Advertisement

ಪ್ಲಾಸ್ಟಿಕ್‌ ಮುಕ್ತ ಪಟ್ಟಣಕ್ಕೆ ಸಾರ್ವಜನಿಕ ಸಹಕಾರ ಅಗತ್ಯ

03:16 PM Apr 24, 2019 | Suhan S |

ಚನ್ನರಾಯಪಟ್ಟಣ: ಹಾಸನ ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಚನ್ನರಾಯಪಟ್ಟಣದಲ್ಲಿ ಪ್ಲಾಸ್ಟಿಕ್‌ ಬಳಕೆ ನಿಯಂತ್ರಣ ಮಾಡದೆ ಹೋದರೆ ರೋಗ ಪಟ್ಟಣವಾಗುತ್ತದೆ ಹಾಗಾಗಿ ಸಾರ್ವಜನಿಕರು ಸಹಕಾರದೊಂದಿಗೆ ಪ್ಲಾಸ್ಟಿಕ್‌ ಮುಕ್ತ ನಗರ ಮಾಡೋಣ ಎಂದು ಪುರಸಭೆ ಆಡಳಿತಾಧಿಕಾರಿ ಯಾಗಿರುವ ಉಪವಿಭಾಗಾಧಿಕಾರಿ ಡಾ. ಎಚ್.ಎಲ್. ನಾಗರಾಜು ತಿಳಿಸಿದರು.

Advertisement

ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ, ಖಾಸಗಿ ಸಮುದಾಯ ಭವನ ಮಾಲೀಕರು, ವರ್ತಕರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳಿಗೆ ಜನಜಾಗೃತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಳಕೆ ನಿಲ್ಲಿಸಿ:ಪ್ಲಾಸ್ಟಿಕ್‌ ಮಾರಾಟ ಮತ್ತು ಬಳಕೆಗೆ ಕೇಂದ್ರ ಸರ್ಕಾರ ನಿಷೇಧಿಸಿ ಮೂರು ವರ್ಷ ಕಳೆದರೂ ಸಾರ್ವಜನಿಕರ ಇಚ್ಛಾಶಕ್ತಿ ಕೊರತೆಯಿಂದ ಈ ವರೆಗೂ ಜಾರಿಯಾಗಿಲ್ಲ. ವರ್ತಕರ ವಾಣಿಜ್ಯ ಸಂಕೀರ್ಣಗಳ ಮೇಲೆ ಅಧಿಕಾರಿಗಳು ದಾಳಿ ಮಾಡುವ ಮೊದಲು ತಾವೇ ಪ್ಲಾಸ್ಟಿಕ್‌ ಬಳಕೆಯನ್ನು ನಿಲ್ಲಿಸಬೇಕು ಎಂದರು.

ಜಾಗೃತಿ ಕಾರ್ಯಕ್ರಮ: ಪ್ರತಿ ವಾರ್ಡ್‌ನಲ್ಲೂ ಪ್ಲಾಸ್ಟಿಕ್‌ ದುಷ್ಪರಿಣಾಮದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುವುದು. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವುದಕ್ಕೆ ನಗರವಾಸಿಗರು ಸಹಕಾರ ನೀಡಬೇಕು. ರಾತ್ರಿ ವೇಳೆ ಖಾಲಿ ನಿವೇಶನ ದಲ್ಲಿ ಕಸ ಹಾಕುವವರನ್ನು ಪತ್ತೆ ಹಚ್ಚಿ ಮನೆ ಕಂದಾ ಯದ ಜೊತೆಗೆ ಶೇ.20ರಷ್ಟು ಹೆಚ್ಚುವರಿ ತೆರಿಗೆ ವಸೂಲಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಕಲ್ಯಾಣ ಮಂಟಪ ಮಾಲೀಕರಿಗೆ ಎಚ್ಚರಿಕೆ: ಕಲ್ಯಾಣ ಮಂಟಪಗಳಲ್ಲಿ ಹೆಚ್ಚು ಪ್ಲಾಸ್ಟಿಕ್‌ ಬಳಕೆ ಯಾಗುತ್ತಿದೆ ಮಾಲೀಕರು ಈ ಬಗ್ಗೆ ಎಚ್ಚರ ವಹಿಸ ದಿದ್ದರೆ ತಾಲೂಕು ಆಡಳಿತ ದಾಳಿ ಮಾಡಿ ದಂಡ ಹಾಕುವುದಲ್ಲದೆ ಒಂದು ತಿಂಗಳು ಸಮು ದಾಯ ಭವನಕ್ಕೆ ಬೀಗ ಮುದ್ರೆ ಹಾಕಬೇಕಾಗುತ್ತದೆ, ಮತ್ತು ಮಾಲೀಕನನ್ನು ನ್ಯಾಯಾಂಗ ಬಂಧನಕ್ಕೆ ವಹಿಸ ಲಾಗುವುದು ಎಂದು ಎಚ್ಚರಿಸಿದರು.

Advertisement

ಸ್ವಸಾಯ ಸಂಘ ಹಾಗೂ ಸ್ತ್ರೀಶಕ್ತಿ ಸಂಘದವರ ಮೂಲಕ ಪೇಪರ್‌ ಮತ್ತು ಬಟ್ಟೆ ಬ್ಯಾಗ್‌ ಮಾಡಿ ಸಲಾಗುವುದು, ಎಲ್ಲಾ ವರ್ತಕರು ಅಲ್ಲಿಯೇ ತೆಗೆದುಕೊಳ್ಳುವ ಮೂಲಕ ಪ್ಲಾಸ್ಟಿಕ್‌ ಬ್ಯಾಗ್‌ ನಿಲ್ಲಿಸಬೇಕು ಎಂದು ಸೂಚಿಸಿದರು.

ಬಟ್ಟೆ ಬ್ಯಾಗ್‌ ಪೂರೈಸಿ: ವರ್ತಕ ಸಂಘದ ಅಧ್ಯಕ್ಷ ಕುಮಾರ್‌ ಮಾತನಾಡಿ, ತಾಲೂಕಿನ ಎಲ್ಲಾ ವರ್ತಕರು ಬಟ್ಟೆ ಚೀಲ ಖರಿದಿಸುತ್ತೇವೆ ನಮಗೆ ಅಗತ್ಯ ವಿರುವಷ್ಟು ಒದಗಿಸಲು ಪುರಸಭೆ ಮುಂದಾಗಬೇಕು ಎಂದರು.

ಭುವನೇಶ್ವರಿ ತರಕಾರಿ ಮಾರುಕಟ್ಟೆ ಅಧ್ಯಕ್ಷ ಕೃಷ್ಣ ಮಾತನಾಡಿ, ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್‌ ಮಾರಾಟಗಾರರ ಜೊತೆ ಶಾಮೀಲಾಗಿದ್ದಾರೆ. ಅಧಿಕಾರಿಗಳಲ್ಲಿ ಇಚ್ಛಾಶಕ್ತಿ ಕೊರತೆ ಇದೆ. ಪ್ಲಾಸ್ಟಿಕ್‌ ಕೈ ಚೀಲಗಳನ್ನು ರಾತ್ರೋ ರಾತ್ರಿ ವರ್ತಕರಿಂದ ಲಂಚ ಪಡೆದು ಅವರಿಗೆ ನೀಡಿದ್ದಾರೆ ಎಂದು ಸಭೆಯಲ್ಲಿ ಹಾಜರಿದ್ದ ಮೇಲಧಿಕಾರಿಗಳ ಗಮನಕ್ಕೆ ತಂದರು.

ಭೂಮಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಕುಮಾರ್‌, ಎಪಿಎಂಸಿ ನಿರ್ದೇಶಕ ಎಂ.ಆರ್‌.ಅನಿಲ್ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next