Advertisement

San Diego: ಅಮೆರಿಕ ಮಿಲಿಟರಿ ವಿಮಾನ ಪತನ… ಪೈಲಟ್ ಮೃತ್ಯು

01:49 PM Aug 26, 2023 | Team Udayavani |

ಸ್ಯಾನ್ ಡಿಯಾಗೋ: ಅಮೆರಿಕದ ಮೆರೈನ್ ಕಾರ್ಪ್ಸ್ ಎಫ್/ಎ-18 ಹಾರ್ನೆಟ್ ಫೈಟರ್ ಜೆಟ್‌ ಪತನಗೊಂಡು ಪೈಲೆಟ್ ಮೃತಪಟ್ಟಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.

Advertisement

ಸ್ಯಾನ್ ಡಿಯಾಗೋ ಬಳಿ ಗುರುವಾರ ರಾತ್ರಿ ದುರ್ಘಟನೆ ನಡೆದಿದ್ದು ಜೆಟ್‌ ಪತನಗೊಳ್ಳುವ ವೇಳೆ ಅದರಲ್ಲಿ ಓರ್ವ ಪೈಲೆಟ್ ಮಾತ್ರ ಇದ್ದುದಾಗಿ ಮೆರೈನ್ ಕಾರ್ಪ್ಸ್ ವಿಂಗ್ ಹೇಳಿಕೊಂಡಿದೆ.

ಅಮೆರಿಕದ ಕೋಸ್ಟ್ ಗಾರ್ಡ್ ಮತ್ತು ಸ್ಯಾನ್ ಡಿಯಾಗೋ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಗಳು ಗಂಟೆಗಳ ಕಾಲ ಸುದೀರ್ಘ ಹುಡುಕಾಟದ ಬಳಿಕ ಪೈಲಟ್ ಮೃತದೇಹ ಪತ್ತೆಯಾಗಿದೆ. ಈ ವೇಳೆ ಕಾರ್ಯಾಚರಣೆ ನಡೆಸಿದ ಉತ್ತರ ಕೆರೊಲಿನಾದ 2 ನೇ ಮೆರೈನ್ ಏರ್‌ಕ್ರಾಫ್ಟ್ ವಿಂಗ್ ಪೈಲೆಟ್ ಸಾವನ್ನಪಿರುವುದನ್ನು ದೃಢಪಡಿಸಿದೆ.

ಉತ್ತರ ಕೆರೊಲಿನಾದ 2 ನೇ ಮೆರೈನ್ ಏರ್‌ಕ್ರಾಫ್ಟ್ ವಿಂಗ್‌ ಟ್ವೀಟ್ ಮಾಡಿದ್ದು ‘ಭಾರವಾದ ಹೃದಯದಿಂದ, ಈ ಸಮಯದಲ್ಲಿ ನೌಕಾಪಡೆಯ ಕುಟುಂಬಕ್ಕೆ ನಮ್ಮ ಸಂತಾಪಗಳು ” ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ: National Film Awards: ಜೈ ಭೀಮ್‌,ಕರ್ಣನ್..‌ ಸಿನಿಮಾಗಳ ನಿರ್ಲಕ್ಷ್ಯ; ನಿರಾಶರಾದ ಫ್ಯಾನ್ಸ್

Advertisement
Advertisement

Udayavani is now on Telegram. Click here to join our channel and stay updated with the latest news.

Next