Advertisement

ದಾಖಲೆಯ 14 ಬಾರಿ ಪ್ಲಾಸ್ಮಾ ದಾನ ಮಾಡಿದ ಪುಣೆಯ ಅಜಯ ಮುನೋಟ್‌

02:43 AM May 14, 2021 | Team Udayavani |

ಪುಣೆ : ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಹಲವರಿಗೆ ಪ್ಲಾಸ್ಮಾ ಥೆರಪಿ ಚೇತರಿಸಿಕೊಳ್ಳುವಲ್ಲಿ ನೆರವಾಗಿದೆ. ಹೀಗಾಗಿ ಹಲವರು ಸ್ವಯಂ ಸ್ಫೂರ್ತಿಯಿಂದ ಪ್ಲಾಸ್ಮಾ ದಾನ ಮಾಡಿದ್ದಾರೆ ಕೂಡ.

Advertisement

ಪುಣೆಯ ಅಜಯ ಮುನೋಟ್‌ ಅವರು ಇದುವರೆಗೆ ದಾಖಲೆಯ 14 ಬಾರಿ ಪ್ಲಾಸ್ಮಾ ದಾನ ಮಾಡಿದ್ದಾರೆ. ಅವಕಾಶ ಮತ್ತು ಅಗತ್ಯ ಬಿದ್ದರೆ ಮುಂದಿನ ದಿನಗಳಲ್ಲಿಯೂ ಈ ಕೈಂಕರ್ಯ ನಡೆಸುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.

ತಮ್ಮ ಈ ಕ್ರಮದಿಂದಾಗಿ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಇರುವ ತಪ್ಪು ಕಲ್ಪನೆ ನಿವಾರಣೆಯಾಗಬೇಕು ಎಂದಿದ್ದಾರೆ. ಅವರ ಹೆಸರು ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ವೃತ್ತಿಯಲ್ಲಿ ವ್ಯೂಹಾತ್ಮಕ ಸಲಹೆಗಾರ ರಾಗಿರುವ ಅಜಯ ಮುನೋಟ್‌2020ರ ಜೂನ್‌ನಲ್ಲಿ ಕೊರೊನಾದಿಂದ ಚೇತರಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next