Advertisement
ತಾಲೂಕಿನ ಕೆಂಪಲಿಂಗನಹಳ್ಳಿ ಹಾಗೂ ಬಾವಿಕೆರೆೆ ಗ್ರಾಮಗಳ ಜನರಿಗೆ ಜೀವನಾಡಿಯಾಗಿರುವ ಈ ಕೆರೆಯಲ್ಲಿ ವರ್ಷದ 365 ದಿನಗಳ ಕಾಲ ನೀರಿರುತ್ತದೆ. ಮಳೆಗಾಲದಲ್ಲಿ ನೀರು ತುಂಬಿರುತ್ತದೆ. ಆದರೆ, ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಬಾಯಾರಿಕೆ ನೀಗಿಸುವ ಈ ಕೆರೆಗೆ ವಿಷದ ಮಿಶ್ರಣ ಮಾಡಿದಂತೆ ಪಾಸ್ಟಿಕ್ ಹಾವಳಿ ಹೆಚ್ಚಾಗಿದೆ. ಇದರಿಂದ, ಪ್ರಾಣಿ, ಪಕ್ಷಿಗಳು ಅಪಾಯದಂಚಿಗೆ ತಲುಪಿ, ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.
Related Articles
Advertisement
ಆ ನೂಲಕ ಕೆರೆಯಲ್ಲಿ ಗುಂಡಿಗಳು ನಿರ್ಮಾಣವಾಗುವಂತೆ ಮಾಡಿದ್ದಾರೆ. ಆದರೆ, ಕೆಲವು ಕೆರೆಗಳಲ್ಲಿ ಕದ್ದುಮುಚ್ಚಿ ಮಣ್ಣಿನ ಸಾಗಾಣಿಕೆ ನಡೆಯುತ್ತಿದ್ದರೂ ಜಿಲ್ಲಾಧಿಕಾರಿಗಳು ಮೌನವಾಗಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ. ಈಗಲಾದರೂ ಇಂತಹ ಕಳ್ಳರಿಗೆ ಕಡಿವಾಣ ಹಾಕದಿದ್ದರೆ ಮುಂದೆ ಗ್ರಾಮೀಣ ಜನರು ಬಹುದೊಡ್ಡ ಅಪಾಯ ಎದುರಿಸಬೇಕಾಗುತ್ತದೆ ಎಂಬ ಮಾತುಗಳೂ ಕೇಳಿಬರುತ್ತಿವೆ.
ಪ್ಲಾಸ್ಟಿಕ್ ಕೆರೆ: ಕೆಂಪಲಿಂಗನಹಳ್ಳಿ ದೇವಾಂಗ ಮಠದ ಸಮೀಪವಿರುವ ಈ ಕೆರೆ ರಸ್ತೆ ಪಕ್ಕದಲ್ಲಿರುವುದರಿಂದ ಪ್ಲಾಸ್ಟಿಕ್ ಪೇಪರ್ ಹಾಗೂ ವಸ್ತುಗಳನ್ನು ಕೆರೆಯಂಗಳದಲ್ಲಿ ಸುರಿಯಲಾಗಿದೆ. ಪರಿಣಾಮ ಗಾಳಿಗೆ ಹಾರಿಹೋಗಿ ಕೆರೆಯ ತುಂಬ ಪಾಸ್ಟಿಕ್ ವಸ್ತುಗಳು ತುಂಬಿಕೊಂಡಿವೆ. ಈ ಕೆರೆಯಲ್ಲಿ ಬೇಸಿಗೆಯಲ್ಲಿ ನೀರಿರುವುದರಿಂದ ಜಾನುವಾರಗಳು ಹಾಗೂ ಸಾವಿರಾರು ಪಕ್ಷಿಗಳು ನೀರು ಕುಡಿಯಲು ಈ ಕೆರೆಗೆ ಬರುತ್ತವೆ. ಆದರೆ, ಇಲ್ಲಿನ ಪ್ಲಾಸ್ಟಿಕ್ ಜಾನುವಾರಗಳ ದೇಹ ಸೇರುತ್ತಿವೆ. ಇನ್ನು ನೀರಿಗಾಗಿ ಬರುವ ಪಕ್ಷಿಗಳ ಕಾಲಿಗೆ ಪ್ಲಾಸ್ಟಿಕ್ ಕವರ್ ಸಿಲುಕಿ ನರಳಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಯಮ ಉಲ್ಲಂಘನೆ: ಕೆರೆಯಲ್ಲಿ ಇಂತಿಷ್ಟೇ ಅಡಿ ಆಳದವರೆಗೆ ಹೂಳೆತ್ತಬೇಕು. ಕೆಲವೊಮ್ಮೆ ಕೆರೆಯ ಕೀಟ್ರಂಚ್ ಮಿತಿಯವರೆಗೂ ಅಥವಾ ಕೆರೆಯ ತೂಬಿನ ಮಟ್ಟಕ್ಕೆ ತೆಗೆಯಬೇಕೆಂಬ ಸಣ್ಣ ನೀರಾವರಿ ಇಲಾಖೆ ನೀತಿನಿಯಮಗಳನ್ನು ಮಣ್ಣುಗಳ್ಳರು ಗಾಳಿಗೆ ತೂರಿದ್ದಾರೆ.
ನಮ್ಮ ಕೆರೆಯಲ್ಲಿ ವರ್ಷಪೂರ್ತಿ ನೀರಿರುತ್ತದೆ. ಆದರೆ,ಕೆಲವರು ಕದ್ದು ಮಣ್ಣು ಸಾಗಣೆ ಮಾಡಿ ಗುಂಡಿಗಳು ಬೀಳುವಂತೆ ಮಾಡಿದ್ದಾರೆ. ಹೂಳೆತ್ತಲು ನಿಯಮವಿದೆ.ಅದಕ್ಕೆ ವಿರುದ್ಧವಾಗಿ ಕೆಲಸ ಮಾಡುವವರನ್ನು ತಡೆಯಬೇಕಾದ ಅಧಿಕಾರಿಗಳು ಕಾಣೆಯಾಗಿದ್ದಾರೆ.-ಪ್ರದೀಪ್, ಸ್ಥಳೀಯ ಪ್ರಾಣಿ, ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರು ಸಿಗುವುದೇ ಕಷ್ಟ. ಇಂತಹ ಸಂದರ್ಭದಲ್ಲಿ ಕೆರೆಯ ನೀರು ಬೇಸಿಗೆಯಲ್ಲೂ ಪ್ರಾಣಿ, ಪಕ್ಷಿಗಳಿಗೆ ಅನುಕೂಲವಾಗಿರುವುದು ಸಂತೋಷ.ಆದರೆ ಇದಕ್ಕೆ ಪ್ಲಾಸ್ಟಿಕ್ ಪೇಪರ್‌ಗಳು ಮುಳ್ಳಾಗಿರುವುದು ಬಹಳ ಬೇಸರ ತಂದಿದೆ.ಸಮಬಂಧಪಟ್ಟ ಇಲಾಖೆ ಅಧಿಕಾರಿಗಳು ತಕ್ಷಣ ಸಮಸ್ಯೆ ಬಗೆಹರಿಸಬೇಕು.
-ನವೀನ್‌ಕುಮಾರ್, ಪಕ್ಷಿ ಪ್ರೇಮಿ.