Advertisement
ಅಂತಹದ್ದೊಂದು ಕಾರ್ಯ ಮಾಡುವ ಸದಾವಕಾಶ ಇದೀಗ ಪಾಲಿಕೆ ವ್ಯಾಪ್ತಿಯ ಜನರಿಗೆ ಒದಗಿಬಂದಿದೆ. ನಗರದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ನೂರಾರು ಮರಗಳು ನೆಲಕ್ಕುರುಳಿವೆ. ಇದೀಗ ಜಿಲ್ಲಾಡಳಿತ, ಪಾಲಿಕೆ ಅದೇ ಜಾಗದಲ್ಲಿ ಸಸಿಗಳನ್ನು ನೆಟ್ಟು ಪರಿಸರ ಬೆಳೆಸಲು ಮುಂದಾಗುತ್ತಿವೆ. ಈ ಕಾರ್ಯದಲ್ಲಿ ಪಾಲಿಕೆ ವ್ಯಾಪ್ತಿಯ ಜನರೂ ಕೈ ಜೋಡಿಸಬೇಕಿದೆ.
Related Articles
Advertisement
ಕೈ ಬಿಡಲಿರುವ ಅರಣ್ಯ ಇಲಾಖೆ: ನಗರದಲ್ಲಿ ನಿರ್ಮಾಣವಾಗಿರುವ ರಸ್ತೆಗಳ ಬದುಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಎಸ್‌ಎಸ್ ಹೈಟೆಕ್ ಆಸ್ಪತ್ರೆ, ಲಕ್ಷ್ಮಿ ಫ್ಲೋರ್ ಮಿಲ್ ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಎವಿಕೆ ಕಾಲೇಜು ರಸ್ತೆ, ಹದಡಿ ರಸ್ತೆ, ಲೋಕಿಕೆರೆ ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಭಾಗಗಳಲ್ಲಿ ಸಸಿಗಳನ್ನು ನೆಡಲಾಗಿದೆ. ಸದ್ಯ ಅರಣ್ಯ ಇಲಾಖೆ ನೀರು ಎರೆಯುತ್ತಿದೆ. ಇಲಾಖೆ ಅಧಿಕಾರಿಗಳು ಹೇಳುವಂತೆ ಪಾಲಿಕೆಯಿಂದ ಬಂದಿರುವ ಅನುದಾನ ಇನ್ನೊಂದು ಬಾರಿ ಮಾತ್ರ ನೀರುಣಿಸಲು ಸಾಕಾಗುತ್ತದೆ. ಮತ್ತೆ ನೀರುಣಿಸುವುದು ಅಸಾಧ್ಯವಂತೆ.
ಇಷ್ಟು ಮಾಡಿ ಸಾಕು: ನೀವು ಕುಡಿಯುವ ನೀರನ್ನು ಈ ಸಸಿಗಳಿಗೆ ಎರೆಯಬೇಕಿಲ್ಲ. ನಿಮ್ಮ ಮನೆಯಲ್ಲಿನ ತ್ಯಾಜ್ಯ ನೀರು ಈ ಸಸಿಗಳಿಗೆ ಸಾಕು. ನೆಲ, ಪಾತ್ರೆ, ಬಟ್ಟೆ ತೊಳೆದ ನೀರನ್ನು ಚರಂಡಿಗೆ ಸುರಿಯುವ ಬದಲು ಈ ಸಸಿಗಳಿಗೆ ಹಾಕಿ. ಇನ್ನು ಮನೆ ಮುಂದೆ ವಾಹನ ತೊಳೆದ ನೀರು ನೇರ ಸಸಿಯ ಬುಡ ತಲುಪುವಂತೆ ಒಂದಿಷ್ಟು ದಾರಿಮಾಡಿ. ಇನ್ನು ಹೋಟೆಲ್, ಇತರೆ ವ್ಯಾಪಾರಿ ಮಳಿಗೆ ಹೊಂದಿದವರು ಕನಿಷ್ಠ ಅರ್ಧಕೊಡ ನೀರು ಸಸಿಗಳಿಗೆ ಎರೆದು ಸಾಮಾಜಿಕ ಜವಾಬ್ದಾರಿ ಮೆರೆಯಬೇಕಿದೆ.
* ಪಾಟೀಲ ವೀರನಗೌಡ