Advertisement

ಪಿಲ್ಯ: ಪರಿಸರ ಮಾಹಿತಿ ಕಾರ್ಯಕ್ರಮ

03:30 AM Jul 14, 2017 | |

ವೇಣೂರು:  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಕಾರ್ಯಕ್ರಮಗಳ ಮೂಲಕ ಜನರ ಏಳಿಗೆಯ ಮೂಲಕ ದೇಶದ ಉನ್ನತಿ ಕಾರ್ಯವನ್ನು ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆಯವರು ಮಾಡುತ್ತಿದ್ದಾರೆ ಎಂದು ಅಳದಂಗಡಿ ಗ್ರಾ.ಪಂ. ಅಧ್ಯಕ್ಷ ಸತೀಶ್‌ ಮಿತ್ತಮಾರು ಹೇಳಿದರು.

Advertisement

ಅವರು ಬುಧವಾರ ಪಿಲ್ಯದ ಸರಕಾರಿ ಉನ್ನತೀಕರಿಸಿದ  ಹಿ.ಪ್ರಾ. ಶಾಲೆಯಲ್ಲಿ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು, ಸ್ವಸಸಹಾಯ ಸಂಘಗಳ ಒಕ್ಕೂಟ ಹಾಗೂ ಪಿಲ್ಯ ಶಾಲಾ ವತಿಯಿಂದ ನಡೆದ ಪರಿಸರ ಸಂರಕ್ಷಣ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಡಿನಲ್ಲಿ  ಹಣ್ಣು ಹಂಪಲುಗಳನ್ನು ನೀಡುವ ಮರಗಳ ಕ್ಷೀಣತೆಯಿಂದಾಗಿ ವನ್ಯಪ್ರಾಣಿಗಳು ಕಾಡನ್ನು ಬಿಟ್ಟು ನಾಡಿಗೆ ಬರುತ್ತಿವೆ. ಇದೀಗ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಹಣ್ಣಿನ ಗಿಡಗಳನ್ನು ನೆಡುತ್ತಿದೆ. ಅಳದಂಗಡಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಂತಹುದೇ ಗಿಡಗಳನ್ನು ನೆಡಲು ಇಲಾಖೆಗೆ ಸೂಚಿಸಿದ್ದೇವೆ. ಗದ್ದೆಗಳು ಕಡಿಮೆಯಾದ್ದರಿಂದ ಅಂತರ್ಜಲವೂ ಕಡಿಮೆಯಾಗುತ್ತಿದೆ. ಯೋಜನೆಯ ಇಂತಹ ಕಾರ್ಯಕ್ರಮಗಳಿಂದ ಪರಿಸರ ಕ್ಷೇಮವಾಗಿರಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಕನ್ನಡ ಭಾಷಾ ನಿವೃತ್ತ ಶಿಕ್ಷಕ ಬಾಬು ಶೆಟ್ಟಿ ನಾರಾವಿ  ಅವರು ಮಾತನಾಡಿ , ಅರಣ್ಯಕ್ಕೆ ದೊಡ್ಡ ಶತ್ರುವೆಂದರೆ ಮನುಷ್ಯನೇ ಆಗಿದ್ದಾನೆ.  ದೊಡ್ಡ ವಿಚಾರಗಳನ್ನು ಕಲಿತುಕೊಂಡವರು ಬದುಕಲು ವಿಚಾರವನ್ನು ಕಲಿತುಕೊಂಡಿಲ್ಲ.  ಗಿಡಮರಗಳಿಂದ ವಾಯು ಶುದ್ಧಿಯಾಗುತ್ತದೆ. ಹೀಗಾಗಿ ವೃಕ್ಷ ಪ್ರೀತಿ ಬೆಳೆಸಿಕೊಳ್ಳಬೇಕು ಎಂದ ಅವರು ಧರ್ಮಸ್ಥಳ ಕ್ಷೇತ್ರದಿಂದ ಮದ್ಯಪಾನ, ಕೃಷಿ ಸಮಸ್ಯೆಗಳ ನಿವಾರಣೆಗೆ ನಡೆಯುತ್ತಿರುವ ಕಾರ್ಯಗಳನ್ನು ಶ್ಲಾ ಸಿದರು.

ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶೈಲೇಶ್‌ ವಹಿಸಿದ್ದರು. ವೇದಿಕೆಯಲ್ಲಿ ಯೋಜನೆಯ ಅಳದಂಗಡಿ ವಲಯಅಧ್ಯಕ್ಷ ನಾರಾಯಣ, ಪಿಲ್ಯ ಒಕ್ಕೂಟದ ಅಧ್ಯಕ್ಷ ದೀಪಕ್‌ ಆಠವಳೆ  ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪರಿಸರ ಸಂಬಂಧಿ ಗೀತೆ, ಭಾಷಣವನ್ನು ಪ್ರಸ್ತುತಪಡಿಸಿದರು. ಪರಿಸರದ ಬಗ್ಗೆ ನಡೆದ ವಿವಿಧ ಸ್ಪರ್ಧೆಗಳಲ್ಲಿ  ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ರೂಪದ ಬಹುಮಾನಗಳನ್ನು ನೀಡಲಾಯಿತು. ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಗಿಡ ನೆಟ್ಟರು. ಕಾರ್ಯಕ್ರಮದಲ್ಲಿ  ಪಿಲ್ಯ ಒಕ್ಕೂಟದ ವತಿಯಿಂದ ಶಾಲೆಗೆ ಹತ್ತು ಫೈಬರ್‌ ಕುರ್ಚಿಗಳನ್ನು ದಾನವಾಗಿ ನೀಡಲಾಯಿತು.

Advertisement

ಶಾಲಾ ಮುಖ್ಯೋಪಾಧ್ಯಾಯಿನಿ ರೀಟಾ ಪಿಂಟೋ ಸ್ವಾಗತಿಸಿದರು. ವಲಯ ಮೇಲ್ವಿಚಾರಕ ದಿನೇಶ್‌ ಪ್ರಸ್ತಾವಿಸಿದರು. ಸಹ ಶಿಕ್ಷಕಿ ಶ್ವೇತಾ ವಂದಿಸಿದರು. ಒಕ್ಕೂಟದ  ಸೇವಾ ಪ್ರತಿನಿಧಿ ಹರಿಣಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next