Advertisement

ಯೋಜಿಸಿ ಅಭ್ಯಾಸ ಮಾಡಿ

08:43 AM May 12, 2020 | Lakshmi GovindaRaj |

ಸಂಗೀತ ಕಲಿಕೆ ಅನ್ನೋದು ನಿರಂತರ ಪ್ರಕ್ರಿಯೆ. ಎಷ್ಟು ಸಮಯ ಸಿಗುತ್ತೆ? ಅದರ ಮೇಲೆ ಏನೇನೆಲ್ಲಾ ಪ್ರಾಕ್ಟೀಸ್‌ ಮಾಡಬಹುದು ಅನ್ನೋದನ್ನು ಪ್ಲಾನ್‌ ಮಾಡಬೇಕಾಗುತ್ತದೆ. ಪ್ರತಿದಿನ 15 ನಿಮಿಷದಷ್ಟು ಕಾಲ ಆ, ಇ, ಊ, ಮ  ಇವುಗಳನ್ನೆಲ್ಲಾ, ಶೃತಿಯ ಜೊತೆಯಲ್ಲಿ 12 ಸ್ವರಸ್ಥಾನಗಳಲ್ಲಿ ಹಾಡಬೇಕು. ಆಗ, ಸ್ವರದ ಮೇಲೆ ಉಸಿರು ಚೆನ್ನಾಗಿ ನಿಲ್ಲುತ್ತೆ. ಇವೆಲ್ಲ ಮುಗಿದ ಮೇಲೆ, ಕಾಲು ಗಂಟೆಯಾದರೂ ಅ ಕಾರ ಪ್ರಾಕ್ಟೀಸ್‌ ಮಾಡಬೇಕು. ಸರಳೆ, ಜಂಟಿ ವರಸೆಯನ್ನು  ಅಕಾರದಲ್ಲಿ ಹಾಡೋದನ್ನು ರೂಢಿ ಮಾಡಿಕೊಂಡರೆ, ಗಂಟಲು ಹದವಾಗುತ್ತದೆ.

Advertisement

ಸರಿಗಮಪದನಿಸ ಇದೆಯಲ್ಲ; ಇದನ್ನು ಒಂದೊಂದು ದಿನ, ಒಂದೊಂದು ರಾಗದಲ್ಲಿ ತಗೊಂಡು ಪ್ರಾಕ್ಟೀಸ್‌ ಮಾಡುತ್ತಾ ಹೋದರೆ, ರಾಗದ ಛಾಯೆಗಳ  ಮೇಲಿನ ಕಲ್ಪನಾ ಶಕ್ತಿ ಹೆಚ್ಚುತ್ತಾ ಹೋಗುತ್ತದೆ. ಅಲಂಕಾರವನ್ನೆಲ್ಲಾ ಪ್ರಾಕ್ಟೀಸ್‌ ಮಾಡೋಕೆ ಆಗೋಲ್ಲ. ಹೀಗಾಗಿ, ಅದರಲ್ಲಿ ಜತಿ ಅಲಂಕಾರ ಅಂತ ಏನಿದೆ, ಅದರಲ್ಲಿ ಒಂದೊಂದು ತಾಳದಲ್ಲೂ, ಒಂದೊಂದು ಜತಿ ಇರುತ್ತೆ. ಪ್ರತಿ ದಿವಸ,  ಒಂದೊಂದು ಪ್ರಾಕ್ಟೀಸ್‌ ಮಾಡ್ಕೊಬೇಕು.

ಇದನ್ನೆಲ್ಲಾ ಮುಕ್ಕಾಲು ಗಂಟೆಯಲ್ಲಿ ಮುಗಿಸಬಹುದು. ಉಳಿದ ಒಂದೂ ಕಾಲು ಗಂಟೆ ಏನಿರುತ್ತೆ, ಇದರಲ್ಲಿ 20 ನಿಮಿಷವನ್ನು ಆಲಾಪನೆಗೆ ಮೀಸಲಾಗಿಡಿ. ವರ್ಣವನ್ನು ಪ್ರತಿ ನಿತ್ಯ, ಬೇರೆ ಬೇರೆ ವೇಗದಲ್ಲಿ ಪ್ರಾಕ್ಟೀಸ್‌ ಮಾಡೋದು ಬಹಳ ಮುಖ್ಯ. ಇವತ್ತು ಯಾವ ರಾಗವನ್ನು ಪ್ರಾಕ್ಟೀಸ್‌ ಮಾಡಿರ್ತೀರೋ, ಅದರದೇ ಕೀರ್ತನೆ ಹಾಡೋದನ್ನು ರೂಢಿ ಮಾಡಿಕೊಳ್ಳಿ. ಆಗ, ಕೀರ್ತನೆಯಲ್ಲಿ ರಾಗದ ಸಂಚಾರ ಹೇಗೆಲ್ಲಾ  ಗಿರುತ್ತದೆ ಅನ್ನೋ ಅನುಭವ ಆಗುತ್ತದೆ.

ಕೇಳ್ಕೆ ಇಲ್ಲದೆ ಸಂಗೀತವೇ ಇಲ್ಲ. ಇದನ್ನು ಯಾರೂ ಕಲಿಸಿಕೊಡಬೇಕಿಲ್ಲ. ಹೀಗಾಗಿ, ಪ್ರಾಕ್ಟೀಸ್‌ ಮಾಡುವಾಗ, ರಾಗದ ಸಂಚಾರ ಕುರಿತು ಬರೆಯುವುದನ್ನು ರೂಢಿಮಾಡಿಕೊಳ್ಳಿ.  ಇದಕ್ಕಾಗಿ, ಹಿರಿಯರು ಹಾಡಿರುವ ಒಂದು ಹಾಡನ್ನು ಕೇಳಿಕೊಂಡು, ಆ ರಾಗದ ಸ್ವರಗಳನ್ನು ಬರೆಯುತ್ತಾ ಹೋಗಬೇಕು. ರಾಗ ಸಂಚಾರದ ವಿಚಾರಗಳು, ಮನಸ್ಸಿಗೆ ಬೇಗ ನಾಟುತ್ತವೆ. ಆಮೇಲೆ, ತಾವೇ ಬರೆದುಕೊಂಡಿರುವ  ಸ್ವರಗಳನ್ನು ನೋಡಿಕೊಂಡು ಹಾಡಬೇಕು. ಆಗ ಹಾಡು, ಮತ್ತಷ್ಟುನಿಚ್ಚಳವಾಗಿ ಮನಸ್ಸನ್ನು ಹೊಕ್ಕುತ್ತದೆ. ಇವೆಲ್ಲ, ರಾಗವನ್ನು ಹಾಡುಗಾರನ ಮನಸ್ಸಿನಲ್ಲಿ ಗಟ್ಟಿಯಾಗಿ ಕೂರಿಸಲು ಮಾಡುವ ಪ್ರಾಕ್ಟೀಸ್‌.

ಸುಶ್ರಾವ್ಯವಾಗಿ ಹಾಡುವುದೇನೋ ಸರಿ, ಹಾಗೆಯೇ, ಸಾಹಿತ್ಯದ ಉಚ್ಛಾರದ ಕಡೆಗೂ ಕೂಡ ಗಮನ ಕೊಡಬೇಕು. ಉಳಿದ ಸಮಯದಲ್ಲಿ, ಏನು ಹಾಡ್ತೀವೋ ಅದರ ಸಾಹಿತ್ಯದ ಅರ್ಥ ತಿಳಿಯಬೇಕು. ಎಲ್ಲಿ ಉಸಿರು ನಿಲ್ಲಿಸ್ಕೋಬೇಕು, ಸಾಹಿತ್ಯ ಛೇದ ಮಾಡದೆ ಹಾಡೋದು ಹೇಗೆ? ಅನ್ನುವ ವಿಚಾರವನ್ನೆಲ್ಲಾ, ಅಭ್ಯಾಸಕ್ಕೆ  ತಾಗಲೇ  ಗಮನಿಸಬೇಕು. ತಾಲೀಮಿಗೆ ಶಿಸ್ತು ಮತ್ತು ಏಕಾಗ್ರತೆ ಬಹಳ ಮುಖ್ಯ. ಸಂಗೀತದ ಹೊರತಾಗಿ, ಬೇರೆಯದನ್ನು ಯೋಚಿಸಲು ಮನಸ್ಸಿಗೆಅವಕಾಶ ಕೊಡಬಾರದು. ದಿನವೂ ಪ್ರಾಣಾಯಾಮ ಮಾಡಿದರೆ,  ಏಕಾಗ್ರತೆ ಸಾಧಿಸಲು ಸಾಧ್ಯ.  ಮನಸ್ಸನ್ನು ಒಂದೇ ಕಡೆ ಕೇಂದ್ರೀಕರಿಸುವುದೇ, ಪ್ರಾಕ್ಟೀಸಿನ ಮೊದಲ ಹೆಜ್ಜೆ.

Advertisement

* ವಿದ್ವಾನ್‌ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಹಿರಿಯ ಗಾಯಕರು, ಕರ್ನಾಟಕಿ

Advertisement

Udayavani is now on Telegram. Click here to join our channel and stay updated with the latest news.

Next