Advertisement
ಕೃಷಿ ಭೂಮಿ ಹಡಿಲು ಉಪ್ಪು ನೀರು ಒಳನುಗ್ಗದಂತೆ ಸಮರ್ಪಕ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳದೆ ಇರುವುದರಿಂದ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗಿ ಹಡಿಲು ಬಿಡುವಂತಾಗಿದೆ. ಇಲ್ಲಿನ ತೆಂಗಿನ ತೋಟಗಳಿಗೂ ನೀರು ನುಗ್ಗಿದೆ. ಈ ಭಾಗದಲ್ಲಿ ಗ್ರಾ.ಪಂ. ನಡೆಸಿದ ತಡೆಗೋಡೆಯ ಕಾಮಗಾರಿ ಕಳಪೆಯಾಗಿದ್ದು ತಳಭಾಗದಲ್ಲಿ ಕೊರೆತ ಉಂಟಾಗಿ ನೀರು ಬರುತ್ತಿದೆ. ಇದರಿಂದ ಕೃಷಿ ಚಟುವಟಿಕೆಗಳನ್ನು ನಡೆಸಲಾಗುತ್ತಿಲ್ಲ. ಸಮಸ್ಯೆ ಪರಿಹರಿಸುವಂತೆ ವಿನಂತಿಸಲಾಗಿ ದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಉಪ್ಪು ನೀರಿನ ಸಮಸ್ಯೆಯಿಂದ ಕುಡಿಯುವ ನೀರಿನ ಅಲಭ್ಯತೆ ಹೆಚ್ಚಾಗುತ್ತಿದೆ. ಕೂಡಲೇ ಹೊಳೆದಂಡೆ ಮತ್ತು ಕಿಂಡಿ ಅಣೆಕಟ್ಟು ನಿರ್ಮಿಸಬೇಕು. ಸಂಬಂಧಪಟ್ಟ ಇಲಾಖೆ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ನೀರಿನ ತತ್ವಾರ ನೀಗಿಸಿ, ಕೃಷಿ ಚಟುವಟಿಕೆ ನಡೆಸಲು ಅನುಕೂಲ ಕಲ್ಪಿಸಬೇಕು ಎಂದು ಸ್ಥಳೀ ಯರು ಆಗ್ರಹಿಸಿದ್ದಾರೆ. ಪತ್ರ ಬರೆಯಲಾಗುವುದು
ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ತಡೆಗೋಡೆ, ಕಿಂಡಿ ಅಣೆಕಟ್ಟು ನಿರ್ಮಾಣದ ಬಗ್ಗೆ ಸಣ್ಣ ನೀರಾವರಿ ಇಲಾಖೆಗೆ ಪತ್ರ ಬರೆಯುತ್ತೇವೆ.
-ಪ್ರವೀಣ್ ಡಿ’ಸೋಜ, ಪಿ.ಡಿ.ಒ., ಉದ್ಯಾವರ ಗ್ರಾ.ಪಂ.
Related Articles
ಉಪ್ಪು ನೀರಿನ ಸಮಸ್ಯೆ ಬಗ್ಗೆ ಶಾಸಕರ ಮೂಲಕ ತಡೆಗೋಡೆ, ಕಿಂಡಿ ಅಣೆಕಟ್ಟು ನಿರ್ಮಾಣಕ್ಕಾಗಿ ಕನಿಷ್ಠ ಸುಮಾರು 50 ಲಕ್ಷ ರೂ. ಅನುದಾನಕ್ಕಾಗಿ ಸಣ್ಣ ನೀರಾವರಿ ಸಚಿವರಿಗೆ ಮನವಿ ಮಾಡಲಾಗಿದೆ. -ಗಿರೀಶ್ ಸುವರ್ಣ ಪಿತ್ರೋಡಿ, ನಿಕಟಪೂರ್ವ ಸದಸ್ಯ, ಉದ್ಯಾವರ ಗ್ರಾ.ಪಂ.
Advertisement