ಹೊಸದಿಲ್ಲಿ: ದೇವಾಲಯಗಳ ದ್ವಾರಗಳನ್ನು ತೆರೆದ ನಂತರ ಇಲ್ಲಿಯವರೆಗೆ ಎರಡು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಚಾರ್ ಧಾಮ್ ತಲುಪಿದ್ದಾರೆ ಎಂದು ಉತ್ತರಾಖಂಡ ಚಾರ್ ಧಾಮ್ ದೇವಸ್ಥಾನ ಆಡಳಿತ ಮಂಡಳಿ ಸದಸ್ಯ ಡಾ.ಹರೀಶ್ ಗೌರ್ ಶುಕ್ರವಾರ ಹೇಳಿದ್ದಾರೆ.
ನವೆಂಬರ್ 5 ರಂದು ಗಂಗೋತ್ರಿ ಧಾಮ, ನವೆಂಬರ್ 6 ರಂದು ಕೇದಾರನಾಥ ಧಾಮ, ಯಮುನೋತ್ರಿ ಧಾಮ ಹಾಗೂ ನವೆಂಬರ್ 20 ರಂದು ಶ್ರೀ ಬದರಿನಾಥ ಧಾಮವನ್ನು ಮುಚ್ಚಲಾಗುವುದು ಎಂದು ಅವರು ತಿಳಿಸಿದ್ದಾರೆ.
“ತೃತೀಯ ಕೇದಾರ ಶ್ರೀ ತುಂಗನಾಥ ದೇವಸ್ಥಾನದ ಬಾಗಿಲು ಅಕ್ಟೋಬರ್ 30 ರಂದು ಮತ್ತು ದ್ವಿತೀಯ ಕೇದಾರ ಶ್ರೀ ಮದ್ಮಹೇಶ್ವರ ದೇವಾಲಯ ನವೆಂಬರ್ 22 ರಂದು ಚಳಿಗಾಲದ ಹಿನ್ನೆಲೆಯಲ್ಲಿ ಮುಚ್ಚಲಾಗುವುದು. ನವೆಂಬರ್ 25 ರಂದು ಶ್ರೀ ಮದ್ಮಹೇಶ್ವರ ಜಾತ್ರೆ ನಡೆಯಲಿದೆ” ಎಂದು ಅವರು ತಿಳಿಸಿದರು.
ಇದನ್ನೂ ಓದಿ:- ಹೊಸ ಐಪಿಎಲ್ ತಂಡ ಖರೀದಿಸುತ್ತಾರಂತೆ ದೀಪಿಕಾ- ರಣವೀರ್
ಚಾರ್ ಧಾಮ್ ಯಾತ್ರೆಯು ಸೆಪ್ಟೆಂಬರ್ 16 ರಂದು ನೈನಿತಾಲ್ ಹೈಕೋರ್ಟ್ ಯಾತ್ರೆಯ ಮೇಲಿನ ನಿಷೇಧವನ್ನು ತೆಗೆದುಹಾಕಿದ ನಂತರ ಆರಂಭವಾಗಿತ್ತು. ಸೆಪ್ಟೆಂಬರ್ 18 ರಂದು ಕಡ್ಡಾಯವಾಗಿ ಕೋವಿಡ್ -19 ನೆಗೆಟಿವ್ ವರದಿಯೊಂದಿಗೆ ಕೋವಿಡ್ ಲಸಿಕೆ ಹಾಕಿದ ಭಕ್ತರಿಗೆ ಮಾತ್ರ ಅನುಮತಿ ನೀಡಲಾಗಿತ್ತು.
ಈ ಯಾತ್ರೆಗೆ ಪ್ರತಿ ವರ್ಷ ದೇಶ ಮತ್ತು ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವುದು ವಿಶೇಷ.