Advertisement

ಆನೆ ಓಡಿಸಲು ಹೊಸ ಪ್ರಯೋಗ

06:00 AM Sep 09, 2018 | Team Udayavani |

ನವದೆಹಲಿ: ಭೂಮಿ ಮೇಲಿನ ಅತಿದೊಡ್ಡ ಪ್ರಾಣಿ ಆನೆಗೆ ಅತಿ ಸಣ್ಣ ಕೀಟದ ಬಗ್ಗೆ ಭಾರಿ ಹೆದರಿಕೆ! ಜೇನುನೊಣದ ಸದ್ದು ಕೇಳಿದರೆ ಆನೆಗಳು ದಿಕ್ಕಾಪಾಲಾಗಿ ಓಡುತ್ತವೆ. ವಿಜ್ಞಾನಿಗಳ ಪ್ರಕಾರ ಜೇನ್ನೊಣ ಹಾರಾಡುವ ಸದ್ದು ಕೇಳಿದ 80 ಸೆಕೆಂಡುಗಳಲ್ಲಿ ಆನೆಗಳು ಪೇರಿ ಕೀಳುತ್ತವೆ. ಇದೇ ಕಾರಣಕ್ಕೆ ಆನೆ ಹಾವಳಿ ಹೆಚ್ಚಿರುವ ಕಡೆ ಕೃಷಿಕರು ಜೇನ್ನೊಣವನ್ನೂ ಸಾಕಿರುತ್ತಾರೆ. ಇದೀಗ ಇದೇ ತಂತ್ರವನ್ನು ರೈಲ್ವೆ ಇಲಾಖೆ ಅಳವಡಿಸಿಕೊಂಡಿದೆ.

Advertisement

ರೈಲ್ವೆ ಹಳಿಗಳ ಮೇಲೆ ಓಡಾಡುವಾಗ ರೈಲು ಡಿಕ್ಕಿ ಹೊಡೆದು ಆನೆಗಳು ಸಾವನ್ನಪ್ಪುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. 2014 ರಿಂದ 2016ರ ಅವಧಿಯಲ್ಲಿ ಸುಮಾರು 35 ಆನೆಗಳು ಈ ರೀತಿ ಸತ್ತಿವೆ. 2017ರಲ್ಲಿ ಐದು ಆನೆಗಳು ಸತ್ತಿವೆ. ಹೀಗಾಗಿ ಈಶಾನ್ಯ ರೈಲ್ವೆ ವಿಭಾಗವು ನೂತನ ಸಾಧನವನ್ನು ಕಂಡುಕೊಂಡಿದೆ. 2000 ರೂ. ವೆಚ್ಚದ ಈ ಸಾಧನವು ಆನೆಗೆ ಕಿರಿಕಿರಿ ಉಂಟುಮಾಡುವ ಧ್ವನಿ ಹಾಗೂ ಕಂಪನವನ್ನು ಹೊಮ್ಮಿಸುತ್ತದೆ. ಸುಮಾರು 600 ಮೀ. ದೂರದವರೆಗೆ ಯಾವುದೇ ಜೇನುಗೂಡು ಇದ್ದರೂ, ಅದರಿಂದ ಜೇನು ನೊಣಗಳು ಹಾರಲು ಆರಂಭಿಸುತ್ತವೆ. ಆನೆಗಳು ರೈಲ್ವೆ ಹಳಿ ಬಳಿ ಇರುವುದು ತಿಳಿದು ಬಂದಾಗ ಈ ಸಾಧನವನ್ನು ರಿಮೋಟ್‌ ಮೂಲಕವೇ ಆನ್‌ ಮಾಡಬಹುದಾಗಿದ್ದು, ಜೇನು ನೊಣಗಳು ಕೆಲವೇ ನಿಮಿಷಗಳಲ್ಲಿ ಆನೆಗಳನ್ನು ಓಡಿಸುತ್ತವೆ. ಈ ಸಾಧನವನ್ನು ಇದೀಗ ಕಾಡಿನ ಭಾಗದಲ್ಲಿ ಆನೆಗಳು ಹೆಚ್ಚು ಓಡಾಡುವ ಎಲ್ಲ ರೈಲ್ವೆ ಲೈನ್‌ ಬಳಿ ಅಳವಡಿಸಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next