Advertisement

ಮೈಸೂರು ಸಿಲ್ಕ್ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಯೋಜನೆ: ನಾರಾಯಣ ಗೌಡ

04:03 PM Sep 10, 2020 | keerthan |

ದಾವಣಗೆರೆ: ಮೈಸೂರು ಸಿಲ್ಕ್ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ರೇಷ್ಮೆ ಇಲಾಖೆ ಸಚಿವ ಡಾ. ನಾರಾಯಣ ಗೌಡ ತಿಳಿಸಿದ್ದಾರೆ.

Advertisement

ದಾವಣಗೆರೆಯಲ್ಲಿ ಶುಕ್ರವಾರ ಇಲಾಖಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ರೇಷ್ಮೆ ಉತ್ಪನ್ನಗಳಿಗೆ ತನ್ನದೇ ಆದ ಸಂಪ್ರದಾಯ, ಗುಣಮಟ್ಟದ ಶ್ರೇಷ್ಠತೆ ಇದೆ. ಮೈಸೂರು ರೇಷ್ಮೆ ಉತ್ಪನ್ನಗಳನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲಾಗುವುದು ಎಂದು ತಿಳಿಸಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕೃಷಿ ಟೂರಿಸಂಗೆ ಹೆಚ್ಚಿನ ಉತ್ತೇಜನ: ಸಚಿವ ನಾರಾಯಣ ಗೌಡ

ಮುಂಬಯಿನಲ್ಲಿ ಕೆಎಸ್ಐಸಿಯ ನಾಲ್ಕು ಮಳಿಗೆ ಪ್ರಾರಂಭಿಸಲಾಗುವುದು. ಅಮೇರಿಕಾದ ಅಕ್ಕ ಸಮ್ಮೇಳನದಲ್ಲೂ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು. ಕೆಲ ಕಾರಣದಿಂದ ದಾವಣಗೆರೆಯಲ್ಲಿ ಮುಚ್ಚಿರುವ ಕೆಎಸ್ಐಸಿ ಮಳಿಗೆ ಪುನಾರಂಭಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next