Advertisement

ಕೋವಿಡ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಪ್ಲಾಸ್ಟಿಕ್ ವಸ್ತು ಮಾರಾಟಗಾರರ ಬದುಕು

01:50 PM Jun 03, 2021 | Team Udayavani |

ಗಂಗಾವತಿ: ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಪ್ಲಾಸ್ಟಿಕ್ ಕೊಡ, ಬಕೆಟ್ ಇತರೆ ಸಾಮಾನು ಮಾರಾಟಗಾರರ ಬದುಕು‌ ಸಂಕಷ್ಟಕ್ಕೆ ಸಿಲುಕಿದೆ. ಲಾಕ್ ಡೌನ್ ನಿಂದಾಗಿ ಪ್ಲಾಸ್ಟಿಕ್ ಸಾಮಾನು ತಯಾರಿಸುವ ಕೈಗಾರಿಕೆಗೆ‌ ಕಚ್ಚಾ ಸಾಮಗ್ರಿಗಳು ದೊರಕುತ್ತಿಲ್ಲ. ಜನ ಸಂಚಾರಕ್ಕೆ ನಿರ್ಬಂಧವಿರುವುದರಿಂದ ಮನೆ ಮನೆಗೆ ಹೋಗಿ‌ ಪ್ಲಾಸ್ಟಿಕ್ ಕೊಡ ಬಕೆಟ್ ಮಾರಾಟ ಮಾಡಲು ಪೊಲೀಸರು ತಡೆಯೊಡ್ಡುತ್ತಿದ್ದಾರೆ.

Advertisement

ಮನೆ ಬಳಿಗೆ ಸಾಮಾನುಗಳನ್ನು ತೆಗೆದುಕೊಂಡು ಹೋದರೆ ಜನರು ಕಡಿಮೆ ಬೆಲೆಗೆ‌ ಕೇಳುತ್ತಿದ್ದಾರೆ. ಇದರಿಂದ ಲಾಕ್ ಡೌನ್ ಸಂದರ್ಭದಲ್ಲಿ ತಲೆಯ ಮೇಲೆ ಹೊತ್ತು ಮಾರಾಟ ಮಾಡುವವರ‌ ಬದುಕು ದುಸ್ತಾರವಾಗಿದೆ.

ಇದನ್ನೂ ಓದಿ:ಕೋವಿಡ್ 19 ಭೀತಿ: ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿದ ಉತ್ತರಪ್ರದೇಶ ಸರ್ಕಾರ

ಲಾಕ್ ಡೌನ್ ಸಂದರ್ಭದಲ್ಲಿ ಸರಕಾರ ಸಣ್ಣಪುಟ್ಟ ಗುಡಿಕೈಗಾರಿಕೆಯ ಉತ್ಪನ್ನಗಳನ್ನು ಹೊತ್ತು ಮಾರುವವರಿಗೆ ಸಹಾಯ ಮಾಡಬೇಕು. ಅವರು ಸಂಚಾರ ಮಾಡಿ ಸಾಮಾನು ಮಾರಾಟ ಮಾಡಲು ಜಿಲ್ಲಾಡಳಿತ ಅವಕಾಶ ನೀಡಬೇಕು. ಪ್ರತಿ ಕುಟುಂಬಕ್ಕೂ ಆರ್ಥಿಕ ನೆರವು ಕಲ್ಪಿಸುವಂತೆ ಪ್ಲಾಸ್ಟಿಕ್ ಸಾಮಾನು ಮಾರಾಟ ಮಾಡುವ ಕೊಪ್ಪಳದ ದುರುಗಮ್ಮ ಜೋಗೆರ್ ಮನವಿ ಮಾಡಿದರು

Advertisement

Udayavani is now on Telegram. Click here to join our channel and stay updated with the latest news.

Next