Advertisement

ಪಿಕಾರ್ಡ್‌ ಬ್ಯಾಂಕ್‌ ಚುನಾವಣೆ: ನಾಮಪತ್ರ ವಾಪಸ್‌ಗೆ ಹರಸಾಹಸ

09:09 PM Jan 22, 2020 | Lakshmi GovindaRaj |

ಶಿಡ್ಲಘಟ್ಟ: ವಿಧಾನಸಭಾ ಕ್ಷೇತ್ರದಲ್ಲಿ ಮಹತ್ವ ಪಡೆದಿರುವ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌(ಪಿಕಾರ್ಡ್‌) ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ರಂಗೇರುತ್ತಿದ್ದು ನಾಮಪತ್ರ ವಾಪಸ್‌ ಪಡೆಯುವ ಬುಧವಾರ ಸ್ಪರ್ಧಿಗಳಿಂದ ನಾಮಪತ್ರ ವಾಪಸ್‌ ತೆಗೆಸಲು ಇನ್ನಿತರರು ಪ್ರಯಾಸಪಟ್ಟರು.

Advertisement

ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾದ ಬುಧವಾರ ಬ್ಯಾಂಕ್‌ನಲ್ಲಿ ವಿವಿಧ ಪಕ್ಷಗಳ ಮುಖಂಡರು, ಅಧಿಕೃತ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಅಭ್ಯರ್ಥಿಗಳ ನಾಮಪತ್ರ ವಾಪಸ್‌ ತೆಗೆಸಿದರು. ಪಿಕಾರ್ಡ್‌ ಬ್ಯಾಂಕಿನ ಚುನಾವಣೆಗೆ ಒಟ್ಟು 51 ನಾಮಪತ್ರ ಸಲ್ಲಿಸಿದ್ದರು.

ಬಳಿಕ, ನಾಮಪತ್ರ ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ ಬಳಿಕ ಒಂದಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳು ನಾಮಪತ್ರ ವಾಪಸ್‌ ಪಡೆದುಕೊಂಡರು. ಇದರಿಂದ ಕಣದಲ್ಲಿ 40 ಮಂದಿ ಅಭ್ಯರ್ಥಿಗಳು ಉಳಿದುಕೊಂಡಿದ್ದರು. ನಾಮಪತ್ರ ವಾಪಸ್‌ಗೆ ಕೊನೇ ದಿನವಾದ ಬುಧವಾರ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬ್ಯಾಂಕಿನತ್ತ ದೌಡಾಯಿಸಿ ಹೆಚ್ಚುವರಿ ಅಭ್ಯರ್ಥಿಗಳ ಉಮೇದುವಾರಿಕೆ ಹಿಂದಕ್ಕೆ ಪಡೆಯಲು ಅಂತಿಮ ಕಸರತ್ತು ನಡೆಸಿದರು.

ಬ್ಯಾಂಕ್‌ನ ಅಧ್ಯಕ್ಷರಾಗಿರುವ ಕಾಳನಾಯಕನಹಳ್ಳಿ ಭೀಮೇಶ್‌ ಮತ್ತೂಮ್ಮೆ ಜಂಗಮಕೋಟೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಇದರಿಂದಾಗಿ ಚುನಾವಣೆ ಕಾವೇರಿದೆ. ಮತ್ತೂಂದಡೆ ಉಪಾಧ್ಯಕ್ಷ ಮಾದೇನಹಳ್ಳಿ ರವಿ ಮತ್ತೂಮ್ಮೆ ಗಂಜಿಗುಂಟೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಬ್ಯಾಂಕ್‌ನಲ್ಲಿ ಹಿರಿಯ ಸಹಕಾರಿ ಧುರೀಣ ಮಾಜಿ ಅಧ್ಯಕ್ಷ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ 9ನೇ ಬಾರಿಗೆ ಬ್ಯಾಂಕಿನ ನಿರ್ದೇಶಕರಾಗಲು ಸ್ಪರ್ಧಿಸಿದ್ದಾರೆ. ಕ್ಷೇತ್ರದ ಶಾಸಕ ವಿ.ಮುನಿಯಪ್ಪ ಅವರ ಸೂಚನೆ ಮೇರೆಗೆ ತಿಮ್ಮನಾಯಕನಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಕೆ.ಆನಂದ್‌, ತಲಕಾಯಲಬೆಟ್ಟ ಗ್ರಾಪಂ ಸದಸ್ಯ ಶ್ರೀರಂಗಪ್ಪ ದಿಬ್ಬೂರಹಳ್ಳಿ ಕ್ಷೇತ್ರದಿಂದ ಉಮೇದುವಾರಿಕೆ ವಾಪಸ್‌ ಪಡೆದರು.

Advertisement

ಅವಿರೋಧ ಆಯ್ಕೆ: ಆನೂರು ಮೀಸಲು ಕ್ಷೇತ್ರದಿಂದ ಜೆಡಿಎಸ್‌ ಮುಖಂಡ ಬಂಕ್‌ ಮುನಿಯಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ದಯಾನಂದ್‌ ಘೋಷಿಸಿದ್ದಾರೆ.

27 ಅಭ್ಯರ್ಥಿಗಳು ಕಣದಲ್ಲಿ: ಶಿಡ್ಲಘಟ್ಟ ಟೌನ್‌ ಬಿಸಿಎಂ(ಬಿ) ಕ್ಷೇತ್ರದಿಂದ ಅಪ್ಪೇಗೌಡನಹಳ್ಳಿ ಮಂಜುನಾಥ್‌, ಹರಳಹಳ್ಳಿ ಎಚ್‌.ಎನ್‌.ವೆಂಕಟೇಶಪ್ಪ, ಅಬ್ಲೂಡು ಕ್ಷೇತ್ರದಿಂದ ಗುಡಿಹಳ್ಳಿ ಚಂದ್ರನಾಥ್‌, ಸಿ.ಕೆ.ನಾರಾಯಣಸ್ವಾಮಿ, ಮೇಲೂರು ಕ್ಷೇತ್ರದಿಂದ ಮುತ್ತೂರಿನ ಎಂ.ವಿ.ಗೋಪಾಲಪ್ಪ, ಮೇಲೂರಿನ ಆರ್‌.ಬಿ.ಜಯದೇವ್‌, ಜಂಗಮಕೋಟೆ ಕ್ಷೇತ್ರದಿಂದ ಕಾಳನಾಯಕನಹಳ್ಳಿ ಕೆ.ಎಂ.ಭೀಮೇಶ್‌, ದೇವೇನಹಳ್ಳಿ ಮಾರಪ್ಪ,ದಿಬ್ಬೂರಹಳ್ಳಿ ಕ್ಷೇತ್ರದಿಂದ ರಾಯಪ್ಪನಹಳ್ಳಿ ಅಶ್ವತ್ಥನಾರಾಯಣರೆಡ್ಡಿ,

ಡಿ.ಸಿ.ರಾಮಚಂದ್ರ,ದೊಡ್ಡತೇಕಹಳ್ಳಿ ಕ್ಷೇತ್ರದಿಂದ ಲಗಿನಾಯಕನಹಳ್ಳಿ ಸಿ.ನಾರಾಯಣಸ್ವಾಮಿ, ದನಮಿಟ್ಟೇನಹಳ್ಳಿ ಡಿ.ಎನ್‌.ರಾಮಚಂದ್ರ, ಲಗಿನಾಯಕನಹಳ್ಳಿ ಎಲ್‌.ಎನ್‌.ಶಿವಾರೆಡ್ಡಿ, ಸಾದಲಿ ಪರಿಶಿಷ್ಟಜಾತಿ ಕ್ಷೇತ್ರದಿಂದ ನಲ್ಲಪ್ಪನಹಳ್ಳಿ ನಾರಾಯಣಪ್ಪ, ಜರುಗಹಳ್ಳಿ ಶ್ರೀನಿವಾಸ್‌, ಸಾಲಗಾರರಲ್ಲದ ಕ್ಷೇತ್ರದಿಂದ ಎಂ.ಮುರಳಿ, ಎಚ್‌.ಶಂಕರ್‌, ಚೀಮಂಗಲ ಮಹಿಳಾ ಮೀಸಲು ಕ್ಷೇತ್ರದಿಂದ ಚಿಂತಡಪಿ ಸುಜಾತಮ್ಮ,ನಾರಾಯಣದಾಸರಹಳ್ಳಿ ಸುನಂದಮ್ಮ,

ಗಂಜಿಗುಂಟೆ ಸಾಮಾನ್ಯ ಕ್ಷೇತ್ರದಿಂದ ಪೂಲಕುಂಟಹಳ್ಳಿ ಪಿ.ಆರ್‌.ದೊಡ್ಡನರಸಿಂಹರೆಡ್ಡಿ, ಮಾದೇನಹಳ್ಳಿ ಎಂ.ಪಿ.ರವಿ, ವೈ.ಹುಣಸೇನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಗೆಜ್ಜೆಗಾನಹಳ್ಳಿ ಅನಸೂಯಮ್ಮ, ಶೀಗೆಹಳ್ಳಿ ಜಯಮ್ಮ,ಮಳಮಾಚನಹಳ್ಳಿ ಸಾಮಾನ್ಯ ಕ್ಷೇತ್ರದಿಂದ ಚೊಕ್ಕಂಡಹಳ್ಳಿ ಸಿ.ವಿ.ನಾರಾಯಣಸ್ವಾಮಿ, ಮಳಮಾಚನಹಳ್ಳಿ ಕೆ.ಬೈರೇಗೌಡ, ಪಲಿಚೇರ್ಲು ಬಿಸಿಎಂ ಎ ಕ್ಷೇತ್ರದಿಂದ ಕನ್ನಪ್ಪನಹಳ್ಳಿ ಗೋವಿಂದಪ್ಪ,ದೊಗರನಾಯಕನಹಳ್ಳಿ ಡಿ.ವಿ.ವೆಂಕಟೇಶಪ್ಪ ಅಂತಿಮವಾಗಿ ಕಣದಲ್ಲಿ ಉಳಿದುಕೊಂಡಿದ್ದಾರೆ.

ಅಭ್ಯರ್ಥಿಗಳಿಗೆ ಚಿಹ್ನೆ: ಪಿಕಾರ್ಡ್‌ ಬ್ಯಾಂಕಿನ 14 ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಗೆ ಆನೂರು ಮೀಸಲು ಕ್ಷೇತ್ರದಿಂದ ಒಬ್ಬರು ಅವಿರೋಧ ಆಯ್ಕೆಯಾಗಿದ್ದು ಇನ್ನುಳಿದ 13 ಕ್ಷೇತ್ರಗಳಲ್ಲಿ ದೊಡತೇಕಹಳ್ಳಿ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಸಹಕಾರಿ ಬ್ಯಾಂಕಿನ ಚುನಾವಣೆಗೆ ಪಕ್ಷದ ಚಿಹ್ನೆ ಇಲ್ಲದಿದ್ದರೂ ಕಾಂಗ್ರೆಸ್‌ ಬೆಂಬಲಿತರು ಆಟೋ ಗುರುತು ಚಿಹ್ನೆ ಹಾಗೂ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳು ದ್ರಾಕ್ಷಿ ಚಿಹ್ನೆ ಗುರುತುಪಡೆದುಕೊಂಡಿದ್ದಾರೆ.

ಅವಿರೋಧ ಆಯ್ಕೆಗೆ ಸಂಧಾನ ವಿಫ‌ಲ: ಎಲ್ಲಾ ಪಕ್ಷಗಳು ಚುನಾವಣೆ ಬದಲಿಗೆ ಸ್ಥಾನ ಹಂಚಿಕೆ ಮಾಡಿಕೊಳ್ಳಲು ಕಾಂಗ್ರೆಸ್‌- ಜೆಡಿಎಸ್‌ ಮುಖಂಡರು ಒಂದು ಸುತ್ತು ಪ್ರಯತ್ನ ಮಾಡಿದ್ದರು. ಆದರೆ, ಒಮ್ಮತ ಬಾರದಿದ್ದರಿಂದ 13 ಸ್ಥಾನಗಳಿಗೆ ಜ.27ರಂದು ಚುನಾವಣೆ ನಡೆಯಲಿದ್ದು ಅಂದೇ ಫ‌ಲಿತಾಂಶ ಬರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next