Advertisement

ಕೆರೆಗಳ ಭರ್ತಿಗೆ ಯೋಜನೆ: ಜಿಟಿಡಿ

05:48 AM Feb 09, 2019 | |

ಮೈಸೂರು: 2019-20ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಮೈಸೂರು ಜಿಲ್ಲೆಗೆ ವಿವಿಧ ಜನೋಪ ಯೋಗಿ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.

Advertisement

80 ಕೋಟಿ ರೂ. ವೆಚ್ಚದಲ್ಲಿ ಕಬಿನಿ ನದಿ ಯಿಂದ ಕುಡಿಯುವ ನೀರಿಗಾಗಿ ನುಗು ಜಲಾಶಯದ ಮೂಲಕ ನಂಜನಗೂಡು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವುದು, 40 ಕೋಟಿ ರೂ. ವೆಚ್ಚದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿನ ಹಾರಂಗಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಮತ್ತು 50 ಕೋಟಿ ರೂ. ವೆಚ್ಚದಲ್ಲಿ ತಿ.ನರಸೀಪುರ ತಾಲೂಕಿನಲ್ಲಿ ಬೆಟ್ಟಹಳ್ಳಿ ಗ್ರಾಮದ ನೀರಾವರಿ ಯೋಜನೆ ಘೋಷಣೆ.

40 ಕೋಟಿ ರೂ. ವೆಚ್ಚದಲ್ಲಿ ಹಾರಂಗಿ ಬಲದಂಡೆ ನಾಲೆಯ ಕೆ.ಆರ್‌.ನಗರ ಶಾಖಾನಾಲೆಯ ಲೈನಿಂಗ್‌ ಕಾಮಗಾರಿ ಗೂ ಹಣ ಬಿಡುಗಡೆ ಮಾಡುವ ಘೋಷಣೆ ಮಾಡಿದ್ದು, ವಿಶ್ವೇಶ್ವರಯ್ಯ ನಾಲಾ ಜಾಲದ 2ನೇ ಹಂತದ 1ನೇ ಘಟ್ಟದ ಆಧುನೀಕರಣಕ್ಕೂ ಯೋಜನೆ ರೂಪಿಸಲಾಗು ತ್ತಿದೆ. ಮೈಸೂರಿನ ಕರಕುಶಲಕರ್ಮಿಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ನೀಡುವ ಉದ್ದೇಶದಿಂದ ಜೆಎಸ್‌ಎಸ್‌ ಸಂಸ್ಥೆಗೆ 5 ಕೋಟಿ ರೂ. ಒದಗಿಸುವುದು. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸ್ವಾಗತಾರ್ಹ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next