Advertisement

Bengaluru: ದೇಶದ ಸಿಲಿಕಾನ್‌ ವ್ಯಾಲಿ ಎಂಬ ಬೆಂಗಳೂರು ಪಟ್ಟಕ್ಕೇ ಕುತ್ತು?

09:36 PM Sep 17, 2024 | Team Udayavani |

ನವದೆಹಲಿ: ಭಾರತದ ಸಿಲಿಕಾನ್‌ ವ್ಯಾಲಿ ಎಂಬ ಪಟ್ಟವನ್ನು ಬೆಂಗಳೂರು ಕಳೆದುಕೊಳ್ಳಲಿದೆಯೇ?

Advertisement

ಹೌದು, ಇಂಥದೊಂದು ಪ್ರಶ್ನೆ ಮೂಡಲು ಕಾರಣವಿದೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್‌ ಗೋಯಲ್‌ ಅವರು ಬೆಂಗಳೂರು ಹೊರತಾದ ಮತ್ತು ಸಂಪೂರ್ಣವಾಗಿ ಉದ್ಯಮಗಳು, ನವೋದ್ಯಮಗಳಿಗೆ ಮೀಸಲಾದ ಹೊಸ ನಗರ ನಿರ್ಮಾಣದ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ದೆಹಲಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ಅವರು, ನಾವು ಈಗ ನಮ್ಮದೇ ಆದ ಸಿಲಿಕಾನ್‌ ವ್ಯಾಲಿಯನ್ನು ಹೊಂದುವಂತಾಗಬೇಕು. ಬೆಂಗಳೂರು ಭಾರತದ ಸಿಲಿಕಾನ್‌ ವ್ಯಾಲಿ ಎಂದು ನನಗೆ ತಿಳಿದಿದೆ. ಆದರೆ, ನಾವು ಆದರಾಚೆಗೂ ಯೋಚಿಸಬೇಕಿದೆ. ನಾವು ಎನ್‌ಐಸಿಡಿಸಿಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮತ್ತು ಉದ್ಯಮಿಗಳು, ನವೋದ್ಯಮಿಗಳು, ಅನ್ವೇಷಕರು, ಮತ್ತು ಕ್ರಾಂತಿಕಾರಕ ಬದಲಾವಣೆಗೆ ಸಾಮರ್ಥ್ಯವುಳ್ಳವರಿಗೆ ಮೀಸಲಾಗಿರುವ ಸಂಪೂರ್ಣ ಹೊಸ ನಗರವನ್ನು ರಚಿಸುವ ಬಗ್ಗೆ ಯೋಚಿಸುವ ಸಮಯ ಬಂದಿದೆ ಎಂದಿದ್ದಾರೆ.

ಹೊಸ ಸಿಲಿಕಾನ್‌ ವ್ಯಾಲಿಯನ್ನು ಸುಮಾರು 500 ಎಕರೆಯಲ್ಲಿ ನಿರ್ಮಾಣ ಮಾಡಬಹುದು ಎಂದು ಸಲಹೆ ನೀಡಿದ ಅವರು, ನವೋದ್ಯಮಗಳಿಗೆ ಸಂಬಂಧಿಸಿದಂತೆ ಸಮಗ್ರ ಉಪಕ್ರಮಗಳ ಸೃಷ್ಟಿಗಾಗಿ ಇನ್‌ವೆಸ್ಟ್‌ ಇಂಡಿಯಾ ರೀತಿಯಲ್ಲೇ ಲಾಭ ರಹಿತ ಸಂಸ್ಥೆಯನ್ನು ಹುಟ್ಟುಹಾಕಬಹುದು ಎಂದರು.

ಏನಿದು ಎನ್‌ಐಸಿಡಿಸಿ?

Advertisement

ಹೊಸ ಕೈಗಾರಿಕಾ ನಗರಗಳನ್ನು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಕಾರ್ಯಕ್ರಮ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್‌ ಅಭಿವೃದ್ಧಿ ನಿಗಮ (ಎನ್‌ಐಸಿಡಿಸಿ) ಹೊಂದಿದೆ.

ಪಿಯೂಷ್‌ ಗೋಯೆಲ್‌ ಹೇಳಿದ್ದೇನು?

– ಬೆಂಗಳೂರು ದೇಶದ ಸಿಲಿಕಾನ್‌ ವ್ಯಾಲಿ ಎಂದು ತಿಳಿದಿದೆ.

– ನಾವು ಬೆಂಗಳೂರು ಆಚೆಗೂ ಯೋಚಿಸುವ ಸಮಯ ಬಂದಿದೆ.

– ಭಾರತಕ್ಕೆ ಹೊಸ ಸಿಲಿಕಾನ್‌ ವ್ಯಾಲಿ ನಗರ ಅವಶ್ಯಕವಿದೆ

– ಸಂಪೂರ್ಣ ಸ್ಟಾರ್ಟ್‌ಅಪ್‌, ಉದ್ಯಮಗಳಿಗೆ ಮೀಸಲಿರಬೇಕು.

– ಎನ್‌ಐಸಿಡಿಸಿಯಿಂದಲೇ ಹೊಸ ಸಿಲಿಕಾನ್‌ ವ್ಯಾಲಿ ನಿರ್ಮಾಣ

– ಸ್ಟಾರ್ಟ್‌ಅಪ್‌ಗ್ಳಿಗೂ ಲಾಭ ರಹಿತ ಸಂಸ್ಥೆ ಸ್ಥಾಪನೆ ಅಗತ್ಯ

Advertisement

Udayavani is now on Telegram. Click here to join our channel and stay updated with the latest news.

Next