Advertisement

ರೈತರ ಅನುಕೂಲಕ್ಕೆ ಪಿಕೆಪಿಎಸ್‌ ಹೊಸ ಕಾರ್ಯಕ್ರಮ

06:19 PM Dec 25, 2021 | Shwetha M |

ಮುದ್ದೇಬಿಹಾಳ: ಬಸರಕೋಡದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್‌)ದಿಂದ ಮುಂದಿನ ದಿನಗಳಲ್ಲಿ ರೈತರ ಅನುಕೂಲಕ್ಕಾಗಿ ಹಲವು ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುತ್ತದೆ ಎಂದು ಪಿಕೆಪಿಎಸ್‌ ಅಧ್ಯಕ್ಷ ಹೇಮರಡ್ಡಿ ಮೇಟಿ ಹೇಳಿದರು.

Advertisement

ಬಸರಕೋಡದ ಹೊರಗಿನ ಮಠದಲ್ಲಿ ಶುಕ್ರವಾರ ನಡೆದ ಪಿಕೆಪಿಎಸ್‌ 2021-22ನೇ ಸಾಲಿನ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಕೆಪಿಎಸ್‌ನ ಸರ್ವ ಸದಸ್ಯರ ಮಾರ್ಗದರ್ಶನದಲ್ಲಿ ವೇರ್‌ಹೌಸ್‌, ಗೋಡಾವನ್‌, ರೈತರಿಗೆ ಕಡಿಮೆ ಬೆಲೆಯಲ್ಲಿ ಕ್ರಿಮಿನಾಶಕ, ಗೊಬ್ಬರ ಒದಗಿಸಲು ಮತ್ತು ಪಿಕೆಪಿಎಸ್‌ನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.

ರೈತರ ಪರವಾಗಿ ಗ್ರಾಮದ ಪ್ರಗತಿ ಪರ ರೈತ ಮುಖಂಡ ಗುರನಾಥಗೌಡ ಬಿರಾದಾರ, ಪಿಕೆಪಿಎಸ್‌ ನಿರ್ದೇಶಕ ಲಕ್ಕಪ್ಪ ಸೋಮನಾಳ ಮಾತನಾಡಿದರು.

ಪಿಕೆಪಿಎಸ್‌ನ ನಿರ್ದೇಶಕರಾದ ಸೋಮನಗೌಡ ಮೇಟಿ, ಬಸವರಾಜ ಪಾಟೀಲ, ಸುನೀಲ ಸೂಳಿಭಾವಿ, ಯಲ್ಲಪ್ಪ ಛಲವಾದಿ, ಶಾಂತಪ್ಪ ಸಂಕನಾಳ, ಪಾರ್ವತಿ ಸಾಲಿಮಠ, ಸಿದ್ದಮ್ಮ ಬಿರಾದಾರ ಹಾಗೂ ಪಿಕೆಪಿಎಸ್‌ ನ ವ್ಯಾಪ್ತಿಯಲ್ಲಿನ ಬಸರಕೋಡ, ಸಿದ್ದಾಪುರ, ಗುಡದಿನ್ನಿ ಗುಂಡಕರ್ಚಗಿ ಗ್ರಾಮಗಳ ರೈತ ಸದಸ್ಯರು ಪಾಲ್ಗೊಂಡಿದ್ದರು. ಪಿಕೆಪಿಎಸ್‌ಪ್ರಭಾರ ಕಾರ್ಯನಿರ್ವಹಣಾಧಿ ಕಾರಿ ಬಿ.ಸಿ. ಪಾಟೀಲ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next