Advertisement

ಟಾಟಾ ಕೋವಿಡ್‌ ಆಸ್ಪತ್ರೆ ತೆರೆಯಲು ಪಿಣರಾಯಿ ಸರಕಾರ ವಿಫಲ: ಕೆ. ಶ್ರೀಕಾಂತ್‌

10:25 PM Sep 26, 2020 | sudhir |

ಕಾಸರಗೋಡು: ಕೋವಿಡ್‌ ಮಹಾಮಾರಿ ರೋಗ ಹರಡುವ ಆರಂಭ ಹಂತದಲ್ಲಿಯೇ ಟಾಟಾ ಗ್ರೂಪ್‌ ಚಟ್ಟಂಚಾಲ್‌ ತೆಕ್ಕಿಲ್‌ನಲ್ಲಿ 60 ಕೋಟಿ ರೂ. ವೆಚ್ಚದಲ್ಲಿ ಕೋವಿಡ್‌ ಆಸ್ಪತ್ರೆ ರೆಕಾರ್ಡ್‌ ವೇಗದಲ್ಲಿ ನಿರ್ಮಿಸಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿದರೂ ಇನ್ನೂ ಚಿಕಿತ್ಸೆ ಆರಂಭಿಸಲು ಸಾಧ್ಯವಾಗದಿರುವುದು ಪಿಣರಾಯಿ ಸರಕಾರದ ವಿಫಲತೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್‌ ಆರೋಪಿಸಿದರು.

Advertisement

ಟಾಟಾ ಕೋವಿಡ್‌ ಆಸ್ಪತ್ರೆ ಕೂಡಲೇ ಚಟುವಟಿಕೆ ಆರಂಭಿಸಬೇಕೆಂದು ಒತ್ತಾಯಿಸಿ ಬಿಜೆಪಿ ಉದುಮ ಮಂಡಲ ಸಮಿತಿ ಆಯೋಜಿಸಿದ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ಇಲಾಖೆ ಕಾಸರಗೋಡು ಜಿಲ್ಲೆಯನ್ನು ಹಿಂದಿನಿಂದಲೇ ಕಡೆಗಣಿಸುತ್ತಿದೆ. ಅದರ ಮುಂದುವರಿಕೆಯಾಗಿದೆ ನೇಮಕಗೊಂಡ ಡಾಕ್ಟರ್‌ಗಳನ್ನು, ಜ್ಯೂನಿಯರ್‌ ಡಾಕ್ಟರ್‌ಗಳನ್ನು ವರ್ಗಾವಣೆ ಮಾಡಿದ್ದು ಎಂದು ಅವರು ಹೇಳಿದರು.
ಉಕ್ಕಿನಡ್ಕ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆ ಪೂರ್ಣ ರೂಪದಲ್ಲಿ ಆರಂಭಿಸಬೇಕೆಂದೂ, ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್‌ಗಿಂತ ಮೊದಲಿನಂತೆಯೇ ಇತರ ಚಿಕಿತ್ಸಾ ಸೌಕರ್ಯಗಳನ್ನು ಏರ್ಪಡಿಸಬೇಕೆಂದು ಶ್ರೀಕಾಂತ್‌ ಒತ್ತಾಯಿಸಿದರು.

ಎಡರಂಗ ಸರಕಾರ ನೂತನ ಉದ್ಯೋಗ ಸೃಷ್ಟಿಸಿದೆ ಎಂಬ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್‌ ಅವರ ಹೇಳಿಕೆ ಸುಳ್ಳಾಗಿದೆ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿನ ಹುದ್ದೆಗಳಲ್ಲಿ ಹೆಚ್ಚಿನ ಹುದ್ದೆಗಳು ಖಾಲಿಯಿದೆ. ಜಿಲ್ಲೆಯ ಸರಕಾರಿ ಆಸ್ಪತ್ರೆಗಳ ವೆಂಟಿಲೇಟರ್‌ಗಳು, ಐಸಿಯುಗಳು ಚಟುವಟಿಕೆ ರಹಿತವಾಗಿದೆ. ಕೋವಿಡ್‌ ಸಾವು, ಹರಡುವಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಚಿಕಿತ್ಸಾ ವಲಯದಲ್ಲಿ ತಲೆದೋರುವ ನೌಕರರ ಕೊರತೆಯನ್ನು ಹಾಗೂ ಮೂಲ ಸೌಕರ್ಯಗಳ ಕೊರತೆಯನ್ನು ಪರಿಹರಿಸಬೇಕು ಕೆ.ಶ್ರೀಕಾಂತ್‌ ಒತ್ತಾಯಿಸಿದರು.

ಬಿಜೆಪಿ ಉದುಮ ಮಂಡಲ ಅಧ್ಯಕ್ಷ ಕೆ.ಟಿ.ಪುರುಷೋತ್ತಮನ್‌ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ವೇಲಾಯುಧನ್‌, ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ಎ.ಸದಾನಂದ ರೈ, ಜಿಲ್ಲಾ ಕಾರ್ಯದರ್ಶಿ ಮನುಲಾಲ್‌ ಮೇಲತ್ತ್, ಜಿಲ್ಲಾ ಸೆಲ್‌ ಕೋರ್ಡಿನೇಟರ್‌ ಎನ್‌.ಬಾಬುರಾಜ್‌, ಕೃಷಿಕ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಕುಮಾರ್‌, ಯುವಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯನ್‌ ಮಧೂರು ಮೊದಲಾದವರು ಉಪಸ್ಥಿತರಿದ್ದರು.

Advertisement

ಬಿಜೆಪಿ ಉದುಮ ಮಂಡಲ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣನ್‌ ನಂಬ್ಯಾರ್‌ ಸ್ವಾಗತಿಸಿದರು. ಮಂಡಲ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕೈಂತಾರ್‌ ವಂದಿಸಿದರು.

ಬಿಜೆಪಿ ನೇತಾರರಾದ ಸಿ. ಚಂದ್ರನ್‌, ಬಿ. ಜನಾರ್ದನನ್‌ ನಾಯರ್‌ ಕುತ್ತಿಕೋಲ್‌, ನ್ಯಾಯವಾದಿ ಬಿ.ರವೀಂದ್ರನ್‌, ಸಿ. ಕುಂಞಿಕಣ್ಣನ್‌, ತಂಬಾನ್‌, ಸದಾಶಿವನ್‌ ಮಣಿಯಂಗಾನಂ, ಕೆ. ಕಾತ್ಯಾìಯಿನಿ, ಮಹೇಶ್‌, ಗೋಪಾಲ್‌, ರಂಜಿತ್‌ ಕೆ.ಆರ್‌.ಗಂಗಾಧ‌ರನ್‌ ತಚ್ಚಂಗಾಡ್‌, ಎ.ಸಿಂಧು, ಕೆ.ಧರ್ಮಾವತಿ ಮೊದಲಾದವರು ನೇತೃತ್ವ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next