Advertisement

ಸುರತ್ಕಲ್ ಪ್ರತ್ಯೇಕ ಅಪಘಾತ: ಪಿಕಪ್ ಪಲ್ಟಿ, ಕಾರಿಗೆ ಗುದ್ದಿದ ಲಾರಿ

08:07 AM Mar 07, 2019 | |

ಸುರತ್ಕಲ್: ಪೊಲೀಸರ ಸೂಚನೆಯನ್ನು ನಿರ್ಲಕ್ಷಿಸಿ ವೇಗವಾಗಿ ಹೋದ ಪಿಕಪ್ ವಾಹನವೊಂದು ಪಲ್ಟಿಯಾದ ಘಟನೆ ಗುರುವಾರ ಮಧ್ಯಾಹ್ನ ಮಂಗಳೂರಿನ ಕೂಳೂರಿನಲ್ಲಿ ನಡೆದಿದೆ. ಇನ್ನೊಂದು ಪ್ರಕರಣದಲ್ಲಿ ಸ್ಟಿಯರಿಂಗ್ ತುಂಡಾದ ಕಾರಣ ಲಾರಿಯೊಂದು ಟ್ಯಾಂಕರ್ ಮತ್ತು ಕಾರಿಗೆ ಗುದ್ದಿದ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. 

Advertisement

ಉಡುಪಿಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಪಿಕಪ್ ವಾಹನವನ್ನು ನಿಲ್ಲಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಚಾಲಕ ನಿಲ್ಲಿಸಿದೆ ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದುಕೂಳೂರಿನಲ್ಲಿ ವಾಹನ ಪಲ್ಟಿಯಾಗಿದೆ. ಚಾಲಕನ್ನು ಜನರು ಹಿಡಿದು ಪೊಲೀಸರಿಗೆ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. 


ಸರಣಿ ಅಪಘಾತ ನಡೆಸಿದ ಲಾರಿ:
ಉಡುಪಿ- ಮಂಗಳೂರು ಹೆದ್ದಾರಿಯಲ್ಲಿ ಮಂಗಳೂರು ಕಡೆ ಸಾಗುತತಿದ್ದ ಲಾರಿಯೊಂದು ಸ್ಟಿಯರಿಂಗ್ ತುಂಡಾಗಿ ಸರಣಿ ಅಪಘಾತಕ್ಕೆ ಕಾರಣವಾಗಿದೆ. 

ಸ್ಟಿಯರಿಂಗ್ ತುಂಡಾದ ಕಾರಣ ಸುರತ್ಕಲ್ ನ ಹೊಸಬೆಟ್ಟು ಮತ್ತು ಬೈಕಂಪಾಡಿಯಲ್ಲಿ ಒಂದು ಕಾರು ಮತ್ತು ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಯಾವುದೇ ಜೀವಹಾನಿಯ ಬಗ್ಗೆ ವರದಿಯಾಗಿಲ್ಲ. ಮಂಗಳೂರು ಉತ್ತರ ಸಂಚಾರಿ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next