Advertisement

ಪಿಜಿ ಮಲ್ಲಿಗೆಯ ಪೋಯೆಮ್ಮು!

01:28 PM Aug 30, 2017 | |

ಎಲ್ಲ ಹುಡುಗಿಯರೂ ಸ್ವಲ್ಪ ದಿನ ಪಿಜಿಯಲ್ಲಿ ಇರಬೇಕು! ಮದುವೆಯಾದ ಮೇಲೆ ಅತ್ತೆ ಜೊತೆಗೆ ಹೇಗೆ ಅಡ್ಜಸ್ಟ್‌ ಆಗಬೇಕು ಎಂಬುದಕ್ಕಿದು ಟ್ರೈನಿಂಗ್‌ ಸೆಂಟರ್‌ ಇದ್ದಂತೆ. ಈ ಪಿಜಿ ವಾರ್ಡನ್‌ಗಳು ಯಾವ ಅತ್ತೆಗೂ ಕಡಿಮೆಯಿಲ್ಲ!

Advertisement

ಹೊರಗೆ ಹೋಗಲು ಸಜ್ಜಾಗಿ ನಿಂತ ಬೆಡ್‌- ಬಕೆಟ್‌- ಸೂಟ್‌ಕೇಸ್‌ಗಳು, “ಸರಿ ಕಣೇ, ಹೆಲ್ತ್‌ ಜೋಪಾನ. ಸರ್ಯಾಗಿ ಊಟ ಮಾಡು’, “ಕೀಪ್‌ ಇನ್‌ ಟಚ್‌, ಮರೀಬೇಡ’ ಎಂದು ಮೂಗುಜ್ಜಿಕೊಳ್ಳುವ ಹುಡುಗಿಯರು, ಬೇಗ ಲಗೇಜ್‌ ಎತ್ತಿಡಬಾರದೇ ಎಂದು ಅವಸರಿಸುವ ಕ್ಯಾಬ್‌ ಡ್ರೈವರ್‌… ಇದು ಹುಡುಗಿಯೊಬ್ಬಳು ಹಾಸ್ಟೆಲ್‌ ಬಿಟ್ಟು ಹೋಗುವಾಗಿನ ಸಾಮಾನ್ಯ ದೃಶ್ಯ.

ಜೈಲಿನಿಂದ ಬಿಡುಗಡೆಯಾಗುವ ದಿನ ಕೈದಿ ಜೈಲನ್ನ ಮಿಸ್‌ ಮಾಡಿಕೊಳ್ಳುವುದಿಲ್ಲವೇನೊ. ಆದರೆ, ಈ ಪೇಯಿಂಗ್‌ ಗೆಸ್ಟ್‌ಗಳು, ಹಾಸ್ಟೆಲ್‌ಗ‌ಳು ಜೈಲು ಅನ್ನಿಸಿದರೂ ಬಿಟ್ಟು ಬರುವಾಗ ಮಾತ್ರ ಅಳು ಬರುತ್ತದೆ. ಇರಿಟೇಟಿಂಗ್‌ ಅನ್ನಿಸುತ್ತಿದ್ದ ರೂಂಮೇಟ್‌, ವಾರ್ಡನ್‌ನ ಕಿರಿಕಿರಿ, ಉಪ್ಪಿಲ್ಲದ ಅಡುಗೆ, ಸ್ಲೋ ವೈಫೈ, ಸ್ಟ್ರಿಕ್ಟ್ ವಾಚ್‌ಮನ್‌ ಹೀಗೆ ಎಲ್ಲವೂ, ಎಲ್ಲರೂ ಆಪ್ತರೆನಿಸುವುದು ಕೊನೆಯ ದಿನವೇ. ಅವತ್ತು ತವರನ್ನು ತೊರೆದು ಹೋಗುವಾಗಿನ ನೋವು ಮನಸ್ಸಿನಲ್ಲಿ.    

ಶಾಲೆ- ಕಾಲೇಜುಗಳ ಹಾಸ್ಟೆಲ್‌ಗ‌ಳಲ್ಲಿ ಎಲ್ಲರೂ ಒಟ್ಟಿಗೆ 4-5 ವರ್ಷ ಕಳೆದು, ಕೋರ್ಸ್‌ ಮುಗಿಸಿ ದೂರಾಗುತ್ತಾರೆ. ಆದರೆ, ವರ್ಕಿಂಗ್‌ ವುಮೆನ್‌ ಪಿಜಿಗಳು ಹಾಗಲ್ಲ. ಎಲ್ಲೆಲ್ಲಿಂದಲೋ, ಯಾವಾಗ್ಯಾವಾಗೋ ಬಂದು ಒಟ್ಟಿಗೆ ಸೇರುತ್ತಾರೆ. ಯಾವಾಗ, ಯಾರು ಬಿಟ್ಟು ಹೋಗುತ್ತಾರೆ ಅಂತ ಹೇಳ್ಳೋದು ಕಷ್ಟ. ಮದುವೆ, ಕಂಪನಿ ಬದಲಾವಣೆ ಅಂತ ಒಬ್ಬೊಬ್ಬರೇ ದೂರಾಗುತ್ತಾರೆ.

ನನ್ನ ಅನಿಸಿಕೆ ಪ್ರಕಾರ, ಎಲ್ಲ ಹುಡುಗಿಯರೂ ಸ್ವಲ್ಪ ದಿನ ಪಿಜಿಯಲ್ಲಿ ಇರಬೇಕು! ಮದುವೆಯಾದ ಮೇಲೆ ಅತ್ತೆ ಜೊತೆಗೆ ಹೇಗೆ ಅಡ್ಜಸ್ಟ್‌ ಆಗಬೇಕು ಎಂಬುದಕ್ಕಿದು ಟ್ರೈನಿಂಗ್‌ ಸೆಂಟರ್‌ ಇದ್ದಂತೆ. ಈ ಪಿಜಿ ವಾರ್ಡನ್‌ಗಳು ಯಾವ ಅತ್ತೆಗೂ ಕಡಿಮೆಯಿಲ್ಲ! ಅವರು ಜೋರಾಗಿ ಬಯ್ಯದೇ ಕಿರಿಕಿರಿ ಮಾಡುತ್ತಾರೆ. “ರಾತ್ರಿ ನಿಮ್ಮ ರೂಮಿನಿಂದ ಗಲಾಟೆ ಕೇಳುತ್ತಿತ್ತಲ್ಲ’, “ನೋಡಿ ನೀವಲ್ಲಿ ನೀರು ಚೆಲ್ಲಿದ್ದೀರಿ’, “ದಿನಾ ಯಾಕಿಷ್ಟು ಲೇಟಾಗಿ ಬರಿ¤àರ?’, “ಬಡಿಸಿಕೊಳ್ಳುವಾಗ ಅನ್ನ ಚೆಲ್ಲಬೇಡಿ’, “ಜಾಸ್ತಿ ನೀರು ವೇಸ್ಟ್‌ ಮಾಡ್ತೀರಿ’, “ಬಾಲ್ಕನಿಯಲ್ಲಿ ಓಡಾಡಬೇಡಿ’, “ಇಂಥ ಬಟ್ಟೆಯೆಲ್ಲ ಯಾಕೆ ಹಾಕ್ತೀರ?’… ಹೀಗೆ ಒಂದಲ್ಲಾ ಒಂದು ಕಂಪ್ಲೇಂಟ್‌. ಹಾಗಂತ ಹುಡುಗಿಯೇನಾದ್ರೂ ಚೂರು ದನಿ ಏರಿಸಿದರೆ, “ಮುಂದೆ ನೀವೆಲ್ಲ ಅದ್ಹೇಗೆ ಗಂಡನ ಮನೆಯಲ್ಲಿ ಅಡ್ಜಸ್ಟ್‌ ಆಗ್ತಿàರೋ’ ಅನ್ನುವ ಕೊಂಕು ಬೇರೆ. ಇದೊಂಥರಾ ದುಡ್ಡು ಕೊಟ್ಟು ಹೇಳಿಸಿಕೊಳ್ಳುವ ಕರ್ಮ. ಆದರೆ, ಇವೆಲ್ಲಾ ಮುಂದಿನ ಬದುಕಿಗೆ “ಅಡ್ಜಸ್ಟ್‌ಮೆಂಟ್‌’ ಪಾಠಗಳೇ!    

Advertisement

ಮೊದಲ ದಿನ ಮನೆ ಬಿಟ್ಟು ಬರುವಾಗ ಅಳುತ್ತಾ ಬಂದವರು, ಕೊನೆದಿನವೂ ಅಳುತ್ತಲೇ ಹೋಗುತ್ತಾರೆ. ಆ ಎರಡು ಅಳುವಿನ ಮಧ್ಯದ ನಗು, ಹರಟೆ, ಮುನಿಸು, ಪ್ರೀತಿ, ತಲೆಹರಟೆ, ಗೆಳೆತನ ಜೀವಮಾನದುದ್ದಕ್ಕೂ ಜೊತೆಗೆ ಬರುವ ನೆನಪಿನ ಬುತ್ತಿ. ಕನಸಿನ ಬೆನ್ನತ್ತಿಯೋ, ಅನಿವಾರ್ಯತೆಗೆ ಕಟ್ಟು ಬಿಧ್ದೋ ದೂರದೂರಿಗೆ ಬರುವ ಹಕ್ಕಿಗಳಿಗೆ ಈ ಲೇಡೀಸ್‌ ಪೇಯಿಂಗ್‌ ಗೆಸ್ಟ್‌ಗಳೇ ಆಶ್ರಯ ನೀಡುವ ಗೂಡುಗಳು. ಕೊನೆಗೆ ಗೂಡು ತೊರೆದು ಬಾನಿಗೆ ಹಾರಿದರೂ ಗೂಡಿನ ನೆನಪು ಕೊನೆಯ ತನಕ ಶಾಶ್ವತ.

ಪ್ರಿಯಾಂಕಾ ನಟಶೇಖರ್‌

Advertisement

Udayavani is now on Telegram. Click here to join our channel and stay updated with the latest news.

Next