Advertisement

AN-12 aircraft: 56 ವರ್ಷ ಹಿಂದೆ ಪತನವಾದ ವಿಮಾನ: ಈಗ 4 ಶವ ಪತ್ತೆ!

11:27 PM Oct 01, 2024 | Team Udayavani |

ನವದೆಹಲಿ: 56 ವರ್ಷಗಳ ಹಿಂದೆ 102 ಜನರನ್ನು ಹೊತ್ತೂಯ್ಯುತ್ತಿದ್ದ ಭಾರತೀಯ ವಾಯು ಪಡೆಯ ವಿಮಾನವು ಹಿಮಾಚಲ ಪ್ರದೇಶದ ರೋಹ್ಟಂಗ್‌ ಪಾಸ್‌ನಲ್ಲಿ ಪತನವಾಗಿತ್ತು. ಈ ಸ್ಥಳದಿಂದ ಈಗ ಭಾರತೀಯ ಸೇನೆ ನಾಲ್ಕು ಶವಗಳನ್ನು ಹೊರ ತೆಗೆದಿರುವ ಘಟನೆ ನಡೆದಿದೆ.

Advertisement

ಅತಿ ದೀರ್ಘ‌ ಶೋಧ ಪ್ರಕ್ರಿಯೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 1968 ಫೆ.7ರಂದು ಚಂಡೀಗಢದಿಂದ ಹೊರಟಿದ್ದ ಸೇನಾ ಸಾರಿಗೆ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಪತನವಾಗಿತ್ತು. ಈ ವಿಮಾನದ ಅವೇಶಷಗಳನ್ನು ಪತ್ತೆ ಹೆಚ್ಚುವ ಕೆಲಸವು 2003, 2005, 2006, 2013 ಮತ್ತು 2019ರಲ್ಲಿ ಕೈಗೊಳ್ಳಲಾಗಿತ್ತು.

ಶವಗಳ ಬಳಿ ದೊರೆತ ದಾಖಲೆಗಳ ಆಧಾರದ ಮೇಲೆ ಶವಗಳನ್ನು ಪತ್ತೆ ಹಚ್ಚಲಾಗಿದೆ. ಸಿಪಾಯಿ ನಾರಾಯಣ ಸಿಂಗ್‌, ಮಾಲ್ಕಾನ್‌ ಸಿಂಗ್‌, ಥಾಮಸ್‌ ಚರನ್‌ ಎಂದು ಗುರುತಿಸಲಾಗಿದೆ. ನಾಲ್ಕನೇ ವ್ಯಕ್ತಿಯ ಪತ್ತೆ ಇನ್ನಷ್ಟೇ ಆಗಬೇಕಿದೆ ಎಂದು ಸೇನೆ ತಿಳಿಸಿದೆ. ಈ ಮಧ್ಯೆ, ಥಾಮಸ್‌ ಚೆರಿಯನ್‌ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಕೇರಳದಲ್ಲಿರುವ ಅವರ ಕುಟುಂಬಸ್ಥರು ಸಂತೋಷಪಟ್ಟಿದ್ದಾರೆ. ಜತೆಗೆ  ದುಃಖವೂ ಆಗಿದೆ ಎಂದು ಹೇಳಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next