Advertisement

ನಾಯಿಗಳ ದಾಳಿಗೆ 10 ಕಾಡುಕುರಿಗಳು ಸಾವು

02:26 AM Jun 27, 2020 | Sriram |

ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದ ಆವರಣದೊಳಗೆ ನುಗ್ಗಿದ ಬೀದಿನಾಯಿಗಳು ಪ್ರಾಣಿ ಸಂಗ್ರಹಾಲಯದಲ್ಲಿದ್ದ 10 ಕಾಡುಕುರಿಗಳನ್ನು ಕೊಂದು, ಐದನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ಗಾಯಗೊಂಡ ಕುರಿಗಳಿಗೆ ಪಿಲಿಕುಳದಲ್ಲಿಯೇ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಪಿಲಿಕುಳದಲ್ಲಿ ಸುಮಾರು 40ರಷ್ಟು ಕಾಡುಕುರಿಗಳಿವೆ. ಇವುಗಳಿಗೆ ಪ್ರತ್ಯೇಕ ಆವರಣವನ್ನು ಕಲ್ಪಿಸಲಾಗಿದೆ. ಆದರೆ, ಶುಕ್ರವಾರ ಮುಂಜಾನೆ ಹೊರಭಾಗದಿಂದ ಬಂದ ನಾಲ್ಕೈದು ನಾಯಿಗಳು ಏಕಾಏಕಿ ಕಾಡುಕುರಿಗಳ ಆವರಣದೊಳಗೆ ನುಗ್ಗಿವೆ. ನಾಯಿಗಳು ಕಾಡುಕುರಿಗಳನ್ನು ಅಟ್ಟಾಡಿಸಿದ ಪರಿಣಾಮ ಹತ್ತು ಸಾವನ್ನಪ್ಪಿದ್ದು, ಐದು ತೀವ್ರವಾಗಿ ಗಾಯಗೊಂಡಿದೆ. ಕುರಿಗಳನ್ನು ನಾಯಿಗಳು ಕಚ್ಚಿಕೊಂದಿದ್ದು, ಉಳಿದವು ಭಯದಿಂದ ಓಡಾಡಿ ಆವರಣ ಗೋಡೆಗೆ ಬಡಿದು ಗಾಯಗೊಂಡಿದೆ ಎನ್ನಲಾಗಿದೆ.

ಘಟನೆ ಸಂಬಂಧ ಪ್ರತಿಕ್ರಿಯೆ ನೀಡಿದ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್‌ ಭಂಡಾರಿ ಅವರು, “ಮೃಗಾಲಯದ ಸುತ್ತ ಆವರಣಗೋಡೆಯಿದೆ. ಆದರೆ ರಾತ್ರಿ ಗಾಳಿಗೆ ಆವರಣದ ಗೋಡೆಯ ಮೇಲೆ ಮರ ಬಿದ್ದಿತ್ತು. ಈ ಮರಕ್ಕೆ ಏರಿ ನಾಯಿಗಳು ಒಳ ಪ್ರವೇಶಿಸಿರ ಬಹುದು. ನಾಯಿಗಳ ದಾಳಿಗೆ 10 ಕಾಡುಕುರಿ
ಗಳು ಬಲಿ ಯಾಗಿವೆ.

ಹೀಗಾಗಿ ಕಂಪೌಂಡ್‌ ಸುತ್ತ ಅಪಾಯಕಾರಿ ಮರಗಳನ್ನು ತೆರವುಗೊಳಿಸಲಾಗುವುದು. ಮತ್ತು ಆವರಣ ಗೋಡೆಯನ್ನುಎತ್ತರಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ರಾತ್ರಿ ಸಮಯದಲ್ಲಿ ಭದ್ರತಾ ಸಿಬಂದಿ ಮೃಗಾಲಯದ ಒಳಗೆ ಗಸ್ತು ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಜಿಂಕೆಯನ್ನು
ಹೋಲುವ ಕಾಡುಕುರಿ
ಕಾಡುಕುರಿಯು ದಕ್ಷಿಣ ಪೂರ್ವ ಏಷ್ಯಾ ಖಂಡದ ಕಾಡುಗಳಲ್ಲಿ ಕಾಣಸಿಗುವ “ಮುಂಟ್‌ ಜಾಕ್‌’ ಎಂಬ ಜಿಂಕೆ ಜಾತಿಗೆ ಸೇರಿದ ಪ್ರಾಣಿ. ಆಪತ್ತಿನಲ್ಲಿರುವ ಸಮಯದಲ್ಲಿ ಇವು
ಇತರ ಕಾಡುಕುರಿಗಳಿಗೆ ಎಚ್ಚರಿಕೆ ನೀಡುವುದಕ್ಕಾಗಿ ಬೊಗಳು ವಂತಹ ಶಬ್ದ ಮಾಡುವುದರಿಂದ ಇವುಗಳನ್ನು “ಬೊಗಳುವ ಜಿಂಕೆ’ ಎಂದು ಕೂಡ ಕರೆಯುತ್ತಾರೆ. ಇವು ಮುಂಜಾನೆ, ಮುಸ್ಸಂಜೆಯಲ್ಲಿ ಮೇಯುತ್ತಿರುತ್ತವೆ. ಕಾಡುಕುರಿಯು ಎಲೆ, ಹೂವು, ಹಣ್ಣುಹಂಪಲು, ಬೀಜಗಳು, ತೊಗಟೆ, ಶಿಲೀಂಧ್ರಗಳನ್ನು ತಿನ್ನುತ್ತವೆ. ಹೆಣ್ಣು ಹಾಗೂ ಗಂಡುಗಳಿಗೆಚೂಪಾದ ಕೋರೆಹಲ್ಲುಗಳಿರುತ್ತವೆ. ಈ ಹಲ್ಲುಗಳೇ ಪರಸ್ಪರ ಹೋರಾಡಲು ಸಹಕಾರಿಯಾಗುತ್ತದೆ ಎಂದು ಪಿಲಿಕುಳದ ಮೂಲಗಳು ತಿಳಿಸಿವೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next