Advertisement

B.C. Road ಬಸ್‌ ನಿಲ್ದಾಣದಲ್ಲಿ ಪಿಕ್‌ ಪಾಕೆಟ್‌ 4 ಸಾವಿರ ರೂ. ಕಳೆದುಕೊಂಡ ಮಹಿಳೆ

01:26 AM Jan 11, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡು ಬಸ್‌ ನಿಲ್ದಾಣದಲ್ಲಿ ಪಿಕ್‌ಪಾಕೆಟ್‌ ಪ್ರಕರಣಗಳು ಮುಂದುವರಿದಿದ್ದು, ಬುಧವಾರ ಬೆಳಗ್ಗೆ ಮಹಿಳೆಯೋರ್ವಳ ಬ್ಯಾಗ್‌ನಿಂದ ಸುಮಾರು 4 ಸಾವಿರ ರೂ. ಲಪಟಾಯಿಸಿದ ಘಟನೆ ನಡೆದಿದ್ದು, ಈ ಕುರಿತು ಬಂಟ್ವಾಳ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

Advertisement

ಬೋಳಿಯಾರು ನಿವಾಸಿ ಪ್ರೇಮ ಅವರು ಹಣ ಕಳೆದುಕೊಂಡವರು. ಅವರು ಊರಿನಿಂದ ಬಂದು ಬಿ.ಸಿ.ರೋಡಿನಲ್ಲಿ ಮಗುವಿನೊಂದಿಗೆ ಧರ್ಮಸ್ಥಳಕ್ಕೆ ಹೋಗುವ ಬಸ್ಸಿಗೆ ಹತ್ತುವ ವೇಳೆ ಘಟನೆ ನಡೆದಿದೆ.

ಬಸ್‌ ನಿಲ್ದಾಣದಲ್ಲಿ ಪಿಕ್‌ ಪಾಕೆಟ್‌ ದಂಧೆ ನಿರಂತರವಾಗಿ ನಡೆಯುತ್ತಿದ್ದು, ಈಗಾಗಲೇ ಹಲವಾರು ಪ್ರಕರಣಗಳು ದಾಖಲಾಗಿವೆ. ಕಳೆದ ವಾರ ಒಂದೇ ದಿನ ಯುವತಿಯರಿಬ್ಬರ ಮೊಬೈಲ್‌ ಕದ್ದ ‌ ಘಟನೆ ನಡೆದಿತ್ತು. ಬಸ್‌ ನಿಲ್ದಾಣ ಪರಿಸರದಲ್ಲಿ ಸಿಸಿ ಕೆಮರಾ ಇಲ್ಲದೇ ಇರುವುದು ಘಟನೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next