Advertisement

ಜೀವನಚರಿತ್ರೆಯ ಮಿನುಗು

03:55 AM Jun 03, 2017 | |

ಹೌದು, ಸದ್ಯ ಬಾಲಿವುಡ್‌ನ‌ಲ್ಲಿ ಸದ್ದು ಮಾಡುತ್ತಿರುವ ಚಿತ್ರಗಳು ಖ್ಯಾತ ಕ್ರೀಡಾಪಟುಗಳ ಜೀವನಚರಿತ್ರೆ ಆಧಾರಿತ ಚಿತ್ರಗಳು ಅನ್ನುವುದು ವಿಶೇಷ. ಕ್ರೀಡಾಪಟುವಿನ ಶ್ರಮ, ಆತ ನಡೆದು ಬಂದ ಹಾದಿಯ ಚಿತ್ರಣ ಚಿತ್ರದಲ್ಲಿ ತೋರಿಸುವುದರಿಂದ ಯುವ ಕ್ರೀಡಾಪಟುಗಳು ಪ್ರೇರಣೆಗೊಳ್ಳುತ್ತಿದ್ದಾರೆ. ಇದೇ ಹುಮ್ಮಸ್ಸಿನಲ್ಲಿ ಪದಕದ ಬೇಟೆಗಾಗಿ ಮತ್ತಷ್ಟು ತರಬೇತಿ ಪಡೆಯುತ್ತಿದ್ದಾರೆ. ಒಂದು ಕಡೆ ಕ್ರೀಡಾಪಟುಗಳ ಹಿನ್ನೆಲೆಯ ಚಿತ್ರಗಳು ಬಾಲಿವುಡ್‌ ಖಜಾನೆ ತುಂಬಿಸುತ್ತಿದ್ದರೆ, ಮತ್ತೂಂದು ಕಡೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗುತ್ತಿವೆ.

Advertisement

ಬಾಲಿವುಡ್‌ನ‌ಲ್ಲಿ ಈಗಾಗಲೇ “ದಂಗಲ್‌’ “ಅಜರ್‌’ “ಮೇರಿ ಕೋಮ್‌’ ಭಾಗ್‌ ಮಿಲಾV ಭಾಗ್‌’ “ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡಿವೆ. ಅದೇ ರೀತಿ ಇತ್ತೀಚೆಗೆ ಬಿಡುಗಡೆಯಾದ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಜೀವನಚರಿತ್ರೆ ಆಧಾರಿತ ಚಿತ್ರ “ದಿ ಬಿಲಿಯನ್‌ ಡ್ರೀಮ್ಸ್‌’ ಮೂರೇ ದಿನದಲ್ಲಿ 30 ಕೋಟಿ ರೂ. ಗಿಂತ ಹೆಚ್ಚಿನ ಗಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಡುಗಡೆಯಾಗಿ ಯಶಸ್ವಿಯಾಗಿರುವ ಚಿತ್ರಗಳು ಮತ್ತು ಚಿತ್ರೀಕರಣ ಹಂತದಲ್ಲಿರುವ ಚಿತ್ರಗಳತ್ತ ಒಂದು ನೋಟ.

ತಂದೆಯ ಛಲ “ದಂಗಲ್‌’ನಲ್ಲಿ ಅನಾವರಣ
ಕುಸ್ತಿಪಟು ಮಹಾವೀರ್‌ ಸಿಂಗ್‌ ಫೋಗಟ್‌ ಜೀವನಚರಿತ್ರೆ ಆಧಾರಿತ ಚಿತ್ರವೇ “ದಂಗಲ್‌’. ಖ್ಯಾತ ನಟ ಅಮೀರ್‌ ಖಾನ್‌ ಮಹಾವೀರ್‌ ಸಿಂಗ್‌ ಪಾತ್ರದಲ್ಲಿ ಅಭಿನಯಿಸಿದ್ದಾರೆ. ವಿಶ್ವಾದ್ಯಂತ 1000 ಕೋಟಿ ರೂ. ಗಿಂತ ಅಧಿಕ ಹಣವನ್ನುಗಳಿಸಿ ಇತಿಹಾಸ ನಿರ್ಮಿಸಿದೆ. ಇದು ಬಾಲಿವುಡ್‌ನ‌ಲ್ಲಿಯೇ ಅತೀ ಹೆಚ್ಚು ಗಳಿಕೆ ಕಂಡಿರುವ ಚಿತ್ರ ಎಂಬ ಖ್ಯಾತಿ ಪಡೆದಿದೆ. ಚಿತ್ರದಲ್ಲಿ ಮಹಾವೀರ್‌ ಸಿಂಗ್‌ ತನ್ನ ಹೆಣ್ಣು ಮಕ್ಕಳನ್ನು ಹೇಗೆ ಅಂತಾರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳನ್ನಾಗಿ ಮಾಡಿದ್ದಾರೆ ಅನ್ನುವುದನ್ನು ತೋರಿಸಲಾಗಿದೆ.

ಮಿಲ್ಖಾ ಸಿಂಗ್‌ “ಭಾಗ್‌ ಮಿಲ್ಖಾಭಾಗ್‌’
ಓಟಗಾರನಾಗಿರುವ ಮಿಲ್ಖಾ ಸಿಂಗ್‌ ಕೂದಲೆಳೆಯ ಅಂತರದಲ್ಲಿ ಒಲಿಂಪಿಕ್ಸ್‌ ಪದಕದಿಂದ ವಂಚಿತರಾದವರು. ಅನೇಕ ಅಂತಾರಾಷ್ಟ್ರೀಯ ಪದಕವನ್ನು ಪಡೆಯುವ ಮೂಲಕ ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದವರು. ಇವರ ಜೀವನಚರಿತ್ರೆ ಚಿತ್ರವೇ “ಭಾಗ್‌ ಮಿಲಾV ಭಾಗ್‌’. ಮಿಲಾV ಸಿಂಗ್‌ ಪಾತ್ರದಲ್ಲಿ ನಟ ಫ‌ರಾನ್‌ ಅಕ್ತರ್‌ ಅಭಿನಯಿಸಿದ್ದಾರೆ. 2013ರಲ್ಲಿ ಬಿಡುಗಡೆಯಾದ ಈ ಚಿತ್ರ ಗಳಿಕೆಯಲ್ಲಿ 150 ಕೋಟಿ ರೂ. ಅನ್ನು ದಾಟಿದೆ.

ಧೋನಿ ಚಿತ್ರವೂ ಭರ್ಜರಿ ಯಶಸ್ಸು
ಭಾರತಕ್ಕೆ ಏಕದಿನ ಮತ್ತು ಟಿ20 ವಿಶ್ವಕಪ್‌ ತಂದು ಕೊಟ್ಟ ನಾಯಕ ಎಂ.ಎಸ್‌.ಧೋನಿ. ಇವರ ಜೀವನಚರಿತ್ರೆ ಆಧಾರಿತ ಚಿತ್ರ “ಎಂ.ಎಸ್‌. ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’. ಇದರಲ್ಲಿ ಧೋನಿಯ ವಿಶೇಷ ವ್ಯಕ್ತಿತ್ವದ ಪರಿಚಯ ಅಭಿಮಾನಿಗಳಿಗೆ ಸಿಕ್ಕಿದೆ. ಧೋನಿಯ ಮೊದಲ ಪ್ರೀಯತಮೆ ಯಾರು? ಧೋನಿಗೆ ಹೆಲಿಕ್ಯಾಪ್ಟರ್‌ ಶಾಟ್‌ ಹೇಳಿಕೊಟ್ಟವರು ಯಾರು? ಇದೆಲ್ಲದಕ್ಕೂ ಉತ್ತರ ಆ ಚಿತ್ರದಲ್ಲಿತ್ತು. ಚಿತ್ರ ಸುಮಾರು 200 ಕೋಟಿ ರೂ. ಗಳಿಸಿದೆ.

Advertisement

ಮೇರಿ ಕೋಮ್‌ ಆಗಿದ್ದ ಪ್ರಿಯಾಂಕ
ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ ಬಾಕ್ಸರ್‌ ಮೇರಿ ಕೋಮ್‌ ಜೀವನಚರಿತ್ರೆ ಚಿತ್ರದಲ್ಲಿ ಅವರ ಶ್ರಮ, ಛಲ ಹೇಗಿತ್ತು ಅನ್ನುವುದನ್ನು ತೋರಿಸಲಾಗಿದೆ. ಮೇರಿ ಕೋಮ್‌ ಆಗಿ ಪ್ರಿಯಾಂಕ ಚೋಪ್ರಾ ಭರ್ಜರಿ ಮಿಂಚಿದ್ದಾರೆ. 2014ರಲ್ಲಿ ಬಿಡುಗಡೆಯಾದ ಈ ಚಿತ್ರ 100 ಕೋಟಿ ರೂ.ಗಿಂತ ಹೆಚ್ಚಿನ ಹಣಗಳಿಸಿರುವುದು ವಿಶೇಷ. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಲಿದೆ.

ಇನ್ನಷ್ಟು ಚಿತ್ರಗಳು ತೆರೆಗೆ ಸಿದ್ಧ
ಬೆಳ್ಳಿ ತೆರೆಗೆ ಅಪ್ಪಳಿಸಲು ಕ್ರೀಡಾ ಹಿನ್ನೆಲೆಯ ಇನ್ನಷ್ಟು ಚಿತ್ರಗಳು ಸಿದ್ಧತೆಯಲ್ಲಿವೆ. ರಿಯೋ ಒಲಿಂಪಿಕ್ಸ್‌ ಬೆಳ್ಳಿ ಪದಕ ವಿಜೇತೆ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ.ಸಿಂಧು, ಲಂಡನ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮರಿಯಪ್ಪನ್‌ ತಂಗವೇಲು ಜೀವನಚರಿತ್ರೆ ಚಿತ್ರಗಳು ಚಿತ್ರೀಕರಣದ ಹಂತದಲ್ಲಿವೆ. ಕ್ರಿಕೆಟಿಗರಾದ ಸೌರವ್‌ ಗಂಗೂಲಿ, ರಾಹುಲ್‌ ದ್ರಾವಿಡ್‌ ಕುರಿತು ಚಿತ್ರಗಳು ನಿರ್ಮಾಣವಾಗುವ ಮಾತುಗಳು ಕೇಳಿಬರುತ್ತಿವೆ. ಹೀಗೆ ಚಲನಚಿತ್ರಗಳು ಬಾಕ್ಸ್‌ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ಜತೆಗೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗುವುದು ಪ್ರಶಂಸನೀಯ.

Advertisement

Udayavani is now on Telegram. Click here to join our channel and stay updated with the latest news.

Next