ಚಿಕ್ಕಬಳ್ಳಾಪುರ: ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಜಿಲ್ಲಾಡಳಿತ ದೃಢಸಂಕಲ್ಪ ಮಾಡಿದ್ದು,ಸಾರ್ವಜನಿಕರು ಸಹಕರಿಸಬೇಕೆಂದು ಜಿಪಂ ಸಿಇಒ ಪಿ.ಶಿವಶಂಕರ್ ಮನವಿ ಮಾಡಿದರು.
ಗೌರಿಬಿದನೂರು ತಾಲೂಕಿನಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭೇಟಿ ನೀಡಿ, ವಿವಿಧಕಾಮಗಾರಿ ಪರಿಶೀಲನೆ ನಡೆಸಿ ಮಾತನಾಡಿದಅವರು, ನಗರ ಪ್ರದೇಶದ ಮಾದರಿಯಲ್ಲಿಗ್ರಾಮೀಣ ಪ್ರದೇಶದಲ್ಲಿ ಸಹ ಸ್ವತ್ಛತೆ ಕಾಪಾಡಲು ಆದ್ಯತೆ ನೀಡಲಾಗಿದೆ ಎಂದರು.
ಮನೆ ಬಾಗಿಲಲ್ಲಿ ಕಸ ಸಂಗ್ರಹ: ಪಂಚಾಯತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು, ಗ್ರಾಮಸ್ಥರಮನೆ ಬಾಗಿಲಿಗೆ ಕಸ ಸಂಗ್ರಹ ಮಾಡುವ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಒಣ ಮತ್ತು ಹಸಿತ್ಯಾಜ್ಯವನ್ನು ಪ್ರತ್ಯೇಕವಾಗಿ ವಿಂಗಡಿಸಿ ಸ್ವತ್ಛತೆ ಕಾಪಾಡುವ ಜೊತೆಗೆ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಹಕರಿಸಬೇಕೆಂದರು.
ಜ.26ರೊಳಗೆ ಕಾರ್ಯಾರಂಭಕ್ಕೆ ಸೂಚನೆ: ಮೊದಲಿಗೆ ವಾಟದಹೊಸಹಳ್ಳಿಯ ಎಸ್‌ಎಲ್ ಡಬ್ಲ್ಯೂ ಯೂನಿಟ್‌ಗೆ ಭೇಟಿ ನೀಡಿದ ಅವರು, ಅಲ್ಲಿ ಘನ ತ್ಯಾಜ್ಯ ಘಟಕ ಕಾಮಗಾರಿ ಪರಿಶೀಲಿಸಿ, ಮುಂದಿನ ಜನವರಿ 26 ರೊಳಗೆ ಎಲ್ಲಾ ಘನ ತ್ಯಾಜ್ಯಘಟಕಗಳಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭ ಮಾಡಬೇಕು ಎಂದು ಇಒಗಳಿಗೆ ಸೂಚಿಸಿದರು. ನಂತರ ಹೊಸೂರಿನಲ್ಲಿ ಆರಂಭಿಸಲಾಗಿರುವರಾಜೀವ್‌ಗಾಂಧಿ ಸೇವಾ ಕೇಂದ್ರದ ಕಾಮಗಾರಿ ಪರಿಶೀಲಿಸಿದರು. ತದನಂತರ ಮುದ್ದಲೋಡುಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ಕೂಡ ಘನ ತ್ಯಾಜ್ಯ ಪೂರ್ಣಗೊಳಿಸುವಂತೆ ಪಿಡಿಒಗಳಿಗೆ ತಿಳಿಸಿದರು.
ಅರಿವು ಮೂಡಿಸಿ: ಇದೇ ಸಂದರ್ಭದಲ್ಲಿ ಮಾತನಾಡಿದ ಸಿಇಒ ಶಿವಶಂಕರ್, ಗ್ರಾಮೀಣ ಭಾಗದಲ್ಲಿ ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳು ಕ್ರಮ ವಹಿಸಬೇಕು. ಪ್ರಾಥಮಿಕ ಹಂತದಲ್ಲೇ ಹಸಿ ಹಾಗೂ ಒಣಕಸವನ್ನಾಗಿ ಬೇರ್ಪಡಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಪ್ಲಾಸ್ಟಿಕ್ ಮುಕ್ತ ಸಮಾಜನಿರ್ಮಾಣಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗೌರಿಬಿದನೂರು ತಾಪಂ ಇಒ ಮುನಿರಾಜು, ಹೊಸೂರು ಜಿಪಂ ಸದಸ್ಯರಾದ ಮಂಜುನಾಥ್,ಪಿಡಿಒಗಳುಹಾಗೂಅಧಿಕಾರಿಗಳು ಉಪಸ್ಥಿತರಿದ್ದರು.