Advertisement

ಒಂದು ಕೋಟಿ ಜನಸಂಖ್ಯೆಯಿರುವ ನಗರಕ್ಕೆ ಪಿಂಕ್‌ ಬಸ್‌

10:04 AM Mar 14, 2020 | Hari Prasad |

ಹೊಸದಿಲ್ಲಿ: ಒಂದು ಕೋಟಿ ಜನಸಂಖ್ಯೆಯಿರುವ ನಗರಗಳಲ್ಲಿ ಪಿಂಕ್‌ ಬಸ್‌ಗಳನ್ನು ಪರಿಚಯಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾಹಿತಿ ನೀಡಿದ ಅವರು, ಈಗಾಗಲೇ ಕೆಲವು ನಗರಗಳಲ್ಲಿ ಪಿಂಕ್‌ ಬಸ್‌ ಸೇವೆ ಕಲ್ಪಿಸಲಾಗಿದ್ದು, ಯಶಸ್ವಿಯಾಗಿ ನಡೆಯುತ್ತಿದೆ.

Advertisement

ಈ ಬಸ್‌ಗಳಲ್ಲಿ ಪ್ರಯಾಣಿಕರು ಸೇರಿದಂತೆ ಚಾಲಕ, ಕಂಡಕ್ಟರ್‌ ಕೂಡ ಮಹಿಳೆಯರೇ ಇರುತ್ತಾರೆ ಎಂದು ತಿಳಿಸಿದ್ದಾರೆ. ಹೊಸದಾಗಿ ತಯಾರಿಸುವ ಬಸ್‌ಗಳಲ್ಲಿ ಪ್ಯಾನಿಕ್‌ ಬಟನ್‌ ಹಾಗೂ ಸಿಸಿ ಕ್ಯಾಮೆರಾ ಅಳವಡಿಸುವಂತೆ ಕಂಪೆನಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ದ್ವಿಚಕ್ರ, ತ್ರಿಚಕ್ರ ಎಲೆಕ್ಟ್ರಿಕ ವಾಹನಗಳ ಖರೀದಿಗೆ ವಿನಾಯಿತಿ ನೀಡುವಂತೆ ಎಲ್ಲ ರಾಜ್ಯಗಳಿಗೆ ಸಲಹೆ ನೀಡಲಾಗಿದೆ. ಮಹಿಳೆಯರು ಕೂಡ ಈ ಎಲೆಕ್ಟ್ರಿಕ್‌ ವಾಹನಗಳನ್ನು ಚಲಾಯಿಸಬಹುದಾಗಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next