Advertisement

ವರ್ಷಾಂತ್ಯಕ್ಕೆ ಬೇಲಾಪುರ -ಪೆಂಡಾರ್‌ ಮೆಟ್ರೋ ಸೇವೆ ಪ್ರಾರಂಭಿಸಲು ಯೋಜನೆ

12:49 PM Jul 18, 2021 | Team Udayavani |

ನವಿಮುಂಬಯಿ: ವಿವಿಧ ಕಾರಣ ಗಳಿಂದಾಗಿ ಕಳೆದ ಹತ್ತು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿರುವ ಬೇಲಾಪುರ – ಪೆಂಡಾರ್‌ನ ಸಿಡ್ಕೊ ಮೆಟೊ›à ಮಾರ್ಗವನ್ನು ಮಹಾಮೆಟ್ರೋ ಈ ವರ್ಷ ಪೂರ್ಣಗೊಳಿಸಲಿದ್ದು, ಸ್ವೀಕಾರ ಪತ್ರವನ್ನು ಇತ್ತೀಚೆಗೆ ನೀಡಲಾಗಿದೆ. ಮಹಾಮೆಟ್ರೊ ನಾಗಪುರ ಮೆಟೊ›à ಮಾರ್ಗವನ್ನು ಸಮಯಕ್ಕೆ ಪೂರ್ಣಗೊಳಿಸಿದ್ದು, ಪುಣೆ ಮೆಟ್ರೊದ ಕೆಲಸವನ್ನು ವೇಗಗೊಳಿಸುತ್ತಿದೆ. ಆದ್ದರಿಂದ ರಾಜ್ಯ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ. 11 ಕಿ. ಮೀ. ದೂರದ ಈ ಮಾರ್ಗ ಈ ವರ್ಷಾಂತ್ಯದ ವೇಳೆಗೆ ಪ್ರಾರಂಭಿಸಲು ಯೋಜಿಸಲಾಗಿದೆ.

Advertisement

ಗುತ್ತಿಗೆದಾರರಿಂದ ವಿಳಂಬ

ನವಿಮುಂಬಯಿಯ ದಕ್ಷಿಣ ಮತ್ತು ಉತ್ತರ ಉಪನಗರಗಳನ್ನು ಸಂಪರ್ಕಿಸಲು ಸಿಡ್ಕೊ ನಾಲ್ಕು ಮೆಟೊ›à ಮಾರ್ಗಗಳನ್ನು ಯೋಜಿಸಿದ್ದು, ಬೇಲಾ ಪುರ ರೈಲ್ವೇ ನಿಲ್ದಾಣದಿಂದ ದಕ್ಷಿಣ ನವಿ ಮುಂಬ ಯಿಯ ಕೊನೆಯ ಉಪನಗರವಾದ ಪೆಂಡಾರ್‌ಗೆ ಹೋಗುವ ಮಾರ್ಗದ ಕೆಲಸವನ್ನು ಮೇ 2011ರಲ್ಲಿ ಪ್ರಾರಂಭಿಸಲಾಯಿತು. ಈ 11 ಕಿ.ಮೀ ಉದ್ದದ ಮಾರ್ಗದ ಕಾಮಗಾರಿ ನಾಲ್ಕು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಲಾಗಿತ್ತು. ಆದರೆ ಗುತ್ತಿಗೆದಾರರ ನಿರ್ಲಕ್ಷÂದಿಂದಾಗಿ ಹತ್ತು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.

ಮಹಾಮೆಟ್ರೊಗೆ ಯೋಜನೆ ಹಸ್ತಾಂತರ

ಸಿಡ್ಕೊ ವ್ಯವಸ್ಥಾಪಕ ನಿರ್ದೇಶಕ ಡಾ| ಸಂಜಯ್‌ ಮುಖರ್ಜಿ ಅವರು ಕೆಲವು ತಿಂಗಳ ಹಿಂದೆ, ಮಾರ್ಗದ ಕೆಲಸವನ್ನು ರಾಜ್ಯದ ಮೆಟೊ›à ಕಂಪೆನಿಗೆ ಹಸ್ತಾಂತರಿಸಲು ನಿರ್ಧರಿಸಿದ್ದರು, ಇದು ನಾಗ ಪುರ ಮತ್ತು ಪುಣೆ ಮಹಾನಗರಗಳಿಗೆ ದಾರಿ ಮಾಡಿ ಕೊಡುತ್ತಿದೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಮತ್ತು ನಗರಾಭಿವೃದ್ಧಿ ಸಚಿವ ಏಕನಾಥ ಶಿಂಧೆ ಅವರೊಂದಿಗೆ ಚರ್ಚಿಸಿದ ಅನಂತರ ಈ ಯೋಜನೆಯನ್ನು ಕಾರ್ಯಾ ಚರಣೆ ಮತ್ತು ನಿರ್ವಹಣೆಗಾಗಿ ಮಹಾಮೆಟ್ರೊಗೆ ಹಸ್ತಾಂತರಿಸಲಾಗಿದ್ದು, ಇದರ ಅಧಿಕೃತ ಪ್ರಕಟಣೆ ಈಗಾಗಲೇ ಘೋಷಣೆಯಾಗಿದೆ.

Advertisement

ಹತ್ತು ವರ್ಷ ಮಹಾಮೆಟ್ರೊ ಕಾರ್ಯಾಚರಣೆ

ಯೋಜನೆಗಾಗಿ ಆರ್ಥಿಕ ಸಂಪನ್ಮೂಲ ಗಳನ್ನು ಉತ್ಪಾದಿಸಲಾಗುವುದು ಮತ್ತು ತಜ್ಞರನ್ನು ಮಹಾ ಮೆಟ್ರೊ ನೇಮಿಸಿ ಕೊಳ್ಳುತ್ತಿದೆ. ಮಹಾ ಮೆಟೊ›à ಈಗಾಗಲೇ ಈ ಯೋಜ ನೆಗಾಗಿ 20 ತಜ್ಞ ಎಂಜಿನಿಯರ್‌ಗಳನ್ನು ನೇಮಿಸಿ ಕೊಂಡಿದೆ. ಸಿಡ್ಕೊ ಈ ಯೋಜನೆಯನ್ನು ನಿರ್ವಹಿಸುತ್ತಿದ್ದು, ಅದಕ್ಕೆ 885 ಕೋಟಿ ರೂ. ವೆಚ್ಚವಾಗಲಿದೆ. ಅದಕ್ಕೆ ಬದಲಾಗಿ ಈಗ ಅದರ ವೆಚ್ಚವನ್ನು ಮಹಾಮೆಟ್ರೊ ಹೆಚ್ಚಿಸಲಿದ್ದು, ಕಾರ್ಯಾ ಚರಣೆಯನ್ನು ಹತ್ತು ವರ್ಷಗಳ ಕಾಲ ಮಹಾ ಮೆಟ್ರೊಗೆ ಹಸ್ತಾಂತರಿಸಲಾಗುವುದು. ಈ ಮಾರ್ಗವು ಉತ್ತರ ಮತ್ತು ದಕ್ಷಿಣ ನವಿ ಮುಂಬ ಯಿಯನ್ನು ಸಂಪರ್ಕಿ ಸುವ ಪರಿಸರ ಸ್ನೇಹಿ ಸಾರಿಗೆ ಮಾರ್ಗವನ್ನು ರಚಿ ಸಲಿದ್ದು, ಇದು ತಾಲೋಜಾ ಎಂಐಡಿಸಿಗೆ ಮತ್ತು ಎಂಐ ಡಿಸಿ ಮೂಲಕ ಕಲ್ಯಾಣ್‌-ಡೊಂಬಿವಲಿಗೆ ಸಂಪರ್ಕ ಕಲ್ಪಿಸುತ್ತದೆ.

ಅಡಚನೆಗಳ ನಿವಾರಣೆ

ನವಿಮುಂಬಯಿಗರು ಹಲವು ವರ್ಷಗ ಳಿಂದ ಮೆಟ್ರೊ ಗಾಗಿ ಕಾಯುತ್ತಿದ್ದಾರೆ. ಈ ಮಾರ್ಗವನ್ನು ಆದಷ್ಟು ಬೇಗ ಪೂರ್ಣಗೊಳಿ ಸಲು ಸರಕಾರ ಬದ್ಧ Ê ಾಗಿದೆ. ಇದಕ್ಕಾಗಿ ಈ ಯೋಜನೆಯ ಹಾದಿ  ಯಲ್ಲಿ ನಿಲ್ಲುವ ಎಲ್ಲ ಅಡೆತಡೆಗಳನ್ನು ತೆಗೆದು  ಹಾಕ  ಲಾಗಿದೆ. ಮಹಾ ಮೆಟ್ರೊಗೆ ಎರಡು ಮಾರ್ಗ ನಿರ್ಮಾ  ಣದ ಅನುಭ ವವಿದ್ದು, ನಾಗ ಪುರ ಮಾರ್ಗ

ವನ್ನು ಪ್ರಾರಂಭಿ ಸಲಾಗಿದ್ದು, ಪುಣೆಯಲ್ಲಿ ಕೆಲಸ ಪ್ರಗತಿಯಲ್ಲಿದೆ. ಮಹಾ ಮೆಟೊ›àದ ಕಾರ್ಯಕ್ಷಮತೆಯನ್ನು ನೋಡಿ ದರೆ, ನವಿಮುಂ ಬಯಿ ಮೆಟೊ›à ಕೂಡ ಶೀಘ್ರದÇÉೇ ಪ್ರಾರಂಭವಾಗುದರಲ್ಲಿ ಸಂಶಯವಿಲ್ಲ ಎಂದು ಸಚಿವ ಏಕನಾಥ ಶಿಂಧೆ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next