ನವದೆಹಲಿ:ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ಅವಧಿಯಲ್ಲಿ ರಜೆ ನೀಡುವಂಥ ನಿಯಮ ಇರಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಶೈಲೇಂದ್ರ ಮಣಿ ತ್ರಿಪಾಠಿ ಅವರು ಲಂಡನ್‌ನ ಯುನಿವರ್ಸಿಟಿ ಕಾಲೇಜು ನಡೆಸಿರುವ ಅಧ್ಯಯನವನ್ನು ಅವರು ಉಲ್ಲೇಖಿಸಿದ್ದಾರೆ.
ಮುಟ್ಟಿನ ಅವಧಿಯಲ್ಲಿ ವಿದ್ಯಾರ್ಥಿನಿಯರು, ಉದ್ಯೋಗಸ್ಥ ಮಹಿಳೆಯರಿಗೆ ನೋವು ಉಂಟಾಗುತ್ತದೆ. ಹೃದಯಾಘಾತ ಉಂಟಾಗುವ ವೇಳೆ ಯಾವ ರೀತಿಯ ಸಂಕಟಗಳು ಉಂಟಾಗುತ್ತದೆಯೋ, ಅದೇ ಮಾದರಿಯ ನೋವನ್ನು ಅವರು ಅನುಭವಿಸುತ್ತಾರೆ.
ಇದರಿಂದಾಗಿ ಕೆಲಸ ಮಾಡುವ ಸಾಮರ್ಥ್ಯ ಕೂಡ ಕುಗ್ಗುತ್ತದೆ ಎಂದು ಅರಿಕೆ ಮಾಡಿದ್ದಾರೆ.
ದೇಶಕ್ಕೆ ಸಂಬಂಧಿಸಿದಂತೆ ಝೋಮ್ಯಾಟೋ, ಬೈಜೂಸ್, ಸ್ವಿಗ್ಗಿ, ಮಾತೃಭೂಮಿ ಸೇರಿದಂತೆ ಕೆಲವು ಸಂಸ್ಥೆಗಳಲ್ಲಿ ಮುಟ್ಟಿನ ಅವಧಿಯಲ್ಲಿ ಪಾವತಿ ರಜೆ ನೀಡುತ್ತವೆ ಎಂದು ಅರ್ಜಿಯವಲ್ಲಿ ವಾದಿಸಿದ್ದಾರೆ.