Advertisement

ಪ್ರಕೃತಿ ನಮಗೆ ದೊರೆತಿರುವ ವರದಾನ: ಮೂಲ್ಯ

03:49 PM Nov 11, 2018 | |

ಬಂಟ್ವಾಳ : ಪ್ರಕೃತಿ ನಿಸರ್ಗ ದತ್ತವಾಗಿ ನಮಗೆ ದೊರೆತಿರುವ ಒಂದು ವರದಾನವಾಗಿದೆ. ಮಾನವ ಪರಿಸರದ ಮೇಲೆ ವೈಜ್ಞಾನಿಕತೆ ಹೆಸರಿನಲ್ಲಿ ತನ್ನ ವಕ್ರದೃಷ್ಟಿಯನ್ನು ಬೀರಿದ್ದಾನೆ ಎಂದು ಎಸ್‌.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ಮೂಲ್ಯ ಹೇಳಿದರು. ಅವರು ಮಜಿ ವೀರಕಂಭ ಹಿ.ಪ್ರಾ. ಶಾಲೆಯಲ್ಲಿ ಅಳಿವಿನಂಚಿನಲ್ಲಿರುವ ಪಕ್ಷಿ ಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರ ಗುಬ್ಬಚ್ಚಿಗೂಡು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Advertisement

ಕಾರ್ಯಕ್ರಮ ಸಂಘಟಿಸಿದ ಎಸ್‌.ಕೆ.ಪಿ.ಎ. ಬಂಟ್ವಾಳ ಸದಸ್ಯ, ಕಲ್ಲಡ್ಕ ವಲಯದ ಪ್ರತಿನಿಧಿ ಜಯರಾಮ ರೈ ಮಾತನಾಡಿ, ಪ್ರಕೃತಿಯ ಜತೆಗಿನ ಸಂಬಂಧವನ್ನು ಕಂಪ್ಯೂಟರ್‌, ಟಿ.ವಿ. ಮೊಬೈಲ್‌ಗ‌ಳು ನುಂಗಿವೆ. ನಿಸರ್ಗದ ಮಡಿಲಿನಲ್ಲಿ ಬೆಳೆದ ಮತ್ತು ವೈಜ್ಞಾನಿಕತೆಯ ಚೌಕಟ್ಟಿನಲ್ಲಿ ಬೆಳೆದ ಮಕ್ಕಳಿಗೆ ಬಹಳಷ್ಟು ವ್ಯತ್ಯಾಸಗಳಿವೆ. ಮಕ್ಕಳನ್ನು ನಿಸರ್ಗದ ಜತೆಗೆ ಆಡಲು ಬಿಡಬೇಕು ಎಂದು ತಿಳಿಸಿದರು.

ಶಾಲಾ ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ ಪ್ರಸ್ತಾವಿಸಿ, ಪರಿಸರದ ಕುರಿತಾಗಿ ಪ್ರಾಥಮಿಕ ಮಟ್ಟದಲ್ಲಿಯೇ ಶಿಕ್ಷಣ ದೊರಕಿದಾಗ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣದೊಂದಿಗೆ ಪರಿಸರದ ಕುರಿತಾದ ಆಸಕ್ತಿ ಬೆಳೆಯುತ್ತದೆ ಎಂದರು. ತಮ್ಮ ಕಾರ್ಯಚಟುವಟಿಕೆಗಳಿಂದ ಕಂಡ ಫಲದ ಕುರಿತು ಕಿರುಚಿತ್ರವನ್ನು ಪ್ರದರ್ಶಿಸಿದರು. ಅನಂತರ ಪರಿಸರದಲ್ಲಿ ಶಾಲಾ ಮಕ್ಕಳೊಂದಿಗೆ ಸಮುದಾಯ ಹಾಗೂ ಹೆತ್ತವರಿಗೆ ಪಕ್ಷಿಗಳಿಗೆ ಆಹಾರ- ನೀರು ಒದಗಿಸುವ ಬಗೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಕೃತಕ ಗೂಡು ಮತ್ತು ಆಹಾರ ನೀರು ಒದಗಿಸುವ ಮಣ್ಣಿನ ಪರಿಕರಗಳನ್ನು ಉಚಿತವಾಗಿ ಒದಗಿಸಿದರು. ಪ್ರೋತ್ಸಾಹಕದಾಯಕವಾಗಿ ವಿದ್ಯಾರ್ಥಿಗಳಿಗೆ ಪ್ರಶ್ನೋತ್ತರ ಕಾರ್ಯದ ಮೂಲಕ ತಾವೇ ರಚಿಸಿದ ಕವನ ಸಂಗ್ರಹವನ್ನು ಬಹುಮಾನವಾಗಿ ನೀಡಿದರು.

ಎಸ್‌.ಕೆ.ಪಿ.ಎ. ಬಂಟ್ವಾಳ ವಲಯದ ಪದಾಧಿಕಾರಿಗಳಾದ ಸುಕುಮಾರ್‌ ಬಂಟ್ವಾಳ, ದಯಾನಂದ ಬಂಟ್ವಾಳ, ವರುಣ್‌ ಕಲ್ಲಡ್ಕ, ಚಿನ್ನಾ ಮೈರ, ವೀರಕಂಭ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು, ಹಳೆ ವಿ.ಸಂಘ ಅಧ್ಯಕ್ಷ ರಮೇಶ್‌ ಗೌಡ, ಎಸ್‌.ಡಿ.ಎಂ.ಸಿ. ಸದಸ್ಯರು, ಹೆತ್ತವರು, ಕೇಸರಿ ಫ್ರೆಂಡ್ಸ್‌ ಅಧ್ಯಕ್ಷ ರಮೇಶ್‌ ಕುಲಾಲ್‌, ಯುವ ಫ್ರೆಂಡ್ಸ್‌ ಅಧ್ಯಕ್ಷ ವಾಸುನಾಯ್ಕ, ಯುವಶಕ್ತಿ ಫ್ರೆಂಡ್ಸ್‌ನ ದಿನೇಶ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಕಂಭ ಒಕ್ಕೂಟದ ಅಧ್ಯಕ್ಷ ಕೊರಗಪ್ಪ ನಾಯ್ಕ, ಹಿರಿಯ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಾವೇ ರಚಿಸಿದ ಪರಿಸರ ಗೀತೆ ಹಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಶಿಕ್ಷಕರು ಸ್ವಾಗತಿಸಿ, ಶಿಕ್ಷಕಿ ಸಂಗೀತಾ ಶರ್ಮ ನಿರೂಪಿಸಿದರು. ಶಿಕ್ಷಕಿಯರಾದ ಶಕುಂತಳಾ, ನಳಿನಾಕ್ಷಿ, ಜ್ಯೋತಿ, ನಿಶ್ಮಿತಾ, ಜಯಲಕ್ಷ್ಮೀ ಸಹಕರಿಸಿದರು.

ಪಕ್ಷಿಗಳ ಮಾಹಿತಿ
ಗುಬ್ಬಚ್ಚಿ ಗೂಡು ಕಾರ್ಯಾಗಾರ ನಡೆಸಿದ ನಿತ್ಯಾನಂದ ಶೆಟ್ಟಿ ಬದ್ಯಾರು ಹಾಗೂ ರಮ್ಯಾ ಅವರುಹಕ್ಕಿಗಳ ಜೀವನಕ್ರಮ, ತಾವು ತಮ್ಮ ಮನೆ ಪರಿಸರದಲ್ಲಿ ಈ ಬಗ್ಗೆ ನಡೆಸಿದ ಹಲವು ಪರಿಸರಮುಖೀ ಕಾರ್ಯಗಳ, ಹಕ್ಕಿಗಳ ಕುರಿತು ನಮಗೆ ತಿಳಿದಿರುವ ಹಲವು ವಿಚಾರಗಳು, ಪಕ್ಷಿ ಸಂಕುಲಗಳ ಉಳಿವಿಗಾಗಿ ಮರಗಿಡಗಳ ಬೆಳೆಸುವಿಕೆ, ಕಾಂಕ್ರಿಟೀಕರಣದ ನೆಪದಲ್ಲಿ ಬದಲಾಗುತ್ತಿರುವ ಪರಿಸರವು ಪಕ್ಷಿಗಳಿಗೆ ಯಾವ ರೀತಿಯಲ್ಲಿ ಮಾರಕವಾಗಿವೆ, ಅವುಗಳು ಮರೆಯಾಗದಂತೆ ನಾವು ಮಾಡಬೇಕಾದ ಕಿರು ಪ್ರಯತ್ನ, ಮುಂತಾದವುಗಳ ಕುರಿತು ವಿವರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next