Advertisement
ದಿಲ್ಲಿಯ ಎಟಿಎಂ ಯಂತ್ರದಿಂದ ಬಂದ ಪಿಂಕ್ ಬಣ್ಣದ ನೋಟಿನಲ್ಲಿ ಆರ್‌ಬಿಐ ಹೆಸರೇ ಕಣ್ಮರೆ ಯಾಗಿದ್ದು, “ಚಿಲ್ಡ್ರನ್ಸ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಮುದ್ರಿಸಲಾಗಿದೆ! ಆರ್‌ಬಿಐನ ಮುದ್ರೆ ಇರಬೇಕಾದ ಜಾಗದಲ್ಲಿ “ಪಿಕೆ’ ಎಂಬ ಹೆಸರು ಅಚ್ಚಾಗಿದೆ. ಸಾಲದೆಂಬಂತೆ ನೋಟಿನ ಮೇಲ್ಭಾಗದ ಎಡ ಮೂಲೆಯಲ್ಲಿ “ಭಾರತೀಯ ಮನೋರಂಜನ್ ಬ್ಯಾಂಕ್’ ಎಂಬ ವ್ಯಂಗ್ಯಶೀರ್ಷಿಕೆ. ಈ ನೋಟಿನ ಸೀರಿಯಲ್ ಸಂಖ್ಯೆ “0000000′! ಇಲ್ಲಿ ರುಪೀ ಚಿಹ್ನೆಯೇ ಇಲ್ಲ, ಗವರ್ನರ್ ಸಹಿಯೂ ಇಲ್ಲ!
ಹಲವು ವ್ಯಂಗ್ಯಗಳ ಲೋಪ ತುಂಬಿಕೊಂಡ 2 ಸಾವಿರ ರೂ.ನ ನೋಟುಗಳು ಸಂಗಮ್ ವಿಹಾರ್‌ನ ಎಟಿಎಂನಲ್ಲಿ ಪತ್ತೆಯಾಗಿದ್ದು, ರೋಹಿತ್ ಕುಮಾರ್ ಎಂಬವರು ಫೆ.6ರಂದು ಡ್ರಾ ಮಾಡಿಕೊಂಡಿದ್ದರು. ಒಟ್ಟು 8 ಸಾವಿರ ರೂ. ನೋಟುಗಳಲ್ಲಿ ನಾಲ್ಕೂ ನೋಟುಗಳು ನಕಲಿಯಾಗಿವೆ. ಎಲ್ಲದರ ಮೇಲೂ ದೋಷಗಳು ತುಂಬಿಕೊಂಡಿವೆ.