Advertisement

ಕಮಲ್‌ಗೆ ಪಿಣರಾಯಿ ಬೆಂಬಲ

06:00 AM Nov 06, 2017 | Team Udayavani |

ನವದೆಹಲಿ: “ಹಿಂದೂ ಭಯೋತ್ಪಾದನೆ’ ಪದ ಬಳಕೆ ಮೂಲಕ ಕೆಲವು ಸಂಘಟನೆಗಳ ಆಕ್ರೋಶಕ್ಕೆ ಗುರಿಯಾಗಿರುವ ಬಹುಭಾಷಾ ನಟ ಕಮಲ್‌ ಹಾಸನ್‌ ಅವರ ಬೆಂಬಲಕ್ಕೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಹಾಗೂ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ನಿಂತಿದ್ದಾರೆ.

Advertisement

ಕಮಲ್‌ರನ್ನು ಶೂಟ್‌ ಮಾಡಿ ಕೊಲ್ಲಬೇಕು ಎಂದು ಅಖೀಲ ಭಾರತ ಹಿಂದೂ ಮಹಾಸಭಾ ನೀಡಿದ ಹೇಳಿಕೆಯನ್ನು ಸಿಎಂ ವಿಜಯನ್‌ ಖಂಡಿಸಿದ್ದು, ಕಮಲ್‌ಗೆ ಕೊಲೆ ಬೆದರಿಕೆ ಹಾಕಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಪಿಣರಾಯಿ ಅವರು, “ಮಹಾತ್ಮಗಾಂಧಿ, ಪಾನ್ಸರೆ, ದಾಭೋಲ್ಕರ್‌, ಕಲಬುರ್ಗಿ, ಗೌರಿ ಲಂಕೇಶ್‌ಗೆ ಏನಾಯಿತು ಮತ್ತು ಯಾಕಾಯಿತು ಎಂಬುದು ಇಡೀ ದೇಶಕ್ಕೇ ಗೊತ್ತು. ಈ ಪಟ್ಟಿಗೆ ಇನ್ನಷ್ಟು ಹೆಸರು ಸೇರಿಸುವಂಥ ಕ್ರಮಕ್ಕೆ ಕೂಡಲೇ ಕಡಿವಾಣ ಹಾಕಬೇಕು. ಕಮಲ್‌ಗೆ ಕೊಲೆ ಬೆದರಿಕೆ ಹಾಕಿರುವವರನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಬೆಂಬಲ ಸೂಚಿಸಿರುವ ಸಂಸದ ಶಶಿ ತರೂರ್‌, “ಪಿಣರಾಯಿ ಅವರ ಆಗ್ರಹಕ್ಕೆ ನನ್ನ ಸಹಮತವಿದೆ’ ಎಂದಿದ್ದಾರೆ.

25 ಸಾವಿರ ಬಹುಮಾನ: ಇನ್ನೊಂದೆಡೆ, ಕಮಲ್‌ ಮುಖಕ್ಕೆ ಮಸಿ ಬಳಿದವರಿಗೆ 25 ಸಾವಿರ ರೂ. ಬಹುಮಾನ ನೀಡುತ್ತೇನೆ ಎಂದು ಅಲಿಗಡದ ಮುಸ್ಲಿಂ ಯುವಕನೊಬ್ಬ ಘೋಷಿಸಿದ್ದಾನೆ. ಕಮಲ್‌ ಅವರು ದೇಶದ್ರೋಹಿಯಾಗಿದ್ದು, ತಮ್ಮ ಹೇಳಿಕೆಯ ಮೂಲಕ ಹಿಂದೂ-ಮುಸ್ಲಿಮರ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next