Advertisement
ಜನಸಂಖ್ಯೆ ಅತಿಯಾಗಿದ್ದರೂ ಅದೊಂದು ಸಮಸ್ಯೆ ಯಾಗದೆ ದೇಶದ ಸೊತ್ತಾಗಿ ಪರಿವರ್ತಿಸಿರುವುದು ನಮ್ಮ ಅಭಿವೃದ್ಧಿಗೊಂದು ಕಾರಣವೆನ್ನಬಹುದು. ಮಳೆಗಾಲ ಎಂದರೆ ಬೇಸಗೆಯ ಬಿಸಿ ಕಡಿಮೆಯಾಗಿ ಇಳೆ ಪ್ರಸನ್ನಳಾಗುವ ಸಮಯ. ಮರಗಿಡಗಳು ಚಿಗುರಿ ಪ್ರಕೃತಿ ಹಸಿ ರಾಗಿ ಕಂಗೊಳಿಸುವ ಕಾಲ. ಸೆಕೆ, ನೀರಿನ ಸಮಸ್ಯೆಗಳಿಂದ ಬೇಸತ್ತ ಮನಸ್ಸುಗಳು ಸಮಾಧಾನದ ನಿಟ್ಟುಸಿರು ಬಿಡುವ ಸಮಯ. ತಂಗಾಳಿಗೆ ತಲೆದೂಗುವ ನಿಸರ್ಗದ ರಮಣೀಯತೆ ಮಾತಿಗೆ ನಿಲುಕದ್ದು. ಆದರೆ ನಮ್ಮನ್ನು ಕಾಡುವ ಕೆಲವು ಸಾಮಾನ್ಯ ಸಂಗತಿಗಳನ್ನು ನಾವು ಅಲ್ಲಗಳೆಯುವಂತಿಲ್ಲ.
ಮಳೆಗಾಲ ಪ್ರಾರಂಭ ವಾದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಾಮಾನ್ಯ. ಸಣ್ಣ ಶೀತ,ಜ್ವರದಿಂದ ಹಿಡಿದು ಮಲೇರಿಯಾ, ಡೆಂಗ್ಯೂ, ಆನೆಕಾಲು, ಕಾಮಾಲೆಗಳಂತಹ ಮಾರಕ ರೋಗಗಳು ಈ ಸಮಯದಲ್ಲಿ ಜನರಲ್ಲಿ ಕಾಣಿಸಿಕೊಂಡು ಆತಂಕ ಪಡಿಸುತ್ತವೆ. ಆದುದರಿಂದ ಮಳೆಗಾಲದಲ್ಲಿ ತುಂಬಾ ಜಾಗೃತರಾಗಿರಬೇಕಾದ ಅಗತ್ಯವಿದೆ. ಆರೋಗ್ಯ ಕೇಂದ್ರ ದಿಂದ ನೀಡುವ ರೋಗ ಪ್ರತಿರೋಧಕ ಮಾತ್ರೆಗಳನ್ನು ಸ್ವೀಕರಿಸುವುದರೊಂದಿಗೆ ಅವರು ನೀಡುವ ಸಲಹೆಗಳನ್ನೂ ಪಾಲಿಸಲು ಮರೆಯಬಾರದು. ಅಂತೆಯೇ ನಮ್ಮ ಪರಿಸರ ವನ್ನು ಶುಚಿಯಾಗಿಡುವುದೂ ಅಷ್ಟೇ ಮುಖ್ಯ. ಪ್ಲಾಸ್ಟಿಕ್ ತ್ಯಾಜ್ಯದಿಂದುಂಟಾಗುವ ಸಮಸ್ಯೆಗಳು”ಸ್ವತ್ಛ ಭಾರತ್’ ಭಾರತೀಯರನ್ನು ಎಷ್ಟರಮಟ್ಟಿಗೆ ಎಚ್ಚರಗೊಳಿಸಿದೆ ಎನ್ನುವುದು ಇನ್ನೂ ಒಗಟಾಗಿದೆ. ಸ್ವತ್ಛತೆಯ ಮುಗಿಲು ಮುಟ್ಟಿದರೂ ಜನರು ಕಿವುಡಾದಂತೆ ನಟಿಸಿ ಎಲ್ಲೆಂದರಲ್ಲಿ ಪ್ಲಾಸ್ಟಿಕ್‌ನಂಥ ಅಪಾಯಕಾರಿ ತ್ಯಾಜ್ಯಗ ಳನ್ನು, ಕಸಾಯಿಖಾನೆಯ ತ್ಯಾಜ್ಯಗಳನ್ನು ಎಸೆದು ಇಡೀ ಪ್ರದೇಶವೇ ವಾಸನೆಯಿಂದ ತುಂಬುವಂತೆ ಮಾಡುತ್ತಿರುವುದಲ್ಲದೆ ಅನೇಕ ರೋಗಗಳಿಗೂ ಕಾರಣರಾಗುತ್ತಿರು ವುದು ವಾಸ್ತವ. ಯಥೇತ್ಛವಾಗಿ ಮಾರುಕಟ್ಟೆಯಲ್ಲಿ ಲಭಿಸುವ ತಂಪು ಪಾನೀಯಗಳು, ಲಕೋಟೆಯಲ್ಲಿ ತುಂಬಿದ ಬಿಸ್ಕತ್ತು, ಕರಿದ ತಿಂಡಿಗಳು, ಹಾಗೆಯೇ ಮನೆಗಳಿಗೆ ಅಗತ್ಯದ ಸಾಮಾನುಗಳನ್ನು ತುಂಬಿ ತಂದ ಪ್ಲಾಸ್ಟಿಕ್ ಚೀಲಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ನಮಗೆ ಅಭ್ಯಾಸ ವಾಗಿಬಿಟ್ಟಿದೆ. ಮಳೆ ಪ್ರಾರಂಭವಾದಾಗ ಇವುಗಳಲ್ಲಿ ನೀರು ತುಂಬಿನಿಂತು ನುಸಿಗಳು ಮೊಟ್ಟೆಯಿಡಲು ಅನುಕೂಲವಾಗುತ್ತದೆ. ಇದು ರೋಗಾಣುಗಳ ಉತ್ಪಾದನಾ ಕೇಂದ್ರವಾಗಿ ಬದಲಾಗು ತ್ತದೆ. ಅಂತೆಯೇ ಭೂಮಿಯಲ್ಲಿ ಸೇರಿಕೊಂಡ ಪ್ಲಾಸ್ಟಿಕ್ ಕವರುಗಳು ಭೂಮಿಯಲ್ಲಿ ನೀರಿಂಗುವುದನ್ನೂ ತಡೆಯು ವುದರಿಂದ ಅಂತರ್ಜಲ ಮಟ್ಟವು ಕುಸಿಯಲು ಕಾರಣವಾಗುತ್ತದೆ. ಪರಿಸರ ಸ್ವತ್ಛವಾಗಿಡಬೇಕು
ಮನೆಯ ಸುತ್ತುಮುತ್ತು ಸ್ವತ್ಛವಾಗಿಡುವುದರಿಂದ ಮಳೆಗಾಲದಲ್ಲಿ ಬರುವ ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯ ಬಹುದಾಗಿದೆ. ಸಾಮಾನ್ಯ ವಾಗಿ ಮನೆಯ ಸುತ್ತಮುತ್ತ ಕಂಡುಬರುವ ಗೆರಟೆ, ಆಟಿಕೆಗಳು, ಉಪಯೋಗ ಶೂನ್ಯವಾದ ಪ್ಲಾಸ್ಟಿಕ್ ಅಥವಾ ಇನ್ನಿತರ ಪಾತ್ರೆಗಳನ್ನು ಕವುಚಿ ಹಾಕಿದಲ್ಲಿ ನೀರು ತುಂಬಿನಿಂತು ರೋಗಾಣು ಉತ್ಪತ್ತಿ ಯಾಗುವುದನ್ನು ತಡೆಯಬಹುದು. ಇತರರಿಗೂ ಇಂತಹ ಉತ್ತಮ ಆರೋಗ್ಯಪೂರ್ಣ ಸಲಹೆಗಳನ್ನು ನೀಡಲು ಮರೆಯಬಾರದು.ಅಭಿವೃದ್ಧಿ ಹೊಂದಿದ ದೇಶಗಳ ನಡುವೆ ಒಂದಾಗಿ ನಿಲ್ಲಲು ಸಾಧ್ಯವಾದರೂ ನಮ್ಮ ದೇಶ ಇನ್ನೂ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎನ್ನುವುದನ್ನು ಅಲ್ಲಗಳೆ ಯುವಂತಿಲ್ಲ. ನಿರುದ್ಯೋಗ, ಬಡತನ, ಬರಗಾಲಗಳು ಸವಾಲಾಗಿ ನಿಂತಿವೆ. ಆದರೂ ಅಭಿವೃದ್ಧಿಯ ಪಥದಲ್ಲಿ ನಮ್ಮ ಯಾತ್ರೆಯು ಬರದಿಂದ ಸಾಗುತ್ತಿದ್ದು ಸಂಪೂರ್ಣ ಅಭಿವೃದ್ಧಿಯನ್ನು ಕೆಲವೇ ವರ್ಷಗಳಲ್ಲಿ ಗಳಿಸಬಹುದು ಎಂಬುದು ಭಾರತೀಯರ ನಂಬಿಕೆ ಸ್ವತ್ಛ ಭಾರತ ಅಭಿಯಾನ ಭಾರತಾದ್ಯಂತ ನಡೆಯುತ್ತಿದ್ದರೂ ಕೆಲವೊಂದು ಮಾಲಿನ್ಯಗಳು ಬಹು ದೊಡ್ಡ ಆತಂಕ ಕಾರಿ ವಿಷಯವಾಗಿ ಸಮಾಜದ, ದೇಶದ ನೆಲ, ಜಲವನ್ನು ತನ್ನ ಕದಂಬ ಬಾಹುಗಳಲ್ಲಿ ಬಂಧಿಸಿರುವುದು ಸಾಮಾನ್ಯ ವಿಷಯವಲ್ಲ. ಅದುವೇ ಪ್ಲಾಸ್ಟಿಕ್ ಮಾಲಿನ್ಯಗಳು.
Related Articles
ಈ ಸಮಸ್ಯೆಗಳ ಜಾಲದಿಂದ ಹೊರಬರಲು ಪ್ರತಿಯೊಬ್ಬ ಭಾರತೀಯನೂ ಮನಸ್ಸು ಮಾಡಬೇಕು, ಸಮಸ್ಯೆಯ ಗಾಂಭೀರ್ಯದ ಅರಿವಿದ್ದರೂ ಜನರು ಎಚ್ಚೆತ್ತುಕೊಳ್ಳದಿರುವುದು ಕುಚೋದ್ಯವೇ ಸರಿ ಯಾವುದನ್ನು ಮಾಡಬಾರದೆಂದು ಅಂದುಕೊಳ್ಳುತ್ತೇವೋ ಅದನ್ನೇ ಮಾಡುವ ಮನಸ್ಸುಗಳು ಬದಲಾಗಿ ನಮ್ಮ ಭಾರತವನ್ನು ಸ್ವತ್ಛವಾಗಿಡ ಬೇಕೆಂಬ ದೃಢಸಂಕಲ್ಪ ಮೂಡಬೇಕಾದರೆ ಮನೆ ಹಾಗೂ ಮನಸ್ಸು ಮೊದಲು ಸ್ವತ್ಛವಾಗಬೇಕು. ಆಗ ಪ್ಲಾಸ್ಟಿಕ್ ಹಾಗೂ ಇತರ ಮಾಲಿನ್ಯಮುಕ್ತ ಭಾರತ ದೇಶದ, ರಾಮರಾಜ್ಯದ ಕನಸು ನನಸಾಗಲು ಹೆಚ್ಚು ಕಾಲ ಕಾಯಬೇಕಾಗಿಲ್ಲ.
Advertisement
ಪ್ರತಿಯೊಬ್ಬರೂ ಕೈಜೋಡಿಸಲಿರಸ್ತೆಯ ಬದಿಯಲ್ಲಿ ಧಾರಾಳ ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿದ್ದು ಆದಷ್ಟು ಬೇಗ ಅದನ್ನು ತೆರವುಗೊಳಿಸುವಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಇನ್ನಿತರ ಪರಿಸರ ಪ್ರೇಮಿ ಸಂಘಟನೆಗಳು ಮುಂದಾಗಬೇಕಾಗಿದೆ. ಜತೆಯಲ್ಲಿ ಭಾರತೀಯರೆಲ್ಲರೂ ಕೈಜೋಡಿಸಿದಲ್ಲಿ ಸ್ವತ್ಛ ಆರೋಗ್ಯವಂತ ಭಾರತದ ಕನಸು ನನಸಾಗಲು ಹೆಚ್ಚು ಸಮಯ ಬೇಕಾಗಿಲ್ಲ. – ಅಖೀಲೇಶ್ ನಗುಮುಗಂ