Advertisement

ಮಂಗಳೂರು: Plikula ಮೃಗಾಲಯಕ್ಕೆ ಹೊಸ ಅತಿಥಿಗಳ ಆಗಮನ

07:17 PM Apr 11, 2023 | Team Udayavani |

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೂ ಸಿಗಲಿದೆ.

Advertisement

ಹೌದು ಗುಜರಾತ್ ನ ರಾಜಕೋಟ್ ಮೃಗಾಲಯ ಮತ್ತು ಪಿಲಿಕುಳ ಜೈವಿಕ ಉದ್ಯಾನವನದ ಮಧ್ಯೆ ನಡೆದ ಪ್ರಾಣಿವಿನಿಮಯ ಒಪ್ಪದಂತೆ, ಪಿಲಿಕುಳಕ್ಕೆ ಒಂದು ಏಷ್ಯಾಟಿಕ್ ಸಿಂಹ, ಎರಡು ತೋಳಗಳು, ಎರಡು ಸ್ವರ್ಣ ಬಣ್ಣದ ನರಿಗಳು, ಅಪರೂಪದ ಕೊಂಬ್ ಬಾತು, 3 ಬಣ್ಣದ ಪೆಸೆಂಟ್ ಪಕ್ಷಿಗಳು ಆಗಮಿಸಿದೆ. ಅದರಂತೆ ಪಿಲಿಕುಳ ಮೃಗಾಲಯದಿಂದ ನಾಲ್ಕು ಕಾಡು ನಾಯಿಗಳು, ಒಂದು ಚಿರತೆ, ಎರಡು ಸಿವೆಟ್ ಬೆಕ್ಕು, ನಾಲ್ಕು ರೆಟಿಕ್ಯೂಲೇಟೆಡ್ ಹೆಬ್ಬಾವು, ನಾಲ್ಕು ಮೋಂಟೇನ್ ಹಾವು, ವೈನ್ ಹಾವು, ಮರಳು ಹಾವುಗಳನ್ನು ರಾಜಕೋಟ್ ಗೆ ಕಳುಹಿಸಿ ಕೊಡಲಾಗಿದೆ.

ಪಿಲಿಕುಳಕ್ಕೆ ಆಗಮಿಸಿದ ತೋಳ ಅಪಾಯದಂಚಿನಲ್ಲಿರುವ ಪ್ರಾಣಿ ಎಂದು ಗುರುತಿಸಲ್ಪಟ್ಟಿದೆ. ಈ ಹಿಂದೆ ಸಾಮಾನ್ಯವಾಗಿ ಕಾಣಿಸಿಗುತಿದ್ದ ತೋಳಗಳು ಈಗ ಭಾರತದಲ್ಲಿ ಕಾಣುವುದು ಅಪರೂಪ. ಪಿಲಿಕುಲದಲ್ಲಿ ಅಪಾಯದಂಚಿನಲ್ಲಿರುವ ಪ್ರಾಣಿಗಳಾದ ಕಾಡುನಾಯಿಗಳು, ಹೈನಗಳು ಸಂತಾನಾಭಿವೃದ್ಧಿಗೊಳಿಸುತ್ತಿರುವುದು ಮೃಗಾಲಯದ ಅಧಿಕಾರಿಗಳಿಗೆ ಸಂತಸ ತಂದಿದೆ. ತೋಳಗಳಿಗಾಗಿ ರಿಲಯನ್ಸ್ ಫೌಂಡೇಷನ್‌ ನೀಡಿದ ದೇಣಿಗೆಯಲ್ಲಿ ವಿಶಾಲವಾದ ಆವರಣ ನಿರ್ಮಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಪಿಲಿಕುಳಕ್ಕೆ ಹೊಸದಾಗಿ ಆಗಮಿಸಿದ ಪ್ರಾಣಿಗಳು ಪರಿಸರಕ್ಕೆ ಹೊಂದಿಕೊಳಲು ಕೆಲ ಕಾಲ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಚುನಾವಣೆ 2023: ಚಿಕ್ಕೋಡಿ ಮೂರು ಬಾರಿ “ಪಕ್ಷೇತರರ ಪಾರುಪತ್ಯ”

Advertisement

Advertisement

Udayavani is now on Telegram. Click here to join our channel and stay updated with the latest news.

Next