ಕೊಚ್ಚಿ:ಹೊಸ ಮಸೀದಿಯ ನಿರ್ಮಾಣಕ್ಕೆ ಅನುಮತಿ ನಿರಾಕರಿಸಿ ಕೇರಳ ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಆದೇಶ ನೀಡಿದೆ.
ಈಗಾಗಲೇ ಹಲವು ಮಸೀದಿಗಳು ಇರುವ ಸ್ಥಳದಲ್ಲಿ ಹೊಸತನ್ನು ನಿರ್ಮಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ನ್ಯಾ.ಪಿ.ವಿ.ಕುಂಞಕೃಷ್ಣನ್ ನೇತೃತ್ವದ ನ್ಯಾಯಪೀಠ ಹೇಳಿದೆ.
ಕೇರಳದಲ್ಲಿ ಇರುವ ಜನರ ಸಂಖ್ಯೆಯನ್ನು ಹೋಲಿಕೆ ಮಾಡಿದರೆ ಧಾರ್ಮಿಕ ಕೇಂದ್ರಗಳ ಸಂಖ್ಯೆಯೇ ಇದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. “ಕೇರಳ ವಿಶೇಷ ರೀತಿಯ ಭೌಗೋಳಿಕ ಪ್ರದೇಶ ಹೊಂದಿದೆ. ಹೀಗಾಗಿಯೇ ಅದು ದೇವರೊಲಿದ ರಾಜ್ಯ ಎಂದು ಹೆಸರು ಪಡೆದಿದೆ. ಈಗ ಇರುವ ಧಾರ್ಮಿಕ ಕೇಂದ್ರಗಳ ಸಂಖ್ಯೆಯೇ ಹೆಚ್ಚಾಗಿದೆ. ಹೀಗಾಗಿಯೇ, ಹೊಸತರ ನಿರ್ಮಾಣಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.
ಮುಸ್ಲಿಂ ಸಮುದಾಯಕ್ಕೆ ಮಸೀದಿ ಅಗತ್ಯವಾಗಿದೆ. ಆದರೆ, ಪವಿತ್ರ ಕುರಾನ್‌ನ ಪ್ರಕಾರ ಅಲ್ಲಲ್ಲಿ ಮಸೀದಿಯ ನಿರ್ಮಾಣ ಅಗತ್ಯವಿಲ್ಲ ಎಂದು ನ್ಯಾ.ಪಿ.ವಿ.ಕುಂಞಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
“ಮನೆಯ ಪಕ್ಕದಲ್ಲಿಯೇ ಮಸೀದಿ ಇರಬೇಕು ಎಂದು ಹದೀಸ್ ಅಥವಾ ಪವಿತ್ರ ಕುರಾನ್‌ನಲ್ಲಿ ಉಲ್ಲೇಖವಾಗಿಲ್ಲ. ಮಸೀದಿ ಎಷ್ಟು ದೂರ ಇದೆ ಎನ್ನುವುದು ಮುಖ್ಯವಲ್ಲ. ಆದರೆ, ಅಲ್ಲಿಗೆ ಹೋಗುವುದು ಪ್ರಧಾನವಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.