Advertisement
ಮಾ.19ರಂದು ಝಾನ್ಸಿ ರೈಲ್ವೇ ಸ್ಟೇಷನ್‌ನಲ್ಲಿ ಕೇರಳ ಮೂಲದ ಇಬ್ಬರು ಕ್ರೈಸ್ತ ಸನ್ಯಾಸಿನಿಗಳ ಮೇಲೆ ದಾಳಿ ನಡೆದಿದೆ ಎಂಬ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸಿಎಂ ಪಿಣರಾಯಿ ವಿಜಯನ್, ಕೇಂದ್ರ ಗೃಹ ಸಚಿವರಿಗೆ ಪತ್ರವನ್ನೂ ಬರೆದಿದ್ದರು.
ಕೇರಳದಲ್ಲಿ ಖಾಲಿಯಿರುವ ಮೂರು ರಾಜ್ಯಸಭಾ ಸ್ಥಾನಗಳಿಗೆ ಎಪ್ರಿಲ್ 12ರಂದು ನಡೆಯಬೇಕಿದ್ದ ಚುನಾವಣೆಯನ್ನು ಆಯೋಗವು ಮುಂದೂಡಿದೆ. ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ವೇಳೆ ರಾಜ್ಯಸಭಾ ಚುನಾವಣೆ ಅಗತ್ಯವಿಲ್ಲವೆಂಬ ಕಾನೂನು ತಜ್ಞರ ಸಲಹೆಯ ಹಿನ್ನೆಲೆಯಲ್ಲಿ ರಾಜ್ಯಸಭಾ ಚುನಾವಣೆಯನ್ನು ಮುಂದೂಡಲಾಗಿದೆ. ಕಾಂಗ್ರೆಸ್‌ಗೆ ಕುಲಾವಿ ಚಿಂತೆ
ಕೇರಳದಲ್ಲಿ ಇನ್ನೂ ಚುನಾವಣೆಯೇ ನಡೆದಿಲ್ಲ… ಅಷ್ಟರೊಳಗೆ ವಿಪಕ್ಷ ಯುಡಿಎಫ್ ಸಿಎಂ ಅಭ್ಯರ್ಥಿಯ ಕನಸು ಕಾಣುತ್ತಿದೆ. ಮಾಜಿ ಸಚಿವ ಊಮನ್ ಚಾಂಡಿ, ಹಿರಿಯ ಮುಖಂಡ ರಮೇಶ್ ಚೆನ್ನಿತ್ತಲ ಸಿಎಂ ಆಕಾಂಕ್ಷಿಗಳಾಗಿದ್ದು, ಇವರನ್ನು ಸರಿದೂಗಿಸಿಕೊಂಡು ಸಾಗುವುದೇ ಕಾಂಗ್ರೆಸ್‌ಗೆ ಸವಾಲಾಗಿದೆ. ಏತನ್ಮಧ್ಯೆ, ಹಿರಿಯ ಮುಖಂಡ ಎ.ಕೆ. ಆ್ಯಂಟನಿ, “ಎ.6ರ ಚುನಾವಣೆ ಮುಗಿದ ಬಳಿಕ ಯುಡಿಎಫ್ ತನ್ನ ಸಿಎಂ ಅಭ್ಯರ್ಥಿಯನ್ನು ಆರಿಸಲಿದೆ’ ಎಂದು ಕಿವಿಮಾತು ಹೇಳಿದ್ದಾರೆ.
Related Articles
ದಿನಸಿ ಅಂಗಡಿಗಳ ಮೂಲಕ ಆದ್ಯತೆಯಿಲ್ಲದ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ವಿತರಿಸುವ ಕೇರಳ ಸರಕಾರದ ಕ್ರಮವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಕ್ರಮಕ್ಕೆ ಚುನಾವಣ ಆಯೋಗ ತಡೆ ನೀಡಿದ್ದ ಹಿನ್ನೆಲೆಯಲ್ಲಿ, ಸಿಎಂ ಪಿಣರಾಯಿ ವಿಜಯನ್ ಹೈಕೋರ್ಟ್‌ನ ಮೆಟ್ಟಿಲೇರಿದ್ದರು. ಆಯೋಗದ ತಡೆ ತೆರವುಗೊಳಿಸಿದ ನ್ಯಾಯಪೀಠ, ಆಹಾರ ವಿತರಣೆ ವೇಳೆ ಮತದಾರರ ಮೇಲೆ ಯಾವುದೇ ಪ್ರಭಾವ ಬೀರದಂತೆಯೂ ಎಲ್‌ಡಿಎಫ್ ಸರಕಾರಕ್ಕೆ ಸೂಚಿಸಿದೆ.
Advertisement