆ ಮೂಲಕ ತೊಡಗಿಸಿಕೊಂಡಾಗ ಸಾಂಘಿಕ ಬೆಳವಣಿಗೆಗೆ ಸಾಧ್ಯವಾಗುತ್ತದೆ.ಜೇಸಿಐ ವಲಯ 15 ವಿದೇಶದಲ್ಲೂ ಘಟಕಗಳನ್ನು ಪ್ರಾರಂಭಿಸುವ ಮೂಲಕ ಅದ್ಭುತ ಯಶಸ್ಸು ಸಾಧಿಸಿದೆ. ಜೇಸಿಐ ವ್ಯಕ್ತಿತ್ವ ವಿಕಸನದ ರಹದಾರಿ ಎಂದರು.
ಈ ಸಂದರ್ಭದಲ್ಲಿ ವಲಯ ಸಂಯೋಜಕ ಜೇಸಿ ರಾಧಾಕೃಷ್ಣ ಬಂಟ್ವಾಳ, ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ನಿರ್ದೇಶಕ ನಿತೀನ್‌ ಅವಭೃತ ಉಪಸ್ಥಿತರಿದ್ದರು.

ಶಿರೂರು ಜೇಸಿಐ ಅಧ್ಯಕ್ಷರು ಸ್ವಾಗತಿಸಿದರು. ವಲಯಾಧಿಕಾರಿ ಪ್ರಸಾದ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜೇಸಿ ಪಾಂಡುರಂಗ ಅಳ್ವೆಗದ್ದೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next