Advertisement

ಪಿಂಕ್‌ಬಾಲ್‌ ಟೆಸ್ಟ್‌: ಕಾಂಗರೂಗಳ ಕಾಡಿದ ಜೂಲನ್‌, ಪೂಜಾ

09:01 PM Oct 02, 2021 | Team Udayavani |

ಗೋಲ್ಡ್‌ ಕೋಸ್ಟ್‌: ಪಿಂಕ್‌ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಬೃಹತ್‌ ಮೊತ್ತ ದಾಖಲಿಸಿದ ಭಾರತ, ಬಳಿಕ ಬಲಿಷ್ಠ ಆಸ್ಟ್ರೇಲಿಯಕ್ಕೆ ಬೌಲಿಂಗ್‌ ರುಚಿ ತೋರಲಾರಂಭಿಸಿದೆ.

Advertisement

ಜೂಲನ್‌ ಗೋಸ್ವಾಮಿ, ಪೂಜಾ ವಸ್ತ್ರಾಕರ್‌ ಅವರ ದಾಳಿಗೆ ಸಿಲುಕಿದ ಆಸೀಸ್‌ 3ನೇ ದಿನದಾಟದ ಅಂತ್ಯಕ್ಕೆ 4 ವಿಕೆಟಿಗೆ 143 ರನ್‌ ಗಳಿಸಿದ್ದು, 234 ರನ್ನುಗಳ ಹಿನ್ನಡೆಯಲ್ಲಿದೆ. ಭಾರತ 8 ವಿಕೆಟಿಗೆ 377 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿದೆ.

ಭಾನುವಾರ ಕೊನೆ ದಿನವಾಗಿದ್ದು, ಟೆಸ್ಟ್‌ ಡ್ರಾ ಹಾದಿ ಹಿಡಿದಿದೆ. ಮಳೆಯ ಅಡಚಣೆ ಇಲ್ಲದೇ ಹೋಗಿದ್ದರೆ ಮಿಥಾಲಿ ಪಡೆ ಈ ಐತಿಹಾಸಿಕ ಟೆಸ್ಟ್‌ ಪಂದ್ಯದಲ್ಲಿ ಸಂಪೂರ್ಣ ಮೇಲುಗೈ ಸಾಧಿಸುವ ಎಲ್ಲ ಸಾಧ್ಯತೆ ಇತ್ತು.

5ಕ್ಕೆ 276 ರನ್‌ ಮಾಡಿದ್ದ ಭಾರತ, 3ನೇ ದಿನದಾಟದಲ್ಲಿ ಬಿರುಸಿನ ಬ್ಯಾಟಿಂಗಿಗೆ ಮುಂದಾಯಿತು. ಮೊದಲ ಅವಧಿಯಲ್ಲಿ ತನಿಯಾ ಭಾಟಿಯಾ (22) ಮತ್ತು ಪೂಜಾ ವಸ್ತ್ರಾಕರ್‌ (13) ವಿಕೆಟ್‌ ಕಳೆದುಕೊಂಡು 83 ರನ್‌ ಒಟ್ಟುಗೂಡಿಸಿತು.

ದೀಪ್ತಿ ಶರ್ಮ ಅವರ ಸೊಗಸಾದ ಅರ್ಧ ಶತಕ ಭಾರತದ ಸರದಿಯ ಆಕರ್ಷಣೆ ಆಗಿತ್ತು. 167 ಎಸೆತಗಳನ್ನು ನಿಭಾಯಿಸಿದ ದೀಪ್ತಿ 66 ರನ್‌ ಮಾಡಿದರು (8 ಬೌಂಡರಿ). ಇದು ಅವರ 2ನೇ ಟೆಸ್ಟ್‌ ಫಿಫ್ಟಿ.

Advertisement

ಇದನ್ನೂ ಓದಿ:ಡೆಲ್ಲಿಗೆ ಪ್ಲೇ-ಆಫ್ ಶ್ರೇಯಸ್‌; ಮುಂಬೈಗೆ 4 ವಿಕೆಟ್‌ ಸೋಲು; ಮುಂದಿನ ಹಾದಿ ಕಠಿಣ

ಪೂಜಾ ಅವರನ್ನು ಔಟ್‌ ಮಾಡಿದ ಎಲ್ಲಿಸ್‌ ಪೆರ್ರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್‌ ಉರುಳಿಸಿದ ಸಾಧನೆಗೈದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 5 ಸಾವಿರ ರನ್‌ ಜತೆಗೆ 300 ವಿಕೆಟ್‌ ಕಿತ್ತ ವಿಶ್ವದ ಪ್ರಥಮ ಆಟಗಾರ್ತಿ ಎಂಬುದು ಪೆರ್ರಿ ಹೆಗ್ಗಳಿಕೆ.

ಜೂಲನ್‌, ಪೂಜಾಗೆ ಜೋಡಿ ವಿಕೆಟ್‌
ಭಾರತದ ಅನುಭವಿ ವೇಗಿ ಜೂಲನ್‌ ಗೋಸ್ವಾಮಿ ಆಸ್ಟ್ರೇಲಿಯಕ್ಕೆ ಅವಳಿ ಆಘಾತ ನೀಡುವ ಮೂಲಕ ಅಪಾಯಕಾರಿಯಾಗಿ ಗೋಚರಿಸಿದರು. ಬೆತ್‌ ಮೂನಿ (4) ಮತ್ತು ಅಲಿಸ್ಸಾ ಹೀಲಿ (29) ವಿಕೆಟ್‌ ಜೂಲನ್‌ ಬುಟ್ಟಿಗೆ ಬಿತ್ತು. ಮೆಗ್‌ ಲ್ಯಾನಿಂಗ್‌ (38) ಮತ್ತು ಟಹ್ಲಿಯಾ ಮೆಕ್‌ಗ್ರಾತ್‌ (28) ವಿಕೆಟ್‌ಗಳನ್ನು ಪೂಜಾ ವಸ್ತ್ರಾಕರ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌:
ಭಾರತ-8 ವಿಕೆಟಿಗೆ 377 ಡಿಕ್ಲೇರ್‌ (ಮಂಧನಾ 127, ದೀಪ್ತಿ 66, ಪೂನಂ 36, ಶಫಾಲಿ 31, ಮಿಥಾಲಿ 30, ಮೊಲಿನಾಕ್ಸ್‌ 45ಕ್ಕೆ 2, ಸ್ಟೆಲ್ಲಾ 47ಕ್ಕೆ 2, ಪೆರ್ರಿ 76ಕ್ಕೆ 2). ಆಸ್ಟ್ರೇಲಿಯ-4 ವಿಕೆಟಿಗೆ 143 (ಲ್ಯಾನಿಂಗ್‌ 38, ಹೀಲಿ 29, ಮೆಕ್‌ಗ್ರಾತ್‌ 28, ಪೆರ್ರಿ ಬ್ಯಾಟಿಂಗ್‌ 27, ಜೂಲನ್‌ 27ಕ್ಕೆ 2, ಪೂಜಾ 31ಕ್ಕೆ 2).

 

Advertisement

Udayavani is now on Telegram. Click here to join our channel and stay updated with the latest news.

Next