ಲಕ್ನೋ: ಕೆಲ ಪುಂಡರು ಬೈಕ್ ನಲ್ಲಿ ಸಾಹಸಮಯ ಸ್ಟಂಟ್ ಗಳ ಹುಚ್ಚಾಟ ಮೆರೆಯುದುಂಟು. ಸ್ಟಂಟ್ ಗಳನ್ನು ಮಾಡಿ ಅದರ ವಿಡಿಯೋ ಕ್ಲಿಪ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಇಂಥದ್ದೇ ಅಪಾಯಕಾರಿ ಬೈಕ್ ಪಯಣದ ವಿಡಿಯೋ ಇತ್ತೀಚೆಗೆ ಉತ್ತರ ಪ್ರದೇಶದ ಬರೇಲಿಯಲ್ಲಿ ಕಂಡು ಬಂದಿತ್ತು. ಒಂದು ಬೈಕ್ ನಲ್ಲಿ 6 ಜನ, ಇನ್ನೆರೆಡು ಬೈಕ್ ನಲ್ಲಿ 4 ಜನ ಕಿರುಚುತ್ತಾ ಜಾಲಿ ಮಾಡುತ್ತಾ ಸಂಚರಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಈ ರೀತಿ ಬೈಕ್ ನಲ್ಲಿ ಪಯಣಿಸುವುದು ಅಪಾಯಕಾರಿ ಆದ್ದರಿಂದ ಬರೇಲಿಯ ಡಿಯೋರಾನಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರು ವೈರಲ್ ಆದ ವಿಡಿಯೋವನ್ನು ಪರಿಶೀಲಿಸಿ ಬೈಕ್ ಗಳನ್ನು ಜಪ್ತಿ ಮಾಡಿದ್ದಾರೆ.
ಈ ರೀತಿಯಾಗಿ ಬೈಕ್ ನಲ್ಲಿ ಸಂಚರಿಸಿದ ಜನರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ತಕ್ಕ ಕಾನೂನು ಕ್ರಮವನ್ನು ಕೈಗೊಳ್ಳಲಾಗುದೆಂದು ಪೊಲೀಸರು ಹೇಳಿದ್ದಾರೆ.